ಬೆಂಗಳೂರು: ನಗರದಲ್ಲಿ ನೀರಿಗೆ ಬೇಸಿಗೆಯ ಈ ಹೊತ್ತಿನಲ್ಲಿ ಆಹಾಕಾರವೆದ್ದಿದೆ. ಟ್ಯಾಂಕರ್ ನೀರಿನ ಬೆಲೆ ಗಗನಕ್ಕೇರಿದ್ದರಿಂದ ಕಡಿವಾಣ ಹಾಕೋದಕ್ಕೆ ರಾಜ್ಯ ಸರ್ಕಾರ ದರ ನಿಗದಿ ಮಾಡಿದೆ. ಈ ನಡುವೆ ವಿಕಾಸ್ ವಿಕ್ಕಿಪೀಡಿಯಾ ಅವರ ಹೊಸ ಹಾಡೊಂದು ಈಗ ಟ್ರೆಂಡಿಂಗ್ ಹಾಗೂ ವೈರಲ್ ಆಗಿದೆ. ತೊಳೆಯೋಕೆ, ಕುಡಿಯೋಕೆ ನೀರಿಲ್ಲ. ಓ ನಲ್ಲ ನೀರಿಲ್ಲ ಎನ್ನುವಂತ ಹಾಡು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಈ ಹಿಂದೆ ಪಿಜಿ ಲೈಫ್ ಬಗ್ಗೆ ಮಾಡಿದ್ದಂತ ವಿಕಾಸ್ ವಿಕ್ಕಿಪೀಡಿಯಾ ಅವರ ಹಾಡೊಂದು ಸಖತ್ ಸದ್ದು ಮಾಡಿತ್ತು. ಊಟ ಸರಿಯಿಲ್ಲ ಅಂದ್ರುನೂ ಪಿಜಿಯಲ್ಲಿ ತಿನ್ನುತ್ತೀವಿ ಅನ್ನುತ್ತೀವಿ ಅನ್ನೋ ವೀಡಿಯೋ ಸಖತ್ ವೈರಲ್ ಆಗಿತ್ತು. ರಾಜ್ಯಾದ್ಯಂತ ಜನರು ನೀರಿಲ್ಲದೇ ತತ್ತರಿಸಿ ಹೋಗಿದ್ದಾರೆ. ಸಾಕಷ್ಟು ಹಣ ಕೊಟ್ಟರೂ, ನೀರು ಸಿಗದಂತಾದ ಪರಿಸ್ಥಿತಿ ಕರ್ನಾಟಕದಲ್ಲಿ ಉದ್ಭವವಾಗಿದೆ. ಈ ಸ್ಥಿತಿಯನ್ನು ನೋಡಿರುವ ವಿಕಾಸ್ ವಿಕ್ಕಿಪೀಡಿಯಾ (Vikas Wikipedia) ಹೊಸದೊಂದು ಹಾಡು ರೆಡಿ ಮಾಡಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿದೆ.
ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿರುವಂತ ಹಾಡಿನಲ್ಲಿ ಓ ನಲ್ಲ ನೀರಿಲ್ಲ ಕುಡಿಯೋ ತೊಳಿಯೋಕೆ ನೀರಿಲ್ಲ.. ಸ್ನಾನಕ್ಕೆ ಬಟ್ಟೆಗೆ ನೀರಿಲ್ಲ ಎನ್ನುವ ಸಾಹಿತ್ಯವು ಈ ಹಾಡಿನಲ್ಲಿದೆ. ವಿಕ್ಕಿ ಮತ್ತು ಅವನ ಗೆಳೆಯ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಸಂಪು, ನಲ್ಲಿ ಹೀಗೆ ನೀರು ಬರುವ ಅಥವಾ ಸಂಗ್ರಹಿಸುವ ಸ್ಥಳಗಳಲ್ಲಿ ನೀರು ಇಲ್ಲ ಎನ್ನುವುದನ್ನು ಹಾಡಿನಲ್ಲಿ ತೋರಿಸಿದ್ದಾರೆ.
Neerilla Neerilla
Lyrics by Chandrashekhar Madabhavi pic.twitter.com/QZ8yTjihNC
— Vicky Pedia (@Vickypedia_007) March 7, 2024
ಲೋಕಸಭಾ ಚುನಾವಣೆ : ಯಾವಾಗ ಬೇಕಾದರೂ ಅಭ್ಯರ್ಥಿಗಳ ಹೆಸರು ಘೋಷಣೆ ಆಗಬಹುದು’ : ಡಿಸಿಎಂ ಡಿಕೆ
ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣ: NIAಯಿಂದ ಜೈಲಿನಿಂದ ಮತ್ತೆ ಮೂವರನ್ನು ವಶಕ್ಕೆ