ಮಾಲೆ : ಮಾಲ್ಡೀವ್ಸ್ನಲ್ಲಿ ಭಾರತೀಯ ಮಿಲಿಟರಿ ಸಿಬ್ಬಂದಿಯ ಮೊದಲ ಬ್ಯಾಚ್ ಹೆಲಿಕಾಪ್ಟರ್ನ ಕಾರ್ಯಾಚರಣೆಯನ್ನ ಭಾರತೀಯ ನಾಗರಿಕ ಸಿಬ್ಬಂದಿಗೆ ಹಸ್ತಾಂತರಿಸಿದ ನಂತ್ರ ದ್ವೀಪ ರಾಷ್ಟ್ರದಿಂದ ಹೊರಟಿದೆ ಎಂದು ಮಾಲ್ಡೀವ್ಸ್ ಮಾಧ್ಯಮಗಳು ತಿಳಿಸಿವೆ. ಈ ಬ್ಯಾಚ್ ಅಡ್ಡು ನಗರದಲ್ಲಿ 25 ಭಾರತೀಯ ಸೈನಿಕರನ್ನು ಒಳಗೊಂಡಿತ್ತು ಎಂದು ಮಾಲ್ಡೀವ್ಸ್ ರಾಷ್ಟ್ರೀಯ ರಕ್ಷಣಾ ಪಡೆ (MNDF) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಂದ್ಹಾಗೆ, ಮಾಲ್ಡೀವ್ಸ್ನ ಚೀನಾ ಪರ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರು ಅಧಿಕಾರಕ್ಕೆ ಬಂದಾಗಿನಿಂದ ಭಾರತೀಯ ಮಿಲಿಟರಿ ಸಿಬ್ಬಂದಿಯನ್ನ ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸುತ್ತಿದ್ದಾರೆ. ಆದ್ರೆ, ಮೊದಲ ಬ್ಯಾಚ್ ನಿರ್ಗಮನದ ಬಗ್ಗೆ ಭಾರತದ ರಕ್ಷಣಾ ಸಚಿವಾಲಯದಿಂದ ತಕ್ಷಣದ ದೃಢೀಕರಣವಿಲ್ಲ. ಮೇ 10ರೊಳಗೆ ಭಾರತೀಯ ಪಡೆಗಳನ್ನ ಸಂಪೂರ್ಣವಾಗಿ ಹಿಂತೆಗೆದುಕೊಳ್ಳಬೇಕೆಂದು ಮುಯಿಝು ಒತ್ತಾಯಿಸಿದ್ದರು.
ಈ ಹಿಂದೆ ಒಪ್ಪಿಕೊಂಡಂತೆ ಮಾರ್ಚ್ 10ಕ್ಕೆ ಮುಂಚಿತವಾಗಿ ಭಾರತೀಯ ಮಿಲಿಟರಿ ಪಡೆಗಳು ದೇಶವನ್ನು ತೊರೆದಿವೆ ಎಂದು ಎಂಎನ್ಡಿಎಫ್ ಅಧಿಕಾರಿ ದೃಢಪಡಿಸಿದರು. ಇನ್ನು ಮುಂದೆ ಹೆಲಿಕಾಪ್ಟರ್ಗಳನ್ನು ಭಾರತದಿಂದ ನಾಗರಿಕ ತಜ್ಞರು ನಿರ್ವಹಿಸಲಿದ್ದು, ಅವರನ್ನ ಈ ಉದ್ದೇಶಕ್ಕಾಗಿ ಮಾಲ್ಡೀವ್ಸ್ಗೆ ವರ್ಗಾಯಿಸಲಾಗಿದೆ ಮತ್ತು ನಾಗರಿಕ ಸಿಬ್ಬಂದಿ ಮತ್ತು ಹೆಲಿಕಾಪ್ಟರ್ನ ಕಾರ್ಯಾಚರಣೆಗಳು ಮಾಲ್ಡೀವ್ಸ್ ಸೇನೆಯ ಅಡಿಯಲ್ಲಿ ಬರಲಿವೆ. ಮಾಲ್ಡೀವ್ಸ್ನಲ್ಲಿ ಬೇರೆಡೆ ಬೀಡುಬಿಟ್ಟಿರುವ ಉಳಿದ ಭಾರತೀಯ ಮಿಲಿಟರಿ ಸಿಬ್ಬಂದಿ ಸಹ ಮೇ 10ರೊಳಗೆ ನಿಗದಿತ ಸಮಯಕ್ಕೆ ತೆರಳಲಿದ್ದಾರೆ ಎಂದು ಅಧಿಕಾರಿ ಹೇಳಿದರು.
BREAKING : ರಾಜಸ್ಥಾನದಲ್ಲಿ ‘ಮಿಲಿಟರಿ ವಿಮಾನ’ ಪತನ |Military Aircraft Crashes
‘ರಾಜ್ಯ ಸರ್ಕಾರಿ ನೌಕರ’ರಿಗೆ ಸಿಹಿಸುದ್ದಿ: ತುಟ್ಟಿಭತ್ಯೆ ಶೇ.38.75ರಿಂದ ಶೇ.42.5ರಷ್ಟು ಹೆಚ್ಚಿಸಿ ಆದೇಶ | DA Hike
BREAKING : ರಾಜಸ್ಥಾನದಲ್ಲಿ ವಾಯುಪಡೆಯ ‘ತೇಜಸ್ ವಿಮಾನ’ ಪತನ, ‘ಪೈಲಟ್’ ಸುರಕ್ಷಿತ