ಬೆಂಗಳೂರು: ಕರ್ನಾಟಕದ ಕೆಲ ಜಿಲ್ಲೆಗಳು ಸೇರಿದಂತೆ ದೇಶಾಧ್ಯಂತ ಮುಂದಿನ 48 ಗಂಟೆ ಅವಧಿಯಲ್ಲಿ ಭಾರೀ ತಾಪಮಾನ, ಬಿಸಿಗಾಳಿ ಇರಲಿದೆ. ಜನರು ಎಚ್ಚರಿಕೆಯಿಂದ ಇರುವಂತೆ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈ ಕುರಿತಂತೆ ಮಾಹಿತಿ ಬಿಡುಗಡೆ ಮಾಡಿರುವಂತ ಹವಾಮಾನ ಇಲಾಖೆಯು, ಮುಂದಿನ 48 ಗಂಟೆಯ ಅವಧಿಯಲ್ಲಿ ಭಾರೀ ತಾಪಮಾನ ಹೆಚ್ಚಳ ಉಂಟಾಗಲಿದೆ. ಜೊತೆಗೆ ಬಿಸಿಗಾಳಿ ಕೂಡ ಬೀಸಲಿದೆ ಎಂಬುದಾಗಿ ಎಚ್ಚರಿಕೆ ನೀಡಿದೆ.
ರಾಜ್ಯದ ಉತ್ತರ ಒಳನಾಡಿನ ಹಲವೆಡೆ ಅತ್ಯಧಿಕ ತಾಪಮಾನ ಇರಲಿದೆ. ಕಲಬುರ್ಗಿ, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಯಲ್ಲಿ ಅತ್ಯಧಿಕ ತಾಪಮಾನದ ಎಚ್ಚರಿಕೆಯನ್ನು ಹವಾಮಾನ ಇಲಾಖೆ ಮುನ್ಸೂಚನೆಯಲ್ಲಿ ತಿಳಿಸಿದೆ.
ಸೋ ರಾಜ್ಯದ ಜನರು ಮುಂದಿನ 48 ಗಂಟೆಯವರೆಗೆ ಎಚ್ಚರಿಕೆ ವಹಿಸಬೇಕು. ಮನೆಯಿಂದ ಹೊರಗೆ ಓಡಾಡುವುದನ್ನು ತಪ್ಪಿಸಿ. ಮನೆಯಲ್ಲೇ ಇದ್ದೂ ಹೆಚ್ಚು ನೀರು, ಜ್ಯೂಸ್ ಕುಡಿಯೋದು ಮರೆಯಬೇಡಿ. ಈ ಮೂಲಕ ದೇಹವನ್ನು ನೀರಿನ ಅಂಶದಿಂದ ಇರಿಸಿ.
ತಪ್ಪು ತಿದ್ದಿಕೊಳ್ಳಲು ಅವಕಾಶ ಕೊಡಿ: ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಭಾವುಕ ನುಡಿ