ಮಂಡ್ಯ: HDK ಹೊಟ್ಟೆ ಪಾಡಿಗಾಗಿ ಪಕ್ಷದ ಅಸ್ತಿತ್ವಕ್ಕಾಗಿ ಬಿಜೆಪಿ ಪಕ್ಷಕ್ಕೆ ಹೋಗವ್ರೆ ಎಂಬುದಾಗಿ ಸಚಿವ ಚಲುವರಾಯಸ್ವಾಮಿ ಅವರು ವ್ಯಂಗ್ಯವಾಡಿದ್ದಾರೆ.
ಮಂಡ್ಯದ ನಾಗಮಂಗಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಚೆಡಿಎಸ್ ಸೆಲ್ಯುಲರ್ ಪಕ್ಷ. ಜಾತ್ಯಾತೀತ ಅಂತ ಹೇಳ್ತಿದ್ದರು. ಆದೇನಾಯ್ತು ಈಗ ಎಂಬುದಾಗಿ ಪ್ರಶ್ನಿಸಿದರು.
ಪಾಪ ಈಗ ಕೋಮುವಾಗಿ ಬಿಜೆಪಿ ಪಕ್ಷದ ಜೊತೆಗೆ ಅವ್ರು ಸೇರಿಕೊಂಡಿದ್ದಾರೆ. ಈ ಮೊದಲು ದೇವೇಗೌಡ್ರು ಮೋದಿ ಪ್ರಧಾನಿ ಆದ್ರೆ ದೇಶ ಬಿಟ್ಟೋಗ್ತೀನಿ ಅಂದಿದ್ರು. ಮುಂದಿನ ಜನ್ಮಕ್ಕೆ ಮುಸ್ಲಿಂ ಆಗಿ ಹುಟ್ಬೇಕು ಅಂತಿದ್ರು ಏನಾಯ್ತು ಅವೆಲ್ಲ ಎಂದು ಕೇಳಿದರು.
ಪಾಪ ಕುಮಾರಸ್ವಾಮಿ ಅದೆಷ್ಟು ಸಾರಿ ಬಿಜೆಪಿ, ಆರ್ ಎಸ್ಎಸ್, ಭಜರಂಗದಳಕ್ಕೆ ಬಯ್ದಿದ್ದಾರೆ. ಆದ್ರೇ ಅವರೇ ಹೊಟ್ಟೇಪಾಡಿಗಾಗಿ ಪಕ್ಷದ ಅಸ್ತಿತ್ವಕ್ಕಾಗಿ ಈಗ ಪಕ್ಷಕ್ಕೆ ಹೋಗವ್ರೆ ಎಂಬುದಾಗಿ ಕಿಡಿಕಾರಿದರು.
ವರದಿ: ಗಿರೀಶ್ ರಾಜ್, ಮಂಡ್ಯ
ಡಾ.ಸಿ.ಎನ್.ಮಂಜುನಾಥ್ vs ಡಿ.ಕೆ.ಸುರೇಶ್ ಅಂದರೆ ನಿಸ್ವಾರ್ಥ v/s ಸ್ವಾರ್ಥ, ಸೇವೆ v/s ಸುಲಿಗೆ- HDK
Breaking News: ನೂತನ ಚುನಾವಣಾ ಆಯುಕ್ತರಾಗಿ ಸುಖ್ಬೀರ್ ಸಂಧು, ಜ್ಞಾನೇಶ್ ಕುಮಾರ್ ನೇಮಕ