ಬೀದರ್: ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರ ತವರಲ್ಲೇ ಧಾರುಣ ಘಟನೆಯೊಂದು ನಡೆದಿದೆ. ಜೋಳ ಕಟಾವು ಮಾಡೋದಕ್ಕೆ ಜಮೀನಿಗೆ ತೆರಳಿದ್ದಂತ ಮಹಿಳೆಯ ಮೇಲೆ ಕಾಡು ಹಂದಿ ದಾಳಿ ಮಾಡಿದ ಪರಿಣಾಮ ಸಾವನ್ನಪ್ಪಿರುವಂತ ಘಟನೆ ನಡೆದಿದೆ.
ಬೀದರ್ ತಾಲೂಕಿನ ಹೊಕ್ರಾಣ(ಕೆ) ಗ್ರಾಮದಲ್ಲಿ ಕವಿತಾ ರವಿಕುಮಾರ್(45) ಎಂಬ ಮಹಿಳೆ, ಅಹಮ್ಮದ್ ಆಲಿ ಖಾನ್ ಸಾಬ್ ಎಂಬುವರ ಜಮೀನಿಗೆ ಜೋಳ ಮುರಿಯುವುದಕ್ಕೆ ತೆರಳಿದ್ದರು. ಈ ವೇಳೆಯಲ್ಲಿ ಕಾಡು ಹಂದಿ ಏಕಾಏಕಿ ದಾಳಿ ಮಾಡಿ, ಗಂಭೀರವಾಗಿ ಗಾಯಗೊಳಿಸಿತ್ತು. ತಕ್ಷಣ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕೊಡೊಯ್ಯುವ ವೇಳೆಯಲ್ಲಿ ಮಾರ್ಗಮಧ್ಯೆ ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ.
ಈ ವಿಷಯ ತಿಳಿದಂತ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು, ಹೊಕ್ರಾಣ(ಕೆ) ಗ್ರಾಮಕ್ಕೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ಅಲ್ಲದೇ ಪರಿಹಾರ ನೀಡುವುದಾಗಿ ಭರವಸೆ ನೀಡಿದರು. ಈ ಸಂಬಂಧ ಮನ್ನಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದಲ್ಲಿ ₹ 17,836 ಕೋಟಿ ಬಂಡವಾಳ ಹೂಡಿಕೆ: 27,067 ಹೊಸ ಉದ್ಯೋಗ ಸೃಷ್ಟಿ- ಸಿಎಂ ಸಿದ್ಧರಾಮಯ್ಯ