ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ದೂರ ಶಿಕ್ಷಣ ಘಟಕ, ವಿಸ್ತರಣಾ ನಿರ್ದೇಶನಾಲಯವು 2024-25ನೇ ಶೈಕ್ಷಣಿಕ ಸಾಲಿನಲ್ಲಿ ಎರಡು ಡಿಪ್ಲೊಮಾ ಮತ್ತು ಐದು ಸರ್ಟಿಫಿಕೇಟ್ ಕೋರ್ಸ್ಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಡಿಪ್ಲೊಮಾ ಕೋರ್ಸ್ಗಳಾದ ಒಂದು ವರ್ಷದ ಡಿಪ್ಲೊಮಾ (ಕೃಷಿ) ಕೋರ್ಸ್ಗೆ ಕೋರ್ಸ್ ಶುಲ್ಕ ರೂ. 10,000/- ಗಳಿದ್ದು, 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಬಹುದು ಹಾಗೂ ಒಂದು ವರ್ಷದ ಸ್ನಾತಕೋತ್ತರ ಕೃಷಿ ಡಿಪ್ಲೊಮಾ (ಪಿ.ಜಿ.ಡಿ.ಎ) ಕೋರ್ಸ್ಗೆ ಕೋರ್ಸ್ ಶುಲ್ಕ ರೂ. 12,000/- ಗಳಿದ್ದು, ಕೃಷಿ ಪದವೀಧರರು ಅರ್ಜಿ ಸಲ್ಲಿಸಬಹುದು.
ಸರ್ಟಿಫಿಕೇಟ್ ಕೋರ್ಸ್ಗಳಾದ, ಕೃಷಿಯಲ್ಲಿ ಬೀಜೊತ್ಪಾದನೆ ತಾಂತ್ರಿಕತೆಗಳ ಕೋರ್ಸ್ಗೆ ಶುಲ್ಕ ರೂ. 3000/- ಗಳಿದ್ದು, 10ನೇ ತರಗತಿ ಪಾಸಾಗಿರಬೇಕು. ಕೃಷಿಯಲ್ಲಿ ಯಂತ್ರೋಪಕರಣಗಳ ನಿರ್ವಹಣೆ ಕೋರ್ಸ್ಗೆ ಶುಲ್ಕ ರೂ. 3000/- ಗಳಿದ್ದು, 10ನೇ ತರಗತಿ ಪಾಸಾಗಿರಬೇಕು. ಜೇನು ಸಾಕಣೆ ಕೋರ್ಸ್ಗೆ ಶುಲ್ಕ ರೂ. 3000/- ಗಳಿದ್ದು, 7ನೇ ತರಗತಿ ಪಾಸಾಗಿರಬೇಕು. ಸಮಗ್ರ ಕೃಷಿ ಕೋರ್ಸ್ಗೆ ಶುಲ್ಕ ರೂ. 1500/- ಗಳಿದ್ದು, 7ನೇ ತರಗತಿ ಪಾಸಾಗಿರಬೇಕು. ಹಾಗೂ ಸಾವಯವ ಕೃಷಿ (ಅಂಚೆ ಶಿಕ್ಷಣ) ಕೋರ್ಸ್ಗೆ ಶುಲ್ಕ ರೂ. 200/-ಗಳಿದ್ದು, ಓದು ಬರಹ ಬಲ್ಲವರು ಅರ್ಜಿ ಸಲ್ಲಿಸಬಹುದು.
ಡಿಪ್ಲೊಮಾ ಮತ್ತು ಸರ್ಟಿಪೀಕೇಟ್ ಕೋರ್ಸ್ಗಳಿಗೆ 2024ನೇ ಮಾರ್ಚ್ 11ರಿಂದ ಏಪ್ರಿಲ್ 19ರ ವರೆಗೆ ಪ್ರತಿ ಕೋರ್ಸ್ಗೆ ಅರ್ಜಿ ಶುಲ್ಕ ರೂ. 100/- ರಂತೆ ಪಾವತಿಸಿ ದೂರ ಶಿಕ್ಷಣ ಘಟಕ, ರೈತ ತರಬೇತಿ ಸಂಸ್ಥೆ, ವಿಸ್ತರಣಾ ನಿರ್ದೇಶನಾಲಯ, ಜಿಕೆವಿಕೆ, ಬೆಂಗಳೂರು-560065 ಹಾಗೂ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕಾರ್ಯವ್ಯಾಪ್ತಿಯಲ್ಲಿ ಬರುವಂತಹ ಕೃಷಿ ವಿಜ್ಞಾನ ಕೇಂದ್ರಗಳಾದ ರಾಮನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಹಾಸನ, ಮಂಡ್ಯ, ಬೆಂಗಳೂರು ಗ್ರಾಮಾಂತರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಹಾಗೂ ವಿಸ್ತರಣಾ ಶಿಕ್ಷಣ ಘಟಕ, ಮೈಸೂರಿನಲ್ಲಿ ಅರ್ಜಿಗಳನ್ನು ಪಡೆಯಬಹುದು ಅಥವಾ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಜಾಲತಾಣದಿಂದ www.uasbangalore.edu.in ಡೌನ್ಲೋಡ್ ಮಾಡಿಕೊಳ್ಳಬಹುದು. ಭರ್ತಿ ಮಾಡಿದ ಅರ್ಜಿಗಳನ್ನು ನಿಗದಿತ ಕೋರ್ಸ್ ಶುಲ್ಕವನ್ನು ಡಿ.ಡಿ. ಮೂಲಕ COMPTROLLER, UAS, GKVK, BANGALORE-560065 ಇವರ ಹೆಸರಿನಲ್ಲಿ ಪಡೆದು ಏಪ್ರಿಲ್ 19ರ ಮಧ್ಯಾಹ್ನ 4.00 ಗಂಟೆ ಒಳಗೆ ಸಂಯೋಜಕರು ಮತ್ತು ಮುಖ್ಯಸ್ಥರು, ದೂರ ಶಿಕ್ಷಣ ಘಟಕ, ರೈತ ತರಬೇತಿ ಸಂಸ್ಥೆ, ವಿಸ್ತರಣಾ ನಿರ್ದೇಶನಾಲಯ, ಕೃ.ವಿ.ವಿ., ಜಿಕೆವಿಕೆ, ಬೆಂಗಳೂರು -560065 ರವರಿಗೆ ಸಲ್ಲಿಸಬಹುದು. ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ: 080-23636353 ಅನ್ನು ಸಂಪರ್ಕಿಸಬಹುದೆಂದು ಕೃಷಿ ವಿಶ್ವವಿದ್ಯಾಲಯ ಜಿಕೆವಿಕೆ ವಿಸ್ತೀರಣಾ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.