ಬೆಂಗಳೂರು: ರಾಜ್ಯದ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಇನ್ಮುಂದೆ ಭಾನುವಾರವೂ ಉಪ ನೋಂದಣಾಧಿಕಾರಿಗಳ ಕಚೇರಿ ತೆರೆದಿರಲಿದೆ. ಈ ಮೂಲಕ ಆಸ್ತಿ ನೋಂದಣಿ ಸೇರಿದಂತೆ ವಿವಿಧ ಸಬ್ ರಿಜಿಸ್ಟರ್ ಕಚೇರಿ ಸೇವೆಗಳು ದೊರೆಯಲಿದ್ದಾವೆ.
ಈ ಕುರಿತು ಮಾಹಿತಿ ಹಂಚಿಕೊಂಡಂತ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು, ಬೆಂಗಳೂರು ಸೇರಿ ಮಹಾನಗರ ಪಾಲಿಕೆ ವ್ಯಾಪ್ತಿಯ ನೋಂದಣಿ ಕಚೇರಿಗಳನ್ನು ಭಾನುವಾರವೂ ಸಹಿತ ಕಾರ್ಯನಿರ್ವಹಿಸುವಂತೆ ಆದೇಶ ಮಾಡಲಾಗುತ್ತಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಅನೇಕ ಜನರು ನೋಂದಣಿಗಾಗಿ ತಮ್ಮ ಕೆಲಸ ಕಾರ್ಯಗಳಿಗೆ ರಜಾ ಹಾಕಿ ಬರಬೇಕಾಗುತ್ತದೆ. ನಗರ ಪ್ರದೇಶಗಳಲ್ಲಿ ಇದರಿಂದ ಕೆಲವರಿಗೆ ಅನಾನುಕೂಲವೂ ಆಗುತ್ತಿದೆ. ಆದ್ದರಿಂದ ಒಂದು ಕಂದಾಯ ಜಿಲ್ಲೆಯಲ್ಲಿ ಕನಿಷ್ಠ 6-7 ನೋಂದಣಾ ಕಚೇರಿಗಳು ಇರುತ್ತವೆ. ರೋಸ್ಟರ್ ಆಧಾರದ ಮೇಲೆ ಒಂದೊಂದು ವಾರ ಒಂದೊಂದು ನೋಂದಣಾಧಿಕಾರಿ ಕಚೇರಿ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಲಾಗಿದೆ. ಇದರ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.
‘ನಮ್ಮ ಮೆಟ್ರೋ’ದಲ್ಲಿ ಬೆಚ್ಚಿ ಬೀಳಿಸೋ ಘಟನೆ: ‘ಅಪರಿಚಿತ ವ್ಯಕ್ತಿ’ ಓಡಾಟ, ಕೆಲಕಾಲ ‘ಸಂಚಾರ ಸ್ಥಗಿತ’
BREAKING : ರಾಜಸ್ಥಾನದಲ್ಲಿ ವಾಯುಪಡೆಯ ‘ತೇಜಸ್ ವಿಮಾನ’ ಪತನ, ‘ಪೈಲಟ್’ ಸುರಕ್ಷಿತ