ಬೆಂಗಳೂರು : ಸಮೃದ್ಧ ಬೆಂಗಳೂರಿಗಾಗಿ ಬೆಂಗಳೂರು ನಗರ ನಾಗರಿಕರಲ್ಲಿ ನೀರಿನ ಕುರಿತು ಅರಿವು ಮೂಡಿಸುವ ಮತ್ತು ಉಳಿತಾಯಕ್ಕೆ ಒತ್ತು ನೀಡುವ ಉದ್ದೇಶದಿಂದ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ “ನೀರು ಉಳಿಸಿ ಬೆಂಗಳೂರು ಬೆಳೆಸಿ ಅಭಿಯಾನಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವಿಧಾನಸೌಧದ ಪೂರ್ವಧ್ವಾರದ ಬಳಿ ಗುರುವಾರ ಚಾಲನೆ ನೀಡಿದರು.
ಸಮೃದ್ಧ ಬೆಂಗಳೂರಿಗೆ ನೀರು ಉಳಿಸುವ ಅಗತ್ಯತೆ ಮತ್ತು ಪ್ರಾಮುಖ್ಯತೆ ಸಾರುವ ಸಂದೇಶ, ನೀರು ಉಳಿಸುವ 08 ದಾರಿಗಳು ಸೇರಿದಂತೆ ನೀರಿನ ಸಂದೇಶ ಹೊತ್ತ ಇ-ರಿಕ್ಷಾ ವಾಹನಗಳಿಗೆ ಇದೇ ಸಂದರ್ಭದಲ್ಲಿ ಹಸಿರು ನಿಶಾನೆ ತೋರಿದರು. ಸದರಿ ಇ-ರಿಕ್ಷಾ ವಾಹನಗಳು ಅಭಿಯಾನದ ಸಂದೇಶ ಹೊತ್ತು ಇಡೀ ಬೆಂಗಳೂರು ನಗರದಾದ್ಯಂತ ಸಂಚರಿಸಿ ಅರಿವು ಮೂಡಿಸಲಿವೆ.
ಇದೇ ಸಂದರ್ಭದಲ್ಲಿ ಬೆಂಗಳೂರಿಗರ ಅನುಕೂಲಕ್ಕಾಗಿ ಬೆಂಗಳೂರು ಜಲಮಂಡಳಿ ಸೃಜಿಸಿದ ನಾಲ್ಕು ಆ್ಯಪ್‍ಗಳನ್ನು ಸಹ ಲೋಕಾರ್ಪಣೆ ಮಾಡಿದರು. ಸಂಸ್ಕರಿಸಿದ ನೀರನ್ನು ಸಾರ್ವಜನಿಕರು ಕುಡಿಯುವುದನ್ನು ಹೊರತುಪಡಿಸಿ ಇನ್ನಿತರೆ ಕಾರ್ಯಗಳಿಗೆ ಮರುಬಳಕೆ ಮಾಡಲು ಕಾಯ್ದಿರಿಸಿ ಸರಬರಾಜು ಪಡೆಯಬಹುದಾದ ಜಲಸ್ನೇಹಿ ಆ್ಯಪ್. ಅಂತರ್ಜಲ ಎಂಬ ಆ್ಯಪ್ ಮೂಲಕ ಬೆಂಗಳೂರು ನಗರದ ನಾಗರಿಕರು ತಮ್ಮ ಮನೆಯಲ್ಲಿಯೇ ಆ್ಯಪ್ ಮೂಲಕ ಕೊಳವೆಬಾವಿಯ ಅನುಮತಿ ಪಡೆಯಲು ಅರ್ಜಿ ಸಲ್ಲಿಸಬಹುದು;ತಾಂತ್ರಿಕ ಸಮಿತಿ ವರದಿ ಪರಿಶೀಲಿಸಿ ನಿರಾಪೇಕ್ಷಣಾ ಪತ್ರವನ್ನು ಮಂಡಳಿ ಒದಗಿಸಲಿದೆ.
ಅನ್ಯ ಉದ್ದೇಶಕ್ಕೆ ಕುಡಿಯುವ ನೀರು ಬಳಸುವುದನ್ನು ಮಂಡಳಿ ಈಗಾಗಲೇ ನಿμÉೀಧಿಸಲಾಗಿದ್ದು, ನೀμÉೀಧ ಮಾಡಿದ್ದು ಉಲ್ಲಂಘನೆ ಮಾಡುತ್ತಿರುವ ಪ್ರಕರಣಗಳು ಕಂಡುಬಂದಲ್ಲಿ ಸ್ಥಳದಲ್ಲಿಯೇ ದಂಡ ವಿಧಿಸುವ ಜಲಸಂರಕ್ಷಕ ಆ್ಯಪ್.
ಬೆಂಗಳೂರು ನಗರ ವ್ಯಾಪ್ತಿಯಲ್ಲಿ ನೀರು ಸೋರಿಕೆ, ಒಳಚರಂಡಿ ನೀರು ಉಕ್ಕಿ ಹರಿಯುವುದು, ಜಲಮಂಡಳಿಯ ಅವಶ್ಯ ದಾಖಲಾತಿಗಳ ಸವೆ ಮಾಡಲು ಹಾಗೂ ಇನ್ನೀತರೆ ಕಾರ್ಯಗಳಿಗೆ ಸ್ವಯಂ ಸೇವೆ ಇಚ್ಚಿಸುವ ನಾಗರಿಕರು/ಎನ್‍ಜಿಒ/ನಿವೃತ್ತ ತಾಂತ್ರಿಕ ಸಿಬ್ಬಂದಿಗಳ ನೋಂದಣಿಗಾಗಿ ಜಲಮಿತ್ರ ಆ್ಯಪ್ ಮಾಡಲಾಗಿದೆ. ಈ ಆ್ಯಪ್‍ಗಳನ್ನು ಬೆಂಗಳೂರಿಗರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೋರಿದರು.
ಈ ಸಂದರ್ಭದಲ್ಲಿ ಶಾಸಕರಾದ ಅಶೋಕ್ ಮನಗೂಳಿ, ಬಸವರಾಜ್ ಶಿವಗಂಗಾ, ಅಪರ ಮುಖ್ಯ ಕಾರ್ಯದರ್ಶಿಗಳಾದ ರಾಕೇಶ್ ಸಿಂಗ್, ಬೆಂಗಳೂರು ಜಲಮಂಡಳಿಯ ಅಧ್ಯಕ್ಷ ಡಾ.ವಿ.ರಾಮ್ ಪ್ರಸಾತ್ ಮನೋಹರ್, ಬಿಎಂಆರ್‍ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರರಾವ್, ಬೆಂಗಳೂರು ಜಲಮಂಡಳಿಯ ಎಂಜನಿಯರ್‍ಗಳು ಹಾಗೂ ಅಧಿಕಾರಿಗಳು ಸೇರಿದಂತೆ ಇನ್ನೀತರರು ಇದ್ದರು.