ರಾಯಚೂರು: ರಾಜ್ಯದಲ್ಲೇ ಹೃದಯವಿದ್ರಾವಕ ಘಟನೆ ಎನ್ನುವಂತೆ ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇವರಲ್ಲಿ ತಂದೆ-ತಾಯಿ ಸಾವನ್ನಪ್ಪಿದೇ, ಮಗಳು ಪ್ರಾಣಾಪಾಯದಿಂದ ಪಾರಾಗಿರೋ ಘಟನೆ ರಾಯಚೂರಲ್ಲಿ ನಡೆದಿದೆ.
ರಾಯಚೂರು ನಗರದ ಹೊರವಲಯದ ಯರಮರಸ್ ಬೈಪಾಸ್ ರಸ್ತೆಯ ಓವರ್ ಬ್ರಿಡ್ಜ್ ಕೆಳಗೆ ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಯತ್ನಿಸಿರೋ ಘಟನೆ ನಡೆದಿದೆ. ಈ ಘಟನೆಯಲ್ಲಿ ತಂದೆ-ತಾಯಿ ಸ್ಥಳದಲ್ಲೇ ಸಾವನ್ನಪ್ಪಿದ್ರೇ, ಮಗಳ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಮೃತರನ್ನು ಮೊಹಮ್ಮದ್ ಸಮೀರ್(45) ಹಾಗೂ ಜುಲ್ಲೇಕಾ ಬೇಗಂ(40) ಎಂದು ಗುರುತಿಸಲಾಗಿದೆ. ಗಾಯಾಳಾಗಿ ಚಿಕಿತ್ಸೆ ಪಡೆಯುತ್ತಿರುವಂತ ಮೈಮೂಲಾ ಎಂದು ತಿಳಿದು ಬಂದಿದೆ.
ರೈಲಿಗೆ ತಲೆ ಕೊಟ್ಟು ಮೊಹಮ್ಮದ್ ಸಮೀರ್, ಜುಲ್ಲೇಕಾ ಬೇಗಂ ಆತ್ಮಹತ್ಯೆ ಮಾಡಿಕೊಂಡಿದ್ದರೇ, ಈ ಘಟನೆಯಲ್ಲಿ ಅವರ ಮಗಳು ಮೈಮೂಲಾ ಕೈ ಮುರಿದುಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ವಿಷಯ ತಿಳಿದು ಸ್ಥಳಕ್ಕೆ ರೈಲ್ವೆ ಪೊಲೀಸರು ಆಗಮಿಸಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.