ಗಾಝಾ: ಇಸ್ರೇಲ್-ಹಮಾಸ್ ಸಂಘರ್ಷ ಮುಂದುವರೆದಿದ್ದು, ಫೆಲೆಸ್ತೀನಿಯರು ಮುಸ್ಲಿಮರ ಪವಿತ್ರ ರಂಜಾನ್ ತಿಂಗಳಿಗಾಗಿ ಸೋಮವಾರ ಉಪವಾಸ ಆರಂಭಿಸಿದ್ದಾರೆ.
ಗಾಜಾ ಮೇಲೆ ಇಸ್ರೇಲಿ ಪಡೆಗಳು ದಾಳಿ ನಡೆಸಿದ್ದು, ಕಳೆದ 24 ಗಂಟೆಗಳಲ್ಲಿ ಗಾಝಾದಲ್ಲಿ 67 ಫೆಲೆಸ್ತೀನೀಯರ ಹತ್ಯೆ ಮಾಡಲಾಗಿದೆ. ಈ ಮೂಲಕ ಸಾವಿನ ಸಂಖ್ಯೆ 31,000 ದಾಟಿದೆ.
ಐದು ತಿಂಗಳ ಯುದ್ಧವು ಗಾಜಾದ 2.3 ಮಿಲಿಯನ್ ಜನರಲ್ಲಿ ಸುಮಾರು 80 ಪ್ರತಿಶತದಷ್ಟು ಜನರನ್ನು ತಮ್ಮ ಮನೆಗಳಿಂದ ಹೊರಹಾಕಿದೆ ಮತ್ತು ಲಕ್ಷಾಂತರ ಜನರನ್ನು ಕ್ಷಾಮದ ಅಂಚಿಗೆ ತಳ್ಳಿದೆ. ಗಾಝಾದ ದಕ್ಷಿಣದಲ್ಲಿ ಈಜಿಪ್ಟ್ ಗಡಿಯಲ್ಲಿರುವ ರಫಾ ನಗರದಲ್ಲಿ ಇಸ್ರೇಲ್ ಮತ್ತಷ್ಟು ಆಕ್ರಮಣವನ್ನು ಪ್ರಾರಂಭಿಸುತ್ತದೆ ಎಂಬ ಆತಂಕವೂ ಇದೆ, ಇದು ಕರಾವಳಿ ಫೆಲೆಸ್ತೀನ್ ಎನ್ಕ್ಲೇವ್ನಲ್ಲಿ ಮಾನವೀಯ ಬಿಕ್ಕಟ್ಟನ್ನು ಮತ್ತಷ್ಟು ಹೆಚ್ಚಿಸುತ್ತದೆ.