ಶಿವಮೊಗ್ಗ: ಶಿರಾಳಕೊಪ್ಪ ಪುರಸಭೆ ವ್ಯಾಪ್ತಿಯಲ್ಲಿ ಬರುವ ಆಸ್ತಿಗಳಿಗೆ 2024-25ನೇ ಸಾಲಿನ ಆಸ್ತಿ ತೆರಿಗೆಯನ್ನು ಚಾಲ್ತಿ ಸಾಲಿನ ಮಾರುಕಟ್ಟೆ ಮೌಲ್ಯದ ಮಾರ್ಗಸೂಚಿ ಬೆಲೆಯ ಶೇ. 25 ನ್ನು ಪರಿಗಣಿಸಿ ಪರಿಷ್ಕರಣೆ ಮಾಡಲಾಗಿದೆ.
ಏ.01 ರಿಂದ 30ರೊಳಗಾಗಿ ಆಸ್ತಿ ತೆರಿಗೆ ಪಾವತಿಸುವ ಆಸ್ತಿ ಮಾಲೀಕರು ಹಾಗೂ ಅನುಭೋಗದಾರರಿಗೆ ಶೇ.5 ರಷ್ಟು ವಿನಾಯಿತಿಯನ್ನು ಕಲ್ಪಿಸಲಾಗಿದೆ. ಮೇ 01 ರಿಂದ ಜೂ.30ರ ಅವಧಿಯಲ್ಲಿ ಆಸ್ತಿ ತೆರಿಗೆ ಪಾವತಿಸುವವರು ದಂಡ ರಹಿತವಾಗಿ ಪಾವತಿಸಬಹುದು. ಜು.01 ರಿಂದ ಆಸ್ತಿ ತೆರಿಗೆಯ ಮೇಲೆ ಮಾಸಿಕ ಶೇ.2 ರಷ್ಟು ದಂಡ ವಿಧಿಸಲಾಗುವುದು ಎಂದು ಶಿರಾಳಕೊಪ್ಪ ಪುರಸಭೆಯ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.