ಬೆಂಗಳೂರು: ಕರ್ನಾಟಕ ಸಿವಿಲ್ ಸೇವಾ (ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ) ನಿಯಮಗಳು 2009ರನ್ವಯ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರೋತ್ಸಾಹ ಧನ ನೀಡುವ ಬಗ್ಗೆ ರಾಜ್ಯ ಸರ್ಕಾರದಿಂದ ಆದೇಶವನ್ನು ಹೊರಡಿಸಲಾಗಿದೆ.
ಆದೇಶದಲ್ಲಿ ಉಲ್ಲೇಖ ಮಾಡಿರುವಂತೆ ಅಧಿಕಾರಿ/ಸಿಬ್ಬಂದಿಗಳ ಪ್ರಕರಣಗಳಲ್ಲಿ ಕರ್ನಾಟಕ ಸಿವಿಲ್ ಸೇವಾ (ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ) ನಿಯಮಗಳು 2012 ಜಾರಿಗೆ ಬಂದ ದಿನಾಂಕ: 22-03-2012ರಂದು ಸೇವೆಯಲ್ಲಿದ್ದು ದಿನಾಂಕ: 17-04-2021ರೊಳಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಸರ್ಕಾರಿ ನೌಕರರು ಮಾತ್ರ ಹಾಜರು ಪಡಿಸುವ ಡಿಜಿಟಲ್ ಸಹಿ ಹೊಂದಿರುವ ಪ್ರಮಾಣ ಪತ್ರ ಹಾಗೂ ಉತ್ತೀರ್ಣರಾದ ದಿನಾಂಕವನ್ನು ಖಚಿತಪಡಿಸಿಕೊಂಡು, ಅರ್ಹ ಸೇವಾ ನಿರತ ಪ್ರಕರಣಗಳಲ್ಲಿ ಮಾತ್ರ ನಿಯಮಾನುಸಾರ ತಲಾ ರೂ.5,000/- ರಂತೆ ಪ್ರೋತ್ಸಾಹ ಧನವನ್ನು 2023-24ನೇ ಸಾಲಿಗೆ ಲೆಕ್ಕ ಶೀರ್ಷಿಕೆ “2406-01-001-2-01-ಅರಣ್ಯ ಇಲಾಖೆಯ ಸಿಬ್ಬಂದಿ ಮತ್ತು ಆಡಳಿತಾತ್ಮಕ ವೆಚ್ಚಗಳು-015-ಪೂರಕ ವೆಚ್ಚಗಳು” ಇದರಡಿಯ ಅನುದಾನದಿಂದ ಪಾವತಿಸಲು ಈ ಮೂಲಕ ಅನುಮತಿ ನೀಡಿದೆ ಅಂತ ತಿಳಿಸಿದೆ.
ಆಂಡ್ರಾಯ್ಡ್ ಬಳಕೆದಾರರಿಗೆ ‘ಕೇಂದ್ರ ಸರ್ಕಾರ’ದಿಂದ ಮಹತ್ವದ ಎಚ್ಚರಿಕೆ: ಕೂಡಲೇ ಈ ಕೆಲಸ ಮಾಡುವಂತೆ ಸೂಚನೆ!
ಗೂಗಲ್ ಕ್ರೋಮ್ ಬಳಕೆದಾರರಿಗೆ ಕೇಂದ್ರ ಸರ್ಕಾರದಿಂದ ‘ಹೈ ರಿಸ್ಕ್’ ಎಚ್ಚರಿಕೆ !
ದಿನಾಂಕ: 22-03-2012ರ ನಂತರ ಸೇವೆಗೆ ಸೇರಿದ ಹಾಗೂ ದಿನಾಂಕ: 17-04-2021ರನಂತರ ಉತ್ತೀರ್ಣರಾಗಿರುವ ಪ್ರಕರಣಗಳಲ್ಲಿ ಪ್ರೋತ್ಸಾಹ ಧನವನ್ನು ಪಾವತಿಸುವಂತಿಲ್ಲ.
ಈಗ ಅನುಮತಿ ನೀಡಿರುವ ಪ್ರಕರಣಗಳಲ್ಲಿ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಬಗ್ಗೆ ಸರ್ಕಾರಿ ನೌಕರರು ಹಾಜರು ಪಡಿಸುವ ಡಿಜಿಟಲ್ ಸಹಿ ಹೊಂದಿರುವ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಪಮಾಣ ಪತ್ರ, ಉತ್ತೀರ್ಣರಾದ ಇತ್ಯಾದಿ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ, ಸರ್ಕಾರದ ಅಧಿಸೂಚನೆ/ಆದೇಶಗಳಲ್ಲಿ ಸ್ಪಷ್ಟಪಡಿಸಿರುವಂತೆ ದಿನಾಂಕ: 22-03-2012ರಂದು ಸೇವೆಯಲ್ಲಿದ್ದು ದಿನಾಂಕ: 17-04-2021ರೊಳಗೆ ಉತ್ತೀರ್ಣರಾಗಿರುವ ಅರ್ಹ ಸೇವಾ ನಿರತ ಅಧಿಕಾರಿ/ಸಿಬ್ಬಂದಿಗಳ ಪುಕರಣಗಳಲ್ಲಿ ಮಾತ್ರ ನಿಯಮಾನುಸಾರ ಪ್ರೋತ್ಸಾಹ ಧನ ಪಾವತಿಸಲು ತೆಗೆದುಕೊಳ್ಳುವುದು. ಯಾವುದೇ ಕಾರಣಕ್ಕೂ ದ್ವಿಪಾವತಿಯಾಗದಂತೆ ನೋಡಿಕೊಳ್ಳುವುದು.
ಈಗ ಅನುಮೋದನೆ ನೀಡಿರುವ ಪ್ರಕರಣಗಳಲ್ಲಿ ಯಾವುದೇ ಕಾರಣಕ್ಕೂ ಪ್ರೋತ್ಸಾಹ ಧನ ಪಾವತಿಸದ ಬಾಕಿ ಉಳಿಸಿಕೊಳ್ಳುವಂತಿಲ್ಲ. ಈ ನಿಟ್ಟಿನಲ್ಲಿ ಯಾವುದೇ ನಿರ್ಲಕ್ಷತೆ/ ವಿಳಂಬಕ್ಕೆ ಅವಕಾಶ ನಿಡದೇ ನಿಗಧಿತ ಅವಧಿಯೊಳಗೆ ಪಾವತಿಸಲು ಕಟ್ಟುನಿಟ್ಟಿನ ಕ್ರಮ ವಹಿಸುವುದು. ಯಾವುದೇ ಕಾರಣಗಳಿಗಾಗಲೀ ಬಾಕಿ ಉಳಿಸಿ ಕೊಂಡಲ್ಲಿ ಇದಕ್ಕೆ ಸಂಬಂಧಿಸಿದ ಬಟವಾಡೆ ಪ್ರಾಧಿಕಾರಿಗಳನ್ನೇ
ಅಧಿಕಾರಿ/ಘಟಕಾಧಿಕಾರಿ/ ಸಕ್ಷಮ ನೇರ ಹೊಣೆಗಾರರನ್ನಾಗಿಸಲಾಗುವುದು. ಮತ್ತು ಈ ಪ್ರಕರಣಗಳಿಗೆ ಪುನಃ ಸರ್ಕಾರದಿಂದ ಅನುಮೋದನೆ/ ಅನುದಾನ ಪಡೆದುಕೊಡುವುದಿಲ್ಲವೆಂಬ ಅಂಶವನ್ನು ಸ್ಪಷ್ಟಪಡಿಸಿದೆ.
4. ಪ್ರಸಕ್ತ ಸಾಲಿನ ಖಜಾನೆ-2 ಬಿಲ್ಲುಗಳನ್ನು ಆನ್‌ಲೈನ್ ಮೂಲಕ ಸಲ್ಲಿಸಲು, ಮೇಲು ಸಹಿ ಮಾಡಲು ಮತ್ತು ನಗದೀಕರಿಸಿಕೊಳ್ಳಲು ಕಾಲಾವಧಿ ನಿಗಧಿಯಾಗಿದೆ. ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸುವುದು. ಖಜಾನೆ ಬಿಲ್ಲುಗಳ ನಗದೀಕರಣಕ್ಕೆ ನಿಗದಿಯಾಗಿರುವ ಕಾಲಮಿತಿ ವಿಸ್ತರಣೆಯಾಗುವುದಿಲ್ಲ. ಆದ ಕಾರಣ ಈಗ ಹಂಚಿಕೆ ಮಾಡಿರುವ ಅನುದಾನಕ್ಕೆ ಸಂಬಂಧಿಸಿದ ಬಿಲ್ಲುಗಳನ್ನು ತ್ವರಿತವಾಗಿ ನಗದೀಕರಿಸಿಕೊಳ್ಳಲು ಕ್ರಮ ತೆಗೆದುಕೊಳ್ಳುವುದು. ಯಾವುದೇ ಅನುದಾನದ ಅಧ್ಯರ್ಪಣೆಗೆ ಮತ್ತು ವ್ಯಪಗತಕ್ಕೆ ಅವಕಾಶವಿರುವುದಿಲ್ಲ.
5. ಈ ಅಧಿಕೃತ ಜ್ಞಾಪನ ಪತ್ರದೊಂದಿಗೆ ಅಡಕಗೊಳಿಸಿರುವ ಅನುಮೋದನೆಯಾಗಿರುವ ಪ್ರಕರಣವಾರು ವಿವರಗಳ ಅನುಬಂಧ ಹಾಗೂ ಮೇಲ್ಕಂಡ ಸೂಚನೆಗಳ ಮಾಹಿತಿಯನ್ನು ತಪ್ಪದೇ ಈ ದಿನವೇ ಸಂಬಂಧಿಸಿದ ಎಲ್ಲಾ ಅಧೀನದ ಘಟಕ ಕಛೇರಿ/ಡಿಡಿಓಗಳಿಗೆ ತಲುಪುವಂತೆ ಕಳುಹಿಸುವ ಜವಾಬ್ದಾರಿಯು ಸಂಬಂಧಿದ ವೃತ/ ವಿಭಾಗ/ ಘಟಕ ಕಛೇರಿಯದ್ದಾಗಿರುತ್ತದೆ ಅಂಥ ತಿಳಿಸಿದೆ.