ಬೆಂಗಳೂರು: ನಾನು ಬೆಂಗಳೂರು ಗ್ರಾಮಾಂತರದಲ್ಲಿ ಕಾಂಗ್ರೆಸ್ ಗೆಲ್ಲಿಸಿದ್ದು ಮಾಡಿದ ಇನ್ನೊಂದು ದೊಡ್ಡ ತಪ್ಪು ಎಂದು ಜೆಡಿಎಸ್ ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ವಾಗ್ಧಾಳಿ ನಡೆಸಿದ್ದಾರೆ.
ಈ ಕುರಿತಂತೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಈ ಮೈತ್ರಿ ದೇವೇಗೌಡರು, ನರೇಂದ್ರ ಮೋದಿ ಅವರ ಮಟ್ಟದಲ್ಲಿ ಆಗಿದೆ. 2018ರ ಸರ್ಕಾರದ ಅವಧಿಯಲ್ಲಿ ಅದ ಕಹಿ ಅನುಭವ, ತುಮಕೂರಿನಲ್ಲಿ ದೇವೆಗೌಡರ ಸೋಲನ್ನು ನಾವು ಮರೆತಿಲ್ಲ. ಕಳೆದ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಿಸಿದ್ದು ನಾವು ಮಾಡಿದ ಇನ್ನೊಂದು ದೊಡ್ಡ ತಪ್ಪು. ಅದನ್ನು ಸರಿ ಮಾಡಿಕೊಳ್ಳುವ ಕಾಲ ಸನ್ನಿಹಿತವಾಗಿದೆ, ಈ ಚುನಾವಣೆ ನಿರ್ಣಾಯಕ ಎಂದು ಅವರು ಹೇಳಿದರು.
ಇನ್ನು 45 ದಿನಗಳ ಕಾಲ ಪಕ್ಷದ ಪರವಾಗಿ ಪ್ರಚಾರ, ಕೆಲಸ ಮಾಡುತ್ತೇನೆ. ಮೈತ್ರಿಕೂಟದ ಪರವಾಗಿ ಕೆಲಸ ಮಾಡುತ್ತೇನೆ. ಒಳ್ಳೆಯ ಫಲಿತಾಂಶ ಬರಲು ಕಾಯಾ ವಾಚಾ ಮನಸಾ ಕೆಲಸ ಮಾಡುತ್ತೇನೆ. ನನಗೆ ಹಾಗೂ ಕುಮಾರಣ್ಣ ಅವರಿಗೆ ಮಂಡ್ಯದಿಂದ ಸ್ಪರ್ಧೆ ಮಾಡುವಂತೆ ಅತೀವ ಒತ್ತಡವಿದೆ. ಇದನ್ನು ಪ್ರಾಮಾಣಿಕವಾಗಿ ನಿಮ್ಮ (ಮುಖಂಡರು) ಮುಂದೆ ಇಡುತ್ತೇನೆ. ದೇವೇಗೌಡರು 30 ವರ್ಷದಿಂದ ಪಕ್ಷವನ್ನು ಕಟ್ಟಿದ್ದಾರೆ. ನಮ್ಮ ತಂದೆಯವರು 15 ವರ್ಷಗಳಿಂದ ಪಕ್ಷವನ್ನು ಉಳಿಸಿಕೊಂಡು ಬಂದಿದ್ದಾರೆ. ಹೀಗಾಗಿ ಪಕ್ಷದ ಉಳಿವಿಗಾಗಿ ನಾನು ಈ ಚುನಾವಣೆಯಲ್ಲಿ ದುಡಿಯುತ್ತೇನೆ ಎಂದರು.
ಮಂಡ್ಯ ನಮ್ಮ ಪಕ್ಷದ ಹೃದಯ ಇದ್ದಂತೆ. ಅಲ್ಲಿ ಒಮ್ಮೆ ಎಲ್ಲಾ ಕ್ಷೇತ್ರಗಳನ್ನು ಜೆಡಿಎಸ್ ಗೆದ್ದಿತ್ತು. ಕಳೆದ ಚುನಾವಣೆಯಲ್ಲಿ ಕೆ ಆರ್ ಪೇಟೆ ಬಿಟ್ಟು ಎಲ್ಲಾ ಕಡೆ ಸೋತಿದ್ದೇವೆ. ಎಷ್ಟು ನೋವಾಗುತ್ತೆ ಎನ್ನುವುದನ್ನು ಆಲೋಚನೆ ಮಾಡಿ. ಹೀಗಾಗಿ ಎಲ್ಲಾ ಕ್ಷೇತ್ರಗಳಲ್ಲಿ ಪ್ರಚಾರ ಮಾಡುತ್ತೇನೆ, ನಾನು ಚುನಾವಣೆಗೆ ನಿಲ್ಲುವುದಿಲ್ಲ. ರಾಮನಗರ ಬಿಟ್ಟು ನಾನು ಎಲ್ಲಿಯೂ ಹೋಗುವುದಿಲ್ಲ. ರಾಮನಗರ ಹೊರತುಪಡಿಸಿ ನನ್ನ ರಾಜಕೀಯ ಜೀವನವನ್ನು ನಾನು ಊಹೆಯೂ ಮಾಡೋದಿಲ್ಲ. ನಮ್ಮ ಮೈತ್ರಿಕೂಟದ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು, ಇದು ನಮ್ಮ ಸಂಕಲ್ಪ ಎಂದು ನಿಖಿಲ್ ಕುಮಾರಸ್ವಾಮಿ ಅವರು ನೇರ ಮಾತುಗಳಲ್ಲಿ ಹೇಳಿದರು.
‘ಶೃಂಗೇರಿ ಪೋಕ್ಸೋ’ ಕೇಸ್: ತಾಯಿ ಸೇರಿ ‘ನಾಲ್ವರು ಆರೋಪಿ’ಗಳಿಗೆ 25 ಸಾವಿರ ದಂಡ, ’20 ವರ್ಷ’ ಜೈಲು ಶಿಕ್ಷೆ