ಬೀದರ್: ಸಿಎಂ ಅಭಿನಂದನಾ ಕಾರ್ಯಕ್ರಮದಲ್ಲಿ ಬಿಆರ್ ಪಾಟೀಲ್ ಅವರಿಗೆ ನೋವಾಗಿದ್ದರೇ ಅದಕ್ಕೆ ವಿಷಾದ ವ್ಯಕ್ತ ಪಡಿಸುತ್ತೇನೆ. ಅವರ ಅಸಮಾಧಾನಕ್ಕೆ ನಾನು ಕ್ಷಮೆ ಕೋರುತ್ತೇನೆ ಎಂಬುದಾಗಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನನಗೆ ಬಿಆರ್ ಪಾಟೀಲ್ ಬಗ್ಗೆ ಅಪಾರವಾದಂತ ಗೌರವವಿದೆ. ಅವರು ಹಿರಿಯರಾಗಿದ್ದಾರೆ. ನಾನು ಸಿಎಂ ಅಭಿನಂದನಾ ಕಾರ್ಯಕ್ರಮಕ್ಕೆ ಮೊದಲು ಒಂದು ದಿನ ಮುಂಚೆಯೇ ಹೋಗಿ ಅವರಿಗೆ ಶಿಷ್ಟಾಚಾರದ ಪ್ರಕಾರವಾಗಿ ಮೊದಲ ಸಾಲಿನಲ್ಲೇ ಕುರ್ಚಿ ಹಾಕಿಸಿದ್ದೆನು. ಅಲ್ಲದೇ ಅದಕ್ಕೆ ಅವರ ಹೆಸರನ್ನು ಅಂಟಿಸಿದ್ದನ್ನು ನೋಡಿಕೊಂಡು ಬಂದಿದ್ದೆನು ಎಂದು ಹೇಳಿದರು.
ನಾನು ಸಿಎಂ ಸಿದ್ಧರಾಮಯ್ಯ ಅವರನ್ನು ಸ್ವಾಗತ ಮಾಡಿಕೊಂಡು ಬರುವಾಗ ವಿಳಂಬವಾಗಿದೆ. ಆ ಸಮಯದಲ್ಲಿ ಹಿರಿಯರಾಗಿದ್ದಂತ ಬಿಆರ್ ಪಾಟೀಲ್ ಬಂದಿದ್ದನ್ನು ನಾನು ಗಮನಿಸಿರಲಿಲ್ಲ ಎಂದರು.
ಸಿಎಂ ಅಭಿನಂದನಾ ಕಾರ್ಯಕ್ರಮದಲ್ಲಿ ಸಂದರ್ಭದಲ್ಲಿ ಅಚಾತುರ್ಯವಾಗಿದೆ. ಈ ಘಟನೆಯ ಬಗ್ಗೆ ನಾನು ಅತ್ಯಂತ ವಿಷಾದ ವ್ಯಕ್ತ ಪಡಿಸುತ್ತೇನೆ. ಬಿಆರ್ ಪಾಟೀಲ್ ಅವರು ಮನಸ್ಸಿನಲ್ಲಿ ಯಾವುದು ಇಟ್ಟುಕೊಳ್ಳಬಾರದು ಅಂತ ಈ ಮೂಲಕ ಅವರಲ್ಲಿ ವಿನಂತಿಸುತ್ತೇನೆ ಎಂದರು.
BREAKING: ರಾಜ್ಯದ ಈ ಪ್ರಸಿದ್ಧ ‘ಶ್ರೀರಾಮಮಂದಿರ’ ಸ್ಪೋಟಿಸೋದಾಗಿ ‘ಅಲ್ಲಾ ಹು ಹೆಸರಿ’ನಲ್ಲಿ ‘ಬಾಂಬ್ ಬೆದರಿಕೆ’ ಪತ್ರ