ನವದೆಹಲಿ : ದೆಹಲಿಯಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು, ದಂಪತಿ ಸೇರಿದಂತೆ ನಾಲ್ವರು ಸಜೀವ ದಹನವಾಗಿರುವ ಘಟನೆ ನಡೆದಿದೆ.
ದೆಹಲಿಯ ಶಹದಾರಾ ಪ್ರದೇಶದಲ್ಲಿರುವ ಗೀತಾ ಕಾಲೋನಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಅಪಘಾತದಲ್ಲಿ 4 ಜನರು ದುರಂತವಾಗಿ ಸಾವನ್ನಪ್ಪಿದ್ದಾರೆ. ಮೃತಪಟ್ಟವರಲ್ಲಿ ಗಂಡ ಮತ್ತು ಹೆಂಡತಿ ಮತ್ತು ಇಬ್ಬರು ಸಹೋದರಿಯರು ಸೇರಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ.
ಮೃತರನ್ನು ಮನೋಜ್ (30) ಮತ್ತು ಸುಮನ್ (28) ಎಂದು ಗುರುತಿಸಲಾಗಿದೆ. ಇದರೊಂದಿಗೆ, 5 ವರ್ಷ ಮತ್ತು 3 ವರ್ಷದ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ.
ದೆಹಲಿಯ ಮನೆಯೊಂದರಲ್ಲಿ ಅಗ್ನಿ ಅವಘಢ ಸಂಭವಿಸಿದ್ದು, ನೆರೆಹೊರೆಯವರು ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ದೆಹಲಿ ಅಗ್ನಿಶಾಮಕ ಇಲಾಖೆಯ ತಂಡವು ಸ್ಥಳಕ್ಕೆ ತಲುಪಿ ಕಠಿಣ ಪರಿಶ್ರಮದ ನಂತರ ಬೆಂಕಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ.
#WATCH | Delhi: A massive fire broke out in a house in the Shahdara area. Fire brigade and police are present at the spot. Efforts to douse the fire are underway. Further details awaited: Delhi Police pic.twitter.com/Q6RtAV94lW
— ANI (@ANI) March 14, 2024