ಬೆಂಗಳೂರು : ಕರ್ನಾಟಕ ಪಬ್ಲಿಕ್ ಶಾಲೆಗಳ ಪೂರ್ವ ಪ್ರಾಥಮಿಕ ಅತಿಥಿ ಶಿಕ್ಷಕಿಯರಿಗೆ ಗೌರವ ಸಂಭಾವನೆ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಮೇಲ್ಕಂಡ ವಿಷಯ ಹಾಗೂ ಉಲ್ಲೇಖಕ್ಕೆ ಸಂಬಂಧಿಸಿದಂತೆ, ಕರ್ನಾಟಕ ರಾಜ್ಯ ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೂರ್ವ ಪ್ರಾಥಮಿಕ ಅತಿಥಿ ಶಿಕ್ಷಕಿಯರಿಗೆ ಗೌರವ ಸಂಭಾವನೆಯನ್ನು ಉಲ್ಲೇಖಿತ ಸರ್ಕಾರಿ ಆದೇಶದನ್ವಯ ಮಾಸಿಕವಾಗಿ ರೂ.7,500/- ರಿಂದ ರೂ.10,000/- ಗಳಿಗೆ ಹೆಚ್ಚಿಸಿ ಆದೇಶಿಸಲಾಗಿದೆ.
ಅದರಂತೆ ಈ ಕೆಳಗೆ ನೀಡಿರುವ ಮಾಹಿತಿಯಂತೆ ತಮ್ಮ ಕಛೇರಿಯಿಂದ ಶಾಲಾ ನಿರ್ವಹಣಾ ವೆಚ್ಚವನ್ನು ನೀಡುತ್ತಿರುವುದರಿಂದ, ಸರ್ಕಾರಿ ಆದೇಶದನ್ವಯ ಕ್ರಮಕೈಗೊಳ್ಳುವಂತೆ ಸಂಬಂಧಿಸಿದವರಿಗೆ ಸೂಚಿಸಲು ಈ ಮೂಲಕ ಕೋರಿದೆ.