ಬೆಂಗಳೂರು: ನಗರದಲ್ಲಿ ನೀರಿನ ಬಿಕ್ಕಟ್ಟು ಎದುರಾಗಿದೆ. ಟ್ಯಾಂಕರ್ ನೀರು ದುಬಾರಿಯಾಗಿದೆ. ಇದರ ನಡುವೆ ನೀರಿನ ಬಿಕ್ಕಟ್ಟು ನಿವಾರಿಸಲು ಬಿಬಿಎಂಪಿಯಿಂದ ವಾರ್ಡ್ ವಾರು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿ ಆದೇಶಿಸಿದೆ.
ಈ ಕುರಿತಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ ಕಚೇರಿ ಆದೇಶ ಹೊರಡಿಸಲಾಗಿದ್ದು, ಪಾಲಿಕೆ ವ್ಯಾಪ್ತಿಯ ರಾಜರಾಜೇಶ್ವರಿ ನಗರ ವಲಯ ವ್ಯಾಪ್ತಿಯಲ್ಲಿ ಪ್ರಸ್ತುತ ಕುಡಿಯುವ ನೀರಿನ ಅಭಾವ ಹೆಚ್ಚಾಗಿದ್ದು, ಸಾಕಷ್ಟು ಕೊಳವೆ ಭಾವಿಗಳು ಬತ್ತಿ ಹೋಗಿದ್ದಾವೆ ಎಂದಿದೆ.
ಸಾರ್ವಜನಿಕರಿಗೆ ಸಮರ್ಪಕವಾಗಿ ಕುಡಿಯುವ ನೀರನ್ನು ಒದಗಿಸುವ ಹಿತದೃಷ್ಟಿಯಿಂದ ಬೆಂಗಳೂರು ಜಲಮಂಡಳಿ ಮತ್ತು ಬಿಬಿಎಂಪಿ ಈ ಎರಡು ಇಲಾಖೆಗಳ ಅಧಿಕಾರಿಗಳು ತುರ್ತು ಅಗತ್ಯ ಕ್ರಮ ಕೈಗೊಂಡು, ನೀರಿನ ಸಮಸ್ಯೆಯನ್ನು ಬಗೆಹರಿಸಲು ರಾಜರಾಜೇಶ್ವರಿ ವಲಯದ 14 ವಾರ್ಡ್ ಗಳಿಗೆ ನೋಡಲ್ ಅಧಿಕಾರಿಗಳನ್ನು ನಿಯೋಜಿಸಿ ಆದೇಶಿಸಿದೆ.
ಹೀಗಿದೆ ವಾರ್ಡ್ ವಾರು ನೋಡಲ್ ಅಧಿಕಾರಿಗಳ ಪಟ್ಟಿ
‘ಸಂಸದ ಪ್ರತಾಪ್ ಸಿಂಹ’ ವಿರುದ್ಧ ಸುದ್ದಿಗೋಷ್ಠಿಗೆ ‘ಎಂ.ಲಕ್ಷ್ಮಣ್’ಗೆ ವಿಧಿಸಿದ್ದ ನಿರ್ಬಂಧ ‘ಕೋರ್ಟ್ ತೆರವು’
BREAKING:ರಾಷ್ಟ್ರಪತಿಗಳಿಂದ ರಾಜ್ಯಸಭೆಗೆ ‘ಸುಧಾಮೂರ್ತಿ’ ನಾಮನಿರ್ದೇಶನ