ಬೆಂಗಳೂರು :ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಅನ್ಯಾಯ ಮಾಡಿದಾಗ ದನಿ ಎತ್ತದ ಬಿಜೆಪಿ ಸಂಸದರು ಈಗ ಟಿಕೆಟ್ ಗಾಗಿ ಹೋರಾಟ, ಗೋಳಾಟ ನಡೆಸಿದ್ದಾರೆ ಎಂದು ಸಚಿವ ಕೆ.ಹೆಚ್. ಮುನಿಯಪ್ಪ ವಾಗ್ದಳಿ ನಡೆಸಿದ್ದಾರೆ.
ಬಿಜೆಪಿ ಸಂಸದರಿಗೆ ತಮ್ಮ ಸ್ವಾರ್ಥ ಮುಖ್ಯವೇ ಹೊರತು ಕರ್ನಾಟಕದ ಹಿತ ಮುಖ್ಯವಲ್ಲ ಎನ್ನುವುದು ಸಾಬೀತಾಗಿದೆ. ವಿಶೇಷ ಅನುದಾನದಲ್ಲಿ ಕರ್ನಾಟಕಕ್ಕೆ ಮಹಾ ದ್ರೋಹವೆಸಗಿದ ಬಿಜೆಪಿ ಯಾವ ಮುಖ ಇಟ್ಟುಕೊಂಡು ಮತ ಕೇಳಲು ಬರುತ್ತಾರೆ? ಕನ್ನಡಿಗರು ದ್ರೋಹಿ ಬಿಜೆಪಿಯನ್ನು ಸಾರಾಸಾಗಟಾಗಿ ತಿರಸ್ಕರಿಸುವುದು ಖಚಿತ ಎಂದು ಹೇಳಿದ್ದಾರೆ.