ಬೆಂಗಳೂರು : ಬೆಂಗಳೂರಿನ ರಾಮೇಶ್ವರಂ ಬಾಂಬ್ ಸ್ಪೋಟ ಪ್ರಕರಣದ ತನಿಕೆ ನಡೆಸುತ್ತಿರುವ ಪೊಲೀಸರಿಗೆ ಬಾಂಬರ್ ನ ಕುರಿತು ಮತ್ತೊಂದು ಸ್ಪೋಟಕ ಮಾಹಿತಿ ಬಹಿರಂಗವಾಗಿದೆ.
ತನಿಖೆ ನಡೆಸುತ್ತಿರುವ ಪೊಲೀಸರು ಬಾಂಬರ್ ಕುರಿತು ಮಹತ್ವದ ಸುಳಿವು ಸಿಕ್ಕಿದ್ದು, ಬಾಂಬರ್ ಗುರುತು ಮರೆಮಾಚಲು ಚೆನ್ನೈನಿಂದ ತಿರುಪತಿಗೆ ಬಂದು. ಅಲ್ಲಿಂದ ಬೆಂಗಳೂರಿಗೆ ರೈಲಿನಲ್ಲಿ ಬಂದಿದ್ದ ಎಂಬ ಅಂಶ ಬಹಿರಂಗವಾಗಿದೆ.
ತಂತ್ರಜ್ಞಾನ ಬಳಸಿಕೊಂಡಿದ್ದ ಬಾಂಬರ್ ರಾಮೇಶ್ವರಂ ಕೆಫೆಯಲ್ಲಿ ಅಡ್ವಾನ್ಸ್ ಬಾಂಬ್ ಇಟ್ಟು ಅಂದೇ ಬೆಂಗಳೂರು ಬಿಟ್ಟು ಪರಾರಿಯಾಗಿದ್ದಾನೆ. ಸುಳಿವು ಸಿಗಬಾರದು ಎಂದು ರೈಲಿನಲ್ಲಿ ಬಾಂಬರ್ ಪ್ರಯಾಣಿಸಿದ್ದ. ಈ ನಡುವೆ ಬಾಂಬರ್ ಕರ್ನಾಟಕದ ಮಲೆನಾಡಿನ ಮೂಲದವನು ಎಂದು ಹೇಳಲಾಗುತ್ತಿದೆ.