ನವದೆಹಲಿ : ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಭರ್ಜರಿ ತಯಾರಿ ಆರಂಭಿಸಿದ್ದು, ಸಧ್ಯ 43 ಆಭ್ಯರ್ಥಿಗಳ 2ನೇ ಪಟ್ಟಿಯನ್ನ ಬಿಡುಗಡೆ ಮಾಡಿದೆ.
ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಅಸ್ಸಾಂ, ಗುಜರಾತ್, ಮಧ್ಯಪ್ರದೇಶ, ಉತ್ತರಾಖಂಡ್, ರಾಜಸ್ಥಾನ ಮತ್ತು ಕೇಂದ್ರಾಡಳಿತ ಪ್ರದೇಶವಾದ ದಮನ್ ಮತ್ತು ದಿಯು ಸೇರಿದಂತೆ ವಿವಿಧ ರಾಜ್ಯಗಳಲ್ಲಿ 43 ಅಭ್ಯರ್ಥಿಗಳನ್ನು ಘೋಷಿಸಿದ್ದಾರೆ.
ಗೌರವ್ ಗೊಗೊಯ್ ಅಸ್ಸಾಂನ ಜೋರ್ಹತ್ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದರೆ, ಕಮಲ್ ನಾಥ್ ಅವರ ಪುತ್ರ ನಕುಲ್ ನಾಥ್ ಚಿಂದ್ವಾರದಿಂದ ಸ್ಪರ್ಧಿಸಲಿದ್ದಾರೆ.
ಘೋಷಿಸಲಾದ 43 ಅಭ್ಯರ್ಥಿಗಳಲ್ಲಿ 33 ಮಂದಿ ಒಬಿಸಿ, ಎಸ್ಸಿ, ಎಸ್ಟಿ ಅಥವಾ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದವರು ಎಂದಿದ್ದಾರೆ.
ಮೊದಲ ಪಟ್ಟಿಯಲ್ಲಿ ಕಾಂಗ್ರೆಸ್ 39 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳ ಹೆಸರನ್ನ ಘೋಷಿಸಿತ್ತು. ಮೊದಲ ಪಟ್ಟಿಯಲ್ಲಿ ರಾಹುಲ್ ಗಾಂಧಿ ಅವರ ಹೆಸರೂ ಇದ್ದು, ವಯನಾಡ್’ನಿಂದ ಸ್ಪರ್ಧಿಸಲಿದ್ದಾರೆ. ಇವರಲ್ಲದೆ, ಶಶಿ ತರೂರ್ ತಿರುವನಂತಪುರಂನಿಂದ ಮತ್ತು ಭೂಪೇಶ್ ಬಘೇಲ್ ರಾಜನಂದಗಾಂವ್ನಿಂದ ಸ್ಪರ್ಧಿಸಲಿದ್ದಾರೆ.
ಕಾಂಗ್ರೆಸ್ ಆಭ್ಯರ್ಥಿಗಳ 2ನೇ ಪಟ್ಟಿ ಇಂತಿದೆ.!
#WATCH | Delhi: Congress General Secretary KC Venugopal says "We have already announced our first list of candidates for the Lok Sabha elections. Today, we are going to announce the second list. Yesterday, CEC met and cleared the list of around 43 names from Assam, Madhya… pic.twitter.com/ODKwCE1seF
— ANI (@ANI) March 12, 2024
BREAKING : ಹರಿಯಾಣದ ನೂತನ ಸಿಎಂ ಆಗಿ ‘ನಯಾಬ್ ಸಿಂಗ್ ಸೈನಿ’ ಪ್ರಮಾಣ ವಚನ ಸ್ವೀಕಾರ
ಉದ್ಯೋಗ ವಾರ್ತೆ: ವೈದ್ಯಕೀಯ ಮತ್ತು ಅರೆವೈದ್ಯಕೀಯ ಹುದ್ದೆಗಳಿಗೆ ಅರ್ಜಿ ಆಹ್ವಾನ
BREAKING: ರಾಜ್ಯದ 5, 8 ಮತ್ತು 9ನೇ ತರಗತಿ ‘ಬೋರ್ಡ್ ಪರೀಕ್ಷೆ’ ಮುಂದೂಡಿ ‘ಶಾಲಾ ಶಿಕ್ಷಣ ಇಲಾಖೆ’ ಆದೇಶ