ಬಹುತೇಕರಿಗೆ ಹೊಸ ಚಪ್ಪಲಿಯಿಂದ ಹಾಕಲು ಆರಂಭಿಸಿದಾಗ ಕಾಲಿನಲ್ಲಿ ಗಾಯಗಳಾಗುತ್ತದೆ. ಚಪ್ಪಲಿಯಿಂದ ಆದ ಗಾಯ ವಿಪರೀತ ನೋವು ಇರುತ್ತದೆ. ಆದರೆ ಚಪ್ಪಲಿಯಿಂದ ಆದ ಗಾಯವನ್ನು ನಿವಾರಿಸಲು ನೀಡುವ ಮನೆಯಲ್ಲಿಯೇ ಕೆಲವು ಉಪಾಯವನ್ನು ಮಾಡಬಹುದು.
ಚಪ್ಪಲಿಯಿಂದ ಪಾದಗಳಲ್ಲಿ ಗುಳ್ಳೆಗಳು ಪ್ರಾರಂಭವಾಗುತ್ತವೆ. ಕೆಲವೊಮ್ಮೆ ನೋವು ಸಹಿಸಲಾಗದಷ್ಟು ಇರುತ್ತದೆ. ಗಾಯ ದೊಡ್ಡದಾಗುವಾಗ ನಾಲ್ಕೈದು ದಿನಗಳ ಕಾಲ ನೋವು ಹಾಗೇ ಇರುತ್ತದೆ. ಟೂತ್ಪೇಸ್ಟ್ ಬಳಸುವುದರಿಂದ ಚಪ್ಪಲಿ ಕಚ್ಚಿ ಆದ ಗಾಯವನ್ನು ನಿವಾರಿಸಬಹುದು. ಟೂತ್ಪೇಸ್ಟ್
ಸುಟ್ಟಗಾಯಗಳ ಮೇಲೆ ಬಳಸಲಾಗುವ ಔಷಧವಾಗಿದೆ. ಯಾವುದೇ ಗಾಯದ ಮೇಲೆ ಇದನ್ನು ಹಚ್ಚಿದ್ರೆ ಸುಲಭವಾಗಿ ಪರಿಹಾರ ನೀಡುತ್ತದೆ. ಇದರಲ್ಲಿ ಕಂಡುಬರುವ ಅಡಿಗೆ ಸೋಡಾ, ಮೆಂಥಾಲ್, ಪೆರಾಕ್ಸೈಡ್ ನಿಮ್ಮ ಗಾಯಗಳನ್ನು ಗುಣಪಡಿಸುವ ಶಕ್ತಿ ಹೊಂದಿದೆ. ಹಾಗಾಗಿ ಚಪ್ಪಲಿ ಕಚ್ಚಿ ಗಾಯವಾದಾಗ ಟೂತ್ಪೇಸ್ಟ್ ಹಚ್ಚಬೇಕು.
ಅಲೋ ವೆರಾ ಜೆಲ್ ಕೂಡ ಉತ್ತಮ ಔಷಧೀಯ ಗುಣಗಳನ್ನು ಹೊಂದಿದೆ. ಪಾದದಲ್ಲಿ ಗಾಯವಾದ ತಕ್ಷಣ ಉರಿ ಹೆಚ್ಚಾಗುತ್ತದೆ. ಈ ಸಮಸ್ಯೆಯನ್ನು ಪರಿಹರಿಸಲು ಅಲೋವೆರಾವನ್ನು ಬಳಸುವುದು ಉತ್ತಮ. ಅನೇಕ ಸಮಸ್ಯೆಗೆ ಅಲೋವೆರಾ ಮದ್ದು. ಚಪ್ಪಲಿ ಕಚ್ಚಿ ಗಾಯವಾದ ಪಾದಗಳಿಗೆ ಅಥವಾ ಗಾಯದ ಮೇಲೆ ಅಲೋವೆರಾವನ್ನು ಹಚ್ಚಿಕೊಳ್ಳಬೇಕು ಇದರಿಂದ ಗಾಯಗಳು ಬೇಗ ಶಮನವಾಗುತ್ತವೆ.
ಚಪ್ಪಲಿಯಿಂದ ಆದ ಗಾಯಕ್ಕೆ ಜೇನುತುಪ್ಪವನ್ನು ಬಳಸುವುದರಿಂದ ಉತ್ತಮ ಪ್ರಯೋಜನವಿದೆ. ದೇಹದ ಯಾವುದೇ ಭಾಗದಲ್ಲಿ ಗಾಯವಾದರೂ ಕೂಡ ಅದಕ್ಕೆ ಜೇನುತುಪ್ಪವನ್ನು ಬಳಸಬೇಕು. ಗಾಯ ಗುಣಪಡಿಸಲು ಜೇನುತುಪ್ಪವು ತುಂಬಾ ಪ್ರಯೋಜನಕಾರಿಯಾಗಿದೆ. ಯಾವುದೇ ನೋವಿನಿಂದ ಮುಕ್ತಿ ಪಡೆಯಲು ಇದು ಉತ್ತಮವಾಗಿ ಸಹಾಯ ಮಾಡುತ್ತದೆ. ಆಲಿವ್ ಎಣ್ಣೆಯನ್ನು ಜೇನುತುಪ್ಪದೊಂದಿಗೆ ಬೆರೆಸಿ ಗಾಯದ ಮೇಲೆ ಹಚ್ಚಬೇಕು ಹಾಗೆ ಚಪ್ಪಲಿ ಕಚ್ಚಿದ ಗಾಯದ ಜಾಗಕ್ಕೂ ಕೂಡ ಇದನ್ನು ಬಳಸಬಹುದು.ಇದರಿಂದ ಉತ್ತಮ ಫಲಿತಾಂಶ ದೊರೆಯುತ್ತದೆ.
ತೆಂಗಿನ ಎಣ್ಣೆಯನ್ನು ಕೂಡ ಬಳಸಹುದಾಗಿದೆ.
ಕಾಲುಗಳ ಮೇಲಿನ ಗಾಯಗಳಿಗೆ ತೆಂಗಿನ ಎಣ್ಣೆಯನ್ನು ಸಹ ಬಳಸಬಹುದಾಗಿದೆ ಚಪ್ಪಲಿ ಕಚ್ಚಿದ ಗಾಯದ ಮೇಲೆ ಎಣ್ಣೆ ಹಚ್ಚಿ ನಿಧಾನವಾಗಿ ಮಸಾಜ್ ಮಾಡಬೇಕು ಇದರಿಂದ ಗಾಯ ಬೇಗ ಗುಣವಾಗುತ್ತದೆ.