ಮಂಗಳೂರು: ರಾಜ್ಯದಲ್ಲೊಂದು ರಕ್ಷಸ ಕೃತ್ಯ ಬಯಲಾಗಿದೆ. ಅದೇ ತನ್ನ ವೃದ್ಧ ಮಾವನನ್ನೇ ಸೊಸೆಯೊಬ್ಬಳು ಆತ ವಾಕಿಂಗ್ ಸ್ಟಿಕ್ ನಿಂದ ಅಮಾನವೀಯವಾಗಿ ಥಳಿಸಿರುವಂತ ಕೃತ್ಯ ಮಂಗಳೂರಲ್ಲಿ ನಡೆದಿದೆ.
ಮಂಗಳೂರು ನಗರದ ಅತ್ತಾವರದ ಕೆಇಬಿಯಲ್ಲಿ ಅಧಿಕಾರಿಯಾಗಿ ಉಮಾಶಂಕರಿ ಎಂಬುವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹೀಗೆ ಅಧಿಕಾರಿಯಾಗಿದ್ದು, ಮಾನವೀಯತೆಯಿಂದ ವರ್ತಿಸಬೇಕಾಗಿದ್ದಂತ ಮಹಿಳೆ ಮಾತ್ರ, ಮಾಡಿರೋದು ರಕ್ಷಸ ಕೃತ್ಯ. ಮನೆಯಲ್ಲಿರುವಂತ ವೃದ್ಧ ಮಾನವನನ್ನು ಅವರ ವಾಕಿಂಗ್ ಸ್ಟಿಕ್ ಕಸಿದುಕೊಂಡು ಥಳಿಸಿ, ಹಲ್ಲೆ ಮಾಡಿರುವಂತ ಕೃತ್ಯ ಮನೆಯಲ್ಲಿದ್ದಂತ ಸಿಸಿಟಿವಿಯಲ್ಲಿನ ದೃಶ್ಯಾವಳಿಯಿಂದ ಬಯಲಾಗಿದೆ.
ಸೊಸೆಯಿಂದ ಹಲ್ಲೆಗೊಳಗಾದಂತ ಪದ್ಮನಾಭ ಸುವರ್ಣ(87) ಗಾಯಗೊಂಡಿದ್ದಾರೆ. ಈ ಘಟನೆ ಸಂಬಂಧ ಮನೆಗೆ ಬಂದಂತ ಪುತ್ರನಿಗೆ ತಂದೆ ಹೇಳಿದಾಗಿ ಪತ್ನಿ ಉಮಾಶಂಕರಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಜೊತೆಗೆ ಸಿಸಿಟಿವಿ ದೃಶ್ಯಾವಳಿಯನ್ನು ಪೊಲೀಸರಿಗೆ ದೂರಿನ ಜೊತೆಗೆ ಸಲ್ಲಿಸಿ, ಸೂಕ್ತ ಕಾನೂನು ಕ್ರಮಕ್ಕೆ ಮನವಿ ಮಾಡಿದ್ದಾರೆ.
ಅಂದಹಾಗೇ ವೃದ್ಧ ಮಾನವನನ್ನು ಸೊಸೆ ಉಮಾಶಂಕರಿ ಥಳಿಸುವಂತ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವೈರಲ್ ಆಗಿರುವಂತ ವೀಡಿಯೋ ದೃಶ್ಯಾವಳಿಯಲ್ಲಿ ಮಂಗಳೂರು ನಗರದ ಅತ್ತಾವರದ ಕೆಇಬಿಯಲ್ಲಿ ಅಧಿಕಾರಿಯಾಗಿರುವ ಉಮಾಶಂಕರಿ ಮಾವನಿಗೆ ವಾಕಿಂಗ್ ಸ್ಟಿಕ್ ನಿಂದ ಥಳಿಸಿದ್ದಾಳೆ. ಈ ಸಂದರ್ಭದಲ್ಲಿ ಪದ್ಮನಾಭ ಸುವರ್ಣ ಅವರು ಹೊಡೆಯದಂತೆ ಕೈ ಅಡ್ಡಮಾಡಿ, ವಾಕಿಂಗ್ ಸ್ಟಿಕ್ ಹಿಡಿದು ತಡೆಯಲು ಹೋದಾಗ ಅವರನ್ನೇ ಉಮಾಶಂಕರಿ ತಳ್ಳಿದ್ದಾರೆ. ಆಗ ಸೋಫಾ ಮೇಲೆಯೇ ಬಿದ್ದಂತ ಪದ್ಮನಾಫ ಸುವಣ್ಣ ಅವರು ನೋವಿನಿಂದ ಕೆಳಗೆ ಬಿದ್ದು ನರಳುತ್ತಿರೋದನ್ನು ಕಾಣಬಹುದಾಗಿದೆ.
‘ಕಾಂಗ್ರೆಸ್ ಪಕ್ಷ’ದಿಂದ ಮಾತ್ರ ‘ಬಡವರ ಅಭಿವೃದ್ಧಿ’ ಸಾಧ್ಯ – ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
‘ಶೃಂಗೇರಿ ಪೋಕ್ಸೋ’ ಕೇಸ್: ತಾಯಿ ಸೇರಿ ‘ನಾಲ್ವರು ಆರೋಪಿ’ಗಳಿಗೆ 25 ಸಾವಿರ ದಂಡ, ’20 ವರ್ಷ’ ಜೈಲು ಶಿಕ್ಷೆ