ಬೆಂಗಳೂರು : ಜೀವಂತ ಪ್ರಮಾಣ ಪತ್ರ ಸಲ್ಲಿಸಿರುವ ರಾಜ್ಶ ಹಾಗೂ ರಾಷ್ಟ್ರ ಪ್ರಶಸ್ತಿ ಪುರಷ್ಕೃತ ನಿವೃತ್ತ ನೌಕರರಿಗೆ ಮಾಸಿಕ ಗೌರವಧನವನ್ನು ಮುಂದುವರೆಸುವ ಬಗ್ಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಸಂಬಂಧಿಸಿದ ಬ್ಯಾಂಕ್‌ಗಳಿಗೆ ನೀಡಿರುವ ಜೀವಂತ ಪ್ರಮಾಣಗಳ ಪ್ರತಿಗಳನ್ನು / ಸ್ವೀಕೃತಿಗಳನ್ನು ಈ ಕಛೇರಿಗೆ ಸಲ್ಲಿಸಿರುವ ಮಾಸಿಕ ಗೌರವ ಧನವನ್ನು ಪಡೆಯುತ್ತಿರುವ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕರಿಗೆ, ವಿಶೇಷ ಶಿಕ್ಷಕರಿಗೆ, ಮುಖ್ಯ ಶಿಕ್ಷಕರಿಗೆ ಈ ಗೌರವ ಧನವನ್ನು ಮುಂದುವರೆಸುವ & ಸಲ್ಲಿಸದಿರುವವರಿಗೆ ಸ್ಥಗಿತಗೊಳಿಸುವ ಸಂಬಂಧ ಆದೇಶ ಹೊರಡಿಸಿದೆ.
ದಿನಾಂಕ 10.10.2023 ರವರೆಗೆ ಜೀವಂತ ಪ್ರಮಾಣ ಪತ್ರಗಳ (Life certificates) ಪ್ರತಿಗಳನ್ನು / ಸ್ವೀಕೃತಿ ಪತ್ರಗಳನ್ನು ಈ ಕಛೇರಿಗೆ ಸಲ್ಲಿಸಿರುವ ಉಲ್ಲೇಖ-05 ರೊಂದಿಗಿನ ಅನುಬಂಧ-ಎ ರಲ್ಲಿನ (ದಿನಾಂಕ: 10.10.2023) ಈ ಯೋಜನೆಗೆ ಒಳಪಡುವ ಒಟ್ಟು 169 ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕರಿಗೆ, ವಿಶೇಷ ಶಿಕ್ಷಕರಿಗೆ ಮತ್ತು ಮುಖ್ಯ ಶಿಕ್ಷಕರಿಗೆ ಹಾಗೂ ಉಲ್ಲೇಖ-05 ರೊಂದಿಗಿನ ಅನುಬಂಧ-ಸಿ ರಲ್ಲಿನ (ದಿನಾಂಕ: 10.10.2023) ಈ ಯೋಜನೆಗೆ ಒಳಪಡುವ ಒಟ್ಟು 141 ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕರಿಗೆ, ವಿಶೇಷ ಶಿಕ್ಷಕರಿಗೆ ಮತ್ತು ಮುಖ್ಯ ಶಿಕ್ಷಕರಿಗೆ ಮಾತ್ರ ಈ ಗೌರವ ಧನ ಪಾವತಿಸುತ್ತಿರುವುದನ್ನು ಮುಂದುವರೆಸಿ, ಮಾರ್ಚ್-2023 ರಿಂದ ಅಕ್ಟೋಬರ್-2023 ರವರೆಗೆ ಪ್ರತಿ ಮಾಹೆಗೆ ಕ್ರಮವಾಗಿ ತಲಾ ರೂ. 250/- ರಂತೆ ಮತ್ತು ತಲಾ ರೂ. 150/- ರಂತೆ ಸದರಿ ಗೌರವ ಧನವನ್ನು ಈ ಫಲಾನುಭವಿಗಳಿಗೆ ಈಗಾಗಲೇ ಮಂಜೂರು ಮಾಡಲಾಗಿದೆ.
ಮುಂದುವರೆದು, ಜೀವಂತ ಪ್ರಮಾಣ ಪತ್ರಗಳ (Life certificates) ಪ್ರತಿಗಳನ್ನು / ಸ್ವೀಕೃತಿ ಪತ್ರಗಳನ್ನು ಸಲ್ಲಿಸಲು ಇರುವ -05 ರೊಂದಿಗಿನ ಅನುಬಂಧ-ಬಿ ರಲ್ಲಿನ (ದಿನಾಂಕ:10.10.2023) ಈ ಯೋಜನೆಗೆ ಒಳಪಡುವ ಒಟ್ಟು 13 ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕರಿಗೆ, ವಿಶೇಷ ಶಿಕ್ಷಕರಿಗೆ ಮತ್ತು ಮುಖ್ಯ ಶಿಕ್ಷಕರಿಗೆ ಹಾಗೂ ಉಲ್ಲೇಖ-05 ರೊಂದಿಗಿನ ಅನುಬಂಧ-ಡಿ ರಲ್ಲಿನ (ದಿನಾಂಕ:10.10.2023) ಈ ಯೋಜನೆಗೆ ಒಳಪಡುವ ಒಟ್ಟು 53 ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕರಿಗೆ. ವಿಶೇಷ ಶಿಕ್ಷಕರಿಗೆ ಮತ್ತು ಮುಖ್ಯ ಶಿಕ್ಷಕರಿಗೆ ಮಾತ್ರ ಮಾರ್ಚ್-2023 ರಿಂದ ಸದರಿ ಜೀವಂತ ಪ್ರಮಾಣ ಪತ್ರಗಳ (Life certificates) ಪ್ರತಿಗಳನ್ನು / ಸ್ವೀಕೃತಿ ಪತ್ರಗಳನ್ನು ಸಲ್ಲಿಸುವವರೆಗೆ ಈ ಗೌರವ ಧನ ಪಾವತಿಸುತ್ತಿರುವುದನ್ನು ಸ್ಥಗಿತಗೊಳಿಸಲಾಗಿದೆ.
ಉಲ್ಲೇಖ-01 & 02 ರಂತೆ. ನವೆಂಬರ್-2022 & ನವೆಂಬರ್-2023 ಮತ್ತು ನಂತರದ ಮಾಹೆಗಳಲ್ಲಿ ಸಕ್ಷಮ ಪ್ರಾಧಿಕಾರಗಳಿಂದ ಪಡೆದಿರುವ ಅಥವಾ ಪಿಂಚಣಿ ಪಡೆಯುತ್ತಿರುವ ಬ್ಯಾಂಕ್‌ಗಳಿಗೆ / ಸಂಬಂಧಪಟ್ಟ ಬ್ಯಾಂಕ್ಗಳಿಗೆ / ಈ ಗೌರವ ಧನವನ್ನು ಪಡೆಯುತ್ತಿರುವ ಬ್ಯಾಂಕ್‌ಗಳಿಗೆ ಒದಗಿಸಿರುವ ಜೀವಂತ ಪ್ರಮಾಣ ಪತ್ರಗಳ (Life certificates) ಪ್ರತಿಗಳ / ಸ್ವೀಕೃತಿ ಪತ್ರಗಳ ಯಥಾಪ್ರತಿಗಳನ್ನು ಸದರಿ ಫಲಾನುಭವಿಗಳ ಸಂಘಟನೆಯ ಮೂಲಕ ಈ ಕಛೇರಿಗೆ ಸಲ್ಲಿಸಲು ಸೂಕ್ತ ಕ್ರಮವಹಿಸುವಂತೆ ಸದರಿ ಫಲಾನುಭವಿಗಳನ್ನು ಮತ್ತು ಈ ಸಂಘಟನೆಯನ್ನು ಕೋರಲಾಗಿದೆ. ತದನಂತರ ಸದರಿ ದಾಖಲೆಗಳ ಆಧಾರದ ಮೇಲೆ ಈ ಗೌರವ ಧನ ಪಾವತಿಸುತ್ತಿರುವುದನ್ನು ಮುಂದುವರೆಸಲು ಅಥವಾ ಸ್ಥಗಿತಗೊಳಿಸಲು ನಿಯಮಾನುಸಾರ ಸೂಕ್ತ ಕ್ರಮವಹಿಸಲಾಗುವುದು ಎಂದು ಉಲ್ಲೇಖ-05 & 06 ರಲ್ಲಿ ತಿಳಿಸಲಾಗಿದೆ. ಈ ಸಂಬಂಧ ಸದರಿ ಫಲಾನುಭವಿಗಳಿಗೆ ದೂರವಾಣಿ ಮೂಲಕ, ಮುದ್ದಾಂ & ಸದರಿ ಸಂಘಟನೆಯ ಮೂಲಕ ವಿವಿಧ ದಿನಾಂಕಗಳಲ್ಲಿ ಸಾಕಷ್ಟು ಬಾರಿ ತಿಳುವಳಿಕೆ / ಮಾಹಿತಿ ನೀಡಿ, ಕಾಲಾವಕಾಶವನ್ನು ಸಹ ನೀಡಲಾಗಿದೆ.
ಅದರಂತೆ. ಇಲ್ಲಿಯವರೆಗೆ ಸದರಿ ಜೀವಂತ ಪ್ರಮಾಣ ಪತ್ರಗಳ (Life certificates) ಪ್ರತಿಗಳನ್ನು / ಸ್ವೀಕೃತಿ ಪತ್ರಗಳನ್ನು ಈ ಕಛೇರಿಗೆ ಸಲ್ಲಿಸಿರುವ ಈ ಫಲಾನುಭವಿಗಳಿಗೆ ಈ ಗೌರವ ಧನ ಪಾವತಿಸುತ್ತಿರುವುದನ್ನು ನಿಯಮಾನುಸಾರ ಮುಂದುವರೆಸಲು. ಸದರಿ ಜೀವಂತ ಪ್ರಮಾಣ ಪತ್ರಗಳ (Life certificates) ಪ್ರತಿಗಳನ್ನು / ಸ್ವೀಕೃತಿ ಪತ್ರಗಳನ್ನು ಸಲ್ಲಿಸಲು ಬಾಕಿ ಇರುವ ಸದರಿ ಫಲಾನುಭವಿಗಳು ಅವುಗಳನ್ನು ಸಲ್ಲಿಸಿದ ನಂತರ ಅವರುಗಳಿಗೂ ಸಹ ಸದರಿ ಈ ಗೌರವ ಧನ ಪಾವತಿಸುವುದನ್ನು ಮುಂದುವರೆಸಲು ನಿಯಮಾನುಸಾರ ಸೂಕ್ತ ಕ್ರಮವಹಿಸುವಂತೆ ಉಲ್ಲೇಖ-07 ರಲ್ಲಿ ಕೋರಲಾಗಿದೆ.