ಬಳ್ಳಾರಿ : ಅಕಾಲಿಕ ನಿಧನ ಹೊಂದಿದ ಸಿರುಗುಪ್ಪ ತಾಲೂಕಿನ ಭೈರಾಪೂರ ಗ್ರಾಮದ ಮಾರುತಿ ಶೆಟ್ಟಿ.ಬಿ ಅವರ ನೇತ್ರಗಳನ್ನು ದಾನ ಮಾಡಿ, ಕುಟುಂಬದ ಸದಸ್ಯರು ಮಾನವೀಯತೆ ಮೆರೆದರು.
ಅನಾರೋಗ್ಯದ ಹಿನ್ನಲೆಯಲ್ಲಿ ಚಿಕಿತ್ಸೆಗೆಂದು ಬಳ್ಳಾರಿಯ ಆದರ್ಶ ಹಾರ್ಟ್‍ಕೇರ್ ಸೆಂಟರ್, ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ 68 ನೇ ವಯಸ್ಸಿನ ಮಾರುತಿ ಶೆಟ್ಟಿ ತಂದೆ ನಾರಾಯಣ ಶೆಟ್ಟಿ ಅವರು, ಚಿಕಿತ್ಸೆ ಫಲಕಾರಿಯಾಗದೆ ಮಾ.08 ರಂದು ಮರಣ ಹೊಂದಿದ್ದರು.
ಅನ್ಯಕಾರ್ಯ ನಿಮಿತ್ಯ ಆಸ್ಪತ್ರೆಗೆ ತೆರಳಿದ್ದ ಸಮುದಾಯ ಆರೋಗ್ಯ ಅಧಿಕಾರಿ ಸಂತೋಷ್ ಕುಟುಂಬದ ಸದಸ್ಯರಿಗೆ ಮರಣಾನಂತರ ಇತರರ ಬಾಳಿಗೆ ಬೆಳಕಾಗುವ ಅವಕಾಶ ಹಿನ್ನಲೆಯಲ್ಲಿ ನೇತ್ರದಾನವನ್ನು ಮಾಡುವ ಕುರಿತು ಮಹತ್ವ ತಿಳಿಸಿದ ನಂತರ ಮಗನಾದ ಪ್ರದೀಪ್ ಅವರು ಒಪ್ಪಿಗೆ ಸೂಚಿಸಿದ ತಕ್ಷಣ ವಿಮ್ಸ್ ನೇತ್ರಬಂಡಾರಕ್ಕೆ ಸಂಪರ್ಕಿಸಲಾಗಿದೆ.
ವಿಮ್ಸ್ ನೇತ್ರತಜ್ಞರಾದ ಡಾ.ಪರಸಪ್ಪ ಅವರು ತಕ್ಷಣ ಡಾ.ಅನುಷಾ ನೇತೃತ್ವದಲ್ಲಿ ತಂಡವನ್ನು ಕಳುಹಿಸಿ ಆದರ್ಶ ಆಸ್ಪತ್ರೆಯ ವ್ಯವಸ್ಥಾಪಕರಾದ ಪಲ್ಲೇದ ಬಸವರಾಜ, ಹಾಗೂ ಡಾ.ಕೋಟ್ರೇಶ್ ಅವರ ಸಹಕಾರದೊಂದಿಗೆ ಕಣ್ಣಿನ ಮಸೂರ (ಕಾರ್ನಿಯಾ) ವನ್ನು ಪಡೆದುಕೊಂಡಿದ್ದಾರೆ.
ನೋವಿನಲ್ಲೂ ಕಣ್ಣಿನ ದಾನ ಮಾಡಿದ ಕುಟುಂಬದ ಸದಸ್ಯರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ವೈ ರಮೇಶಬಾಬು ಅವರು ಸಾಂತ್ವನ ನುಡಿಗಳನ್ನು ಹೇಳಿದ್ದಾರೆ.
ಪ್ರಸ್ತುತ ದೇಶದಲ್ಲಿ ಅಂಗಾಂಗ ದಾನ ನೋಂದಣಿ ಅಭಿಯಾನ ನಡೆಯುತ್ತಿದ್ದು, ಬಳ್ಳಾರಿ ಜಿಲ್ಲೆ, 4378 ಜನರ ನೋಂದಣಿ ಮಾಡಿಸಿ ಮೊದಲ ಸ್ಥಾನದಲ್ಲಿದೆ ಎಂದು ತಿಳಿಸಿದ ಅವರು, ನಮ್ಮ ದೇಹದ ಕಣ್ಣು, ಹೃದಯ, ಲೀವರ್, ಶ್ವಾಸಕೋಶ, ಪಿತ್ತಜನಕಾಂಗ ಕಿಡ್ನಿ, ಚರ್ಮ ಮುಂತಾದವುಗಳನ್ನು ದಾನ ಮಾಡಬಹುದಾಗಿದೆ. ಇನ್ನೊಬ್ಬರ ಬಾಳಿಗೆ ಬೆಳಕಾಗಿ ಜೀವ ಸಾರ್ಥಕತೆಗೆ ಪಡೆದ ಕುಟುಂಬದ ಸದಸ್ಯರ ತೀರ್ಮಾನ ಇತರರಿಗೂ ಸ್ಪೂರ್ತಿಯಾಗಿದ್ದಾರೆ ಎಂದು ಡಾ.ವೈ.ರಮೇಶ್ ಬಾಬು ಅವರು ಹೇಳಿದರು.
‘ಪ್ರತಿದಿನ ಹಲವಾರು ಕಾರಣಗಳಿಂದ ಕಣ್ಣಿನ ದೃಷ್ಟಿ ಕಳೆದುಕೊಂಡು ಕಣ್ಣುಗಳ ಜೋಡಣೆಗಾಗಿ 60 ಜನ ಬೇಡಿಕೆಯ ನೋಂದಣಿ ಮಾಡಿಸುತ್ತಿದ್ದಾರೆ. ಪ್ರತಿ ತಿಂಗಳು ನೇತ್ರ ಬಂಡಾರಕ್ಕೆ 4 ರಿಂದ 5 ನೇತ್ರದಾನವಾಗುತ್ತಿದ್ದು, ನೋಂದಣಿ ಮಾಡಿಸಿದವರಿಗೆ ಜೋಡಿಸಲಾಗುತ್ತಿದೆ. ಮುಖ್ಯವಾಗಿ ವಯಸ್ಕರು ಮರಣ ಹೊಂದಿದ ಸಂದರ್ಭದಲ್ಲಿ ನೇತ್ರದಾನ ಮಾಡಲು ಮುಂದೆ ಬರಬೇಕು’ ಎಂದು ವಿಮ್ಸ್ ನೇತ್ರತಜ್ಞ ಡಾ.ಪರಸಪ್ಪ ಅವರು ವಿನಂತಿಸಿದ್ದಾರೆ.
BIG NEWS: ‘ದೇವರ ಹುಂಡಿಗೆ ಹಣ’ ಹಾಕುವುದು ಅಸಹ್ಯಕರ: ‘ಸಾಹಿತಿ ಕುಂ.ವೀರಭದ್ರಪ್ಪ’ ವಿವಾದಾತ್ಮಕ ಹೇಳಿಕೆ
BREAKING: ರಾಜ್ಯದ ಈ ಪ್ರಸಿದ್ಧ ‘ಶ್ರೀರಾಮಮಂದಿರ’ ಸ್ಪೋಟಿಸೋದಾಗಿ ‘ಅಲ್ಲಾ ಹು ಹೆಸರಿ’ನಲ್ಲಿ ‘ಬಾಂಬ್ ಬೆದರಿಕೆ’ ಪತ್ರ