ಚಿಕ್ಕಮಗಳೂರು: ಕಳೆದ ಮೂರು ದಿನಗಳ ಹಿಂದೆ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದಂತ ಶೃಂಗೇರಿ ಪೋಕ್ಸೋ ಪ್ರಕರಣದಲ್ಲಿ 53 ಆರೋಪಿಗಳಲ್ಲಿ ತಾಯಿ ಸೇರಿ ನಾಲ್ವರನ್ನು ದೋಷಿ ಎಂಬುದಾಗಿ ಚಿಕ್ಕಮಗಳೂರಿನ ವಿಶೇಷ ಪೋಕ್ಸೋ ನ್ಯಾಯಾಲಯವು ಆದೇಶಿಸಿತ್ತು. ಈ ಬೆನ್ನಲ್ಲೇ ಇಂದು ಪ್ರಕರಣ ಸಂಬಂಧ ತಾಯಿ ಸೇರಿದಂತೆ ನಾಲ್ವರು ಆರೋಪಿಗಳಿಗೆ ತಲಾ 25 ಸಾವಿರ ದಂಡ, 20 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಈ ಕುರಿತಂತೆ ಚಿಕ್ಕಮಗಳೂರು ವಿಶೇಷ ಪೋಕ್ಸೋ ನ್ಯಾಯಾಲಯವು ತೀರ್ಪನ್ನು ಪ್ರಕಟಿಸಿದೆ. ಬಾಲಕಿಯ ತಾಯಿ ಗೀತಾ, ಗಿರೀಶ್, ದೇವಿಶರಣ್ ಗೆ ಶಿಕ್ಷೆಯನ್ನು ವಿಧಿಸಲಾಗಿದೆ. ಅಭಿನಂದನ್ ಆಲಿಯಾಸ್ ಸ್ಮಾಲ್ ಅಭಿಗೆ ಜೈಲು ಶಿಕ್ಷೆ ವಿಧಿಸಿದೆ.
ಬಾಲಕಿಯನ್ನ ತಾಯಿಯೇ ವೇಶ್ಯಾವಾಟಿಗೆ ದೂಡಿದ್ದಂತ ಪ್ರಕರಣದಲ್ಲಿ 39 ಎಫ್ಐಆರ್, 53 ಜನರ ಬಂಧನವಾಗಿತ್ತು. 2021ರಲ್ಲಿ ಶೃಂಗೇರಿ ಪಟ್ಟಣದಲ್ಲಿ ನಡೆದಿದ್ದಂತ ಘಟನೆ ಬೆಳಕಿಗೆ ಬಂದಿತ್ತು.
2020ರ ಸೆಪ್ಟೆಂಬರ್ ನಿಂದ ನಿರಂತರವಾಗಿ ಬಾಲಕಿಯ ಮೇಲೆ ಅತ್ಯಾಚಾರ ನಡೆಸಲಾಗಿತ್ತು. 2021ರ ಜನವರಿಯವರೆಗೆ ಬ್ಲಾಕ್ ಮೇಲ್ ಮಾಡಿ ರೇಪ್ ಮಾಡಲಾಗಿತ್ತು. ಜನವರಿ 27ರಂದು ಪ್ರಕರಣ ದಾಖಲಾಗಿತ್ತು.
53 ಜನರ ವಿರುದ್ಧ ಪ್ರಕರಣವನ್ನು ಪೊಲೀಸರು ದಾಖಲಿಸಿದ್ದರು. ಇವರಲ್ಲಿ ನಾಲ್ವರ ಮೇಲಿನ ಅಪರಾಧವನ್ನು ಕೋರ್ಟ್ ಸಾಭೀತು ಪಡಿಸಿತ್ತು. 49 ಜನರನ್ನು ಕೇಸ್ ನಿಂದ ಖುಲಾಸೆಗೊಳಿಸಲಾಗಿತ್ತು.
ಇನ್ನೂ 38 ವಿವಿಧ ರೀತಿಯ ಚಾರ್ಜ್ ಶೀಟ್ ಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಈ ಎಲ್ಲವನ್ನು ಪರಿಶೀಲಿಸಿದ್ದಂತ ನ್ಯಾಯಾಲಯವು ಅಂತಿಮವಾಗಿ ಸಂತ್ರಸ್ತೆಯ ತಾಯಿ ಸೇರಿದಂತೆ ನಾಲ್ವರು ಆರೋಪಿಗಳಿಗೆ ತಲಾ 25 ಸಾವಿರ ದಂಡ, 20 ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸಿ ಮಹತ್ವದ ಆದೇಶವನ್ನು ಹೊರಡಿಸಿದೆ. ಈ ಮೂಲಕ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದಂತ ಶೃಂಗೇರಿ ಪೋಕ್ಸೋ ಕೇಸ್ ಪ್ರಕರಣದ ಆರೋಪಿಗಳಿಗೆ ಶಿಕ್ಷೆಯಾದಂತೆ ಆಗಿದೆ.
‘ಹಳೆಯ ತಂತ್ರ, ಎಂದಿಗೂ ರಹಸ್ಯವಲ್ಲ’: ಬಿಜೆಪಿ ಸಂಸದರ ‘ಸಂವಿಧಾನ ಬದಲಾವಣೆ’ ಹೇಳಿಕೆಗೆ ಚಿದಂಬರಂ ತಿರುಗೇಟು