ಬಾಗಲಕೋಟೆ : ಮಗಳಿಂದ ದೂರ ಇರು ಎಂದಿದ್ದಕ್ಕೆ ಪ್ರಿಯತಮೆಯ ತಂದೆಯನ್ನೇ ಯುವಕನೊಬ್ಬ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ.
ಬಾಗಲಕೋಟೆ ತಾಲೂಇನ ಭಗವತಿ ಗ್ರಾಮದಲ್ಲಿ ಪ್ರವೀಣ್ ಕಾಂಬಳೆ ಎಂಬಾತ ತನ್ನ ಲವರ್ ತಂದೆಯನ್ನೇ ಕೊಚ್ಚಿ ಕೊಲೆ ಮಾಡಿರುವ ಘಟನೆ ನಡೆದಿದೆ.
BREAKING : ಇಸ್ರೇಲ್-ಹಮಾಸ್ ಯುದ್ಧ: ಕಳೆದ 24 ಗಂಟೆಗಳಲ್ಲಿ ಗಾಝಾದಲ್ಲಿ 67 ಫೆಲೆಸ್ತೀನೀಯರ ಹತ್ಯೆ
ಅಂತರ್ಜಾತಿ ಹಿನ್ನೆಲೆಯಲ್ಲಿ ಮಗಳಿಂದ ದೂರ ಇರುವಂತೆ ಯುವತಿಯ ತಂದೆ ಪ್ರವೀಣ್ ಕಾಂಬಳೆಗೆ ಎಚ್ಚರಿಕೆ ನೀಡಿದ್ದರು, ಇದನ್ನೇ ಸೇಡಿಟ್ಟು ಪ್ರಿಯತಮೆ ತಂದೆ ಸಂಗನಗೌಡ ಪಾಟೀಲ್ ಎಂಬುವರನ್ನು ಮಚ್ಚಿನಿಂದ ಕೊಲೆ ಮಾಡಿದ್ದಾನೆ. ಯುವತಿಯಿಂದ ದೂರ ಇರುವಂತೆ ಪ್ರವೀಣ್ ಗೆ ಕುಟುಂಬಸ್ಥರು ಥಳಿಸಿದ್ದರು. ರೊಚ್ಚಿಗೆದ್ದ ಪ್ರವೀಣ್ ಯುವತಿಯ ತಂದೆಯನ್ನೇ ಹತ್ಯೆ ಮಾಡಿದ್ದಾನೆ. ಬಾಗಲಕೋಟೆ ಗ್ರಾಮೀಣಾ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.