ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಗಾರ್ಬೆಜ್ ಸಿಟಿ ನಂತ್ರ, ನೀರಿನ ಸಮಸ್ಯೆ ಉಲ್ಭಣಗೊಂಡಿದೆ. ಹನಿ ನೀರಿಗಾಗಿ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾದ ಬೆನ್ನಲ್ಲೇ, ನಗರದಲ್ಲಿ ಅನಗತ್ಯ ಉದ್ದೇಶಗಳಿಗಾಗಿ ನೀರು ಪೋಲು ಮಾಡುವುದನ್ನು ತಡೆಯುವ ನಿಟ್ಟಿನಲ್ಲಿ ದಂಡದ ಎಚ್ಚರಿಕೆ ನೀಡಲಾಗಿದೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವಂತ ಜಲಮಂಡಳಿಯ ಅಧ್ಯಕ್ಷ ಡಾ.ವಿ ರಾಮ್ ಪ್ರಸಾತ್ ಮನೋಹರ್ ಅವರು, ಕುಡಿಯುವ ನೀರನ್ನು ಅನ್ಯ ಉದ್ದೇಶಗಳಿಗೆ ಬಳಸಬಾರದು. ನೀರಿನ ಸಮಸ್ಯೆ ಇರುವ ಈ ಸಂದರ್ಭದಲ್ಲಿ ಮಿತವಾಗಿ ನೀರನ್ನು ಬಳಸುವಂತೆ ಮನವಿ ಮಾಡಿದ್ದಾರೆ.
ಕಾವೇರಿ ನೀರನ್ನು ಅನ್ಯ ಉದ್ದೇಶಕ್ಕೆ ಬಳಕೆ ಮಾಡಿದರೆ ದಂಡ ವಿಧಿಸುವುದಾಗಿ ಆದೇಶಿಸಲಾಗಿದೆ. ಕುಡಿಯುವ ನೀರನ್ನು ಅನ್ಯ ಉದ್ದೇಶಕ್ಕೆ ಬಳಸುವುದು ಕಂಡುಬಂದರೆ, ಮಾರ್ಚ್ 15ರಿಂದ ಸ್ಥಳದಲ್ಲೇ ದಂಡ ವಿಧಿಸಲಾಗುತ್ತದೆ. ಇದಕ್ಕಾಗಿ ಪ್ರತ್ಯೇಕ ಸ್ಥಳ ದಂಡ ಶುಲ್ಕದ ನಮೂನೆಯನ್ನು ಸಿದ್ಧಪಡಿಸಲಾಗುತ್ತಿದೆ. ಸಿಬ್ಬಂದಿ ಬೆಳಗ್ಗೆ ಮತ್ತು ಸಂಜೆ ಎರಡು ಪಾಳಿಯಲ್ಲಿ ವಾರ್ಡ್‌ಗಳಲ್ಲಿ ಸಂಚರಿಸಿ ಪರಿಶೀಲನೆ ಮಾಡುತ್ತಾರೆ. ಸಾರ್ವಜನಿಕರು 1916 ಸಹಾಯವಾಣಿಗೂ ಕರೆ ಮಾಡಿ ನೀರಿನ ದುರ್ಬಳಕೆ ಬಗ್ಗೆ ಮಾಹಿತಿ ನೀಡಬಹುದು ಎಂದು ಜಲಮಂಡಳಿ ಅಧ್ಯಕ್ಷ ಡಾ. ರಾಮ್‌ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
‘ಶೃಂಗೇರಿ ಪೋಕ್ಸೋ’ ಕೇಸ್: ತಾಯಿ ಸೇರಿ ‘ನಾಲ್ವರು ಆರೋಪಿ’ಗಳಿಗೆ 25 ಸಾವಿರ ದಂಡ, ’20 ವರ್ಷ’ ಜೈಲು ಶಿಕ್ಷೆ
ದೇಶಾದ್ಯಂತ ‘CAA’ ಜಾರಿ ಸಂಬಂಧ ‘ಕೇಂದ್ರ ಸರ್ಕಾರ’ದಿಂದ ಅಧಿಸೂಚನೆ ಪ್ರಕಟ | CAA Rules