ನವದೆಹಲಿ: ಇಂದು ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಮೊದಲ ಅಧಿಕೃತ ಪಟ್ಟಿಯನ್ನು ಇಂದು ಪ್ರಕಟಿಸಲಾಗಿದೆ. ವಯನಾಡು ಕ್ಷೇತ್ರದಿಂದ ರಾಹುಲ್ ಗಾಂಧಿ ಕಣಕ್ಕೆ ಇಳಿಯಲಿದ್ದಾರೆ. ಅಲ್ಲದೇ ಮೊದಲ ಪಟ್ಟಿಯಲ್ಲೇ ಕರ್ನಾಟಕದ 7 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ.
ಈ ಕುರಿತಂತೆ ನವದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಅವರು, ನಿನ್ನೆಯ ದಿನದಂದು ಕಾಂಗ್ರೆಸ್ ಪಕ್ಷದಿಂದ ಲೋಕಸಭಾ ಚುನಾವಣೆಗಾಗಿ ಯುವ ನ್ಯಾಯ ಗ್ಯಾರಂಟಿಯನ್ನು ಘೋಷಣೆ ಮಾಡಲಾಯಿತು. ದೇಶದ ಯುವ ಜನತೆಗೆ ಉದ್ಯೋಗವನ್ನು ಒದಗಿಸುವ ನಿಟ್ಟಿನಲ್ಲಿ ನಾವು ನೆರವಾಗಲಿದ್ದೇವೆ. 30 ಲಕ್ಷ ಉದ್ಯೋಗವನ್ನು ಯುವ ನ್ಯಾಯ ಗ್ಯಾರಂಟಿ ಯೋಜನೆ ಜಾರಿಗೊಳಿಸಿ ನೀಡಲಾಗುತ್ತದೆ ಎಂದರು.
ಯುವ ಜನತೆ ನಿರುದ್ಯೋಗದಿಂದ ದೇಶದಲ್ಲಿ ಬಳಲುತ್ತಿದ್ದಾರೆ. ಕಾಂಗ್ರೆಸ್ ಕೊಟ್ಟ ಭರವಸೆಗಳನ್ನು ಈಡೇರೇಸುತ್ತಿದೆ. ನಾವು ಕೊಟ್ಟ ಗ್ಯಾರಂಟಿಗಳನ್ನು ಈಡೇರಿಸಲು ಸಿದ್ಧರಿದ್ದೇವೆ. ತೆಲಂಗಾಣ, ಕರ್ನಾಟಕದಲ್ಲಿ ಏನಾಯ್ತು ಅಂತ ಜನರು ನೋಡಿದ್ದಾರೆ. ಕಳೆದ ನಿನ್ನೆ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯಿತು. ಈ ಸಭೆಯಲ್ಲಿ 39 ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ ಎಂದರು.
ಮೊದಲ ಪಟ್ಟಿಯಲ್ಲಿ 15 ಸಾಮಾನ್ಯ ವರ್ಗದವರಿಗೆ, 24 ಎಸ್ಸಿ, ಎಸ್ಟಿ ಓಬಿಸಿ ಹಾಗೂ ಮೈನಾರಿಟಿ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ ಎಂದು ತಿಳಿಸಿದರು.
ಹೀಗಿದೆ ಕರ್ನಾಟಕದ 7 ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ
- ಚಿತ್ರದುರ್ಗ – ಬಿಎನ್ ಚಂದ್ರಪ್ಪ
- ಬಿಜಾಪುರ – ಹೆಚ್ ಆರ್ ರಾಜು ಆಲಗೂರು
- ಶಿವಮೊಗ್ಗ – ಗೀತಾ ಶಿವರಾಜ್ ಕುಮಾರ್
- ಹಾಸನ- ಎಂ. ಶ್ರೇಯಸ್ ಪಟೇಲ್
- ತುಮಕೂರು – ಮುದ್ದಹನುಮೇಗೌಡ
- ಮಂಡ್ಯ – ವೆಂಕಟರಾಮೇಗೌಡ ( ಸ್ಟಾರ್ ಮಂಜು)
- ಬೆಂಗಳೂರು ಗ್ರಾಮಾಂತರ – ಡಿ.ಕೆ ಸುರೇಶ್
ಹೀಗಿದೆ 39 ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ
First list of 39 Congress candidates for the upcoming Lok Sabha elections pic.twitter.com/EN1ZG1KUeT
— ANI (@ANI) March 8, 2024