ಬೆಂಗಳೂರು: ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ನೇರ ನೇಮಕಾತಿ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇರ ನೇಮಕಾತಿಗೆ ಆನ್‌ಲೈನ್ ಮೂಲಕ 04-03-2024 ರಿಂದ ಅರ್ಜಿ ಸಲ್ಲಿಸಬಹುದೆಂದು ದಿನಾಂಕ 21-02-2024 ರ ಅಧಿಸೂಚನೆಯಲ್ಲಿ ತಿಳಿಸಲಾಗಿತ್ತು.
ಶುಲ್ಕ ಪಾವತಿಯ ಇಂಟರ್‌ಫೇಸ್ ಅನ್ನು ಸಿದ್ದ ಪಡಿಸುವ ಪ್ರಕ್ರಿಯೆ ಚಾಲ್ತಿಯಲ್ಲಿರುತ್ತದೆ, ಆದ್ದರಿಂದ ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸುವ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿರುತ್ತದೆ ಅಂತ ತಿಳಿಸಿದೆ.
ಬೆಂಗಳೂರು: ಕರ್ನಾಟಕ ಕಂದಾಯ ಇಲಾಖೆ ಸಚಿವ ಕೃಷ್ಣ ಭೈರೇಗೌಡರು ರಾಜ್ಯದಲ್ಲಿ ಖಾಲಿ ಇರುವ 1500 ಗ್ರಾಮ ಆಡಳಿತ ಅಧಿಕಾರಿ (ಗ್ರಾಮ ಲೆಕ್ಕಿಗ) ಹುದ್ದೆಗಳ ಭರ್ತಿಗೆ ಹಣಕಾಸು ಇಲಾಖೆಯಿಂದ ಅನುಮೋದನೆ ಸಿಕ್ಕಿದೆ. ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಉಳಿಕೆ ಮೂಲ ವೃಂದ ಹಾಗೂ ಕಲ್ಯಾಣ ಕರ್ನಾಟಕ (ಸ್ಥಳೀಯ) ವೃಂದದಲ್ಲಿರುವ ಒಟ್ಟು 1000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ನೇರ ನೇಮಕಾತಿ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳ ನೇಮಕಾತಿಗೆ ಅರ್ಹತೆ ಪಡೆಯಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಬೇಕು. ಶೀಘ್ರದಲ್ಲೇ ಅರ್ಜಿ ಸಲ್ಲಿಸುವುಕೆ ಶುರುವಾಗಲಿದೆ.
ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ವಿದ್ಯಾರ್ಹತೆ
ದ್ವಿತೀಯ ಪಿಯುಸಿ ಅಥವಾ 12ನೇ ತರಗತಿ ಶಿಕ್ಷಣವನ್ನು ಅಂಗೀಕೃತ ಶಿಕ್ಷಣ ಸಂಸ್ಥೆಗಳಿಂದ ಪಡೆದಿರಬೇಕು.
– ಪಿಯುಸಿ ಹೊರತುಪಡಿಸಿ ಜೆಒಸಿ, ಡಿಪ್ಲೊಮ ಮತ್ತು ಇನ್ನಿತರ ಯಾವುದೇ ವಿದ್ಯಾರ್ಹತೆಗಳನ್ನು ಈ ಹುದ್ದೆಗಳಿಗೆ ಪರಿಗಣಿಸಲಾಗುವುದಿಲ್ಲ.
– ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ವಿದ್ಯಾರ್ಹತೆ ವಿವರಗಳು
ದ್ವಿತೀಯ ಪಿಯುಸಿ ಅಥವಾ ತತ್ಸಮಾನ ಪರೀಕ್ಷೆ ಪಾಸ್ ಮಾಡಿರಬೇಕು. ಅಥವಾ
ಸಿಬಿಎಸ್‌ಇ / ಐಸಿಎಸ್‌ಇ ನಡೆಸುವ 12ನೇ ತರಗತಿ / ಎನ್‌ಐಓಎಸ್ ನಡೆಸುವ ಹೆಚ್‌ಎಸ್‌ಸಿ ಅರ್ಹತೆ ಪಡೆದಿರಬೇಕು. ಅಥವಾ ಮೂರು ವರ್ಷಗಳ ಡಿಪ್ಲೊಮ ಅಥವಾ ಎರಡು ವರ್ಷಗಳ ಐಟಿಐ ಕೋರ್ಸ್ ಅಥವಾ ಎರಡು ವರ್ಷಗಳ ಯಾವುದೇ ವೃತ್ತಿ ಶಿಕ್ಷಣ ಡಿಪ್ಲೊಮ (ಜೆಓಸಿ / ಜೆಓಡಿಸಿ / ಜೆಎಲ್‌ಡಿಸಿ) ಉತ್ತೀರ್ಣರಾಗಿರಬೇಕು.
ಶೈಕ್ಷಣಿಕ ವಿದ್ಯಾರ್ಹತೆ
• ಗ್ರಾಮ ಆಡಳಿತ ಅಧಿಕಾರಿ : ದ್ವಿತೀಯ ಪಿಯುಸಿ ಅಥವಾ ತತ್ಸಮಾನ
(ಸರ್ಕಾರದ ಸುತ್ತೋಲೆ ಸಂಖ್ಯೆ: ಸಿಆಸುಇ 81 ಸೇವನೆ 2017, ದಿ: 27,02,2018 ರನ್ವಯ ಈ ಕೆಳಕಂಡ ವಿದ್ಯಾರ್ಹತೆಗಳನ್ನು ತತ್ಸಮಾನವೆಂದು ಆದೇಶಿದೆ.
> ಸಿಬಿಎಸ್‌ಸಿ ಮತ್ತು ಐಸಿಎಸ್‌ಸಿ ಮಂಡಳಿಯು ನಡೆಸುವ ಕ್ಲಾಸ್ 12 ಪರೀಕ್ಷೆ.
> ಇತರೆ ರಾಜ್ಯ ಸರ್ಕಾರದ ಪರೀಕ್ಷಾ ಮಂಡಳಿಗಳಿಂದ ನಡೆಸುವ ಕ್ಲಾಸ್ 12 ಪರೀಕ್ಷೆ.
> ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ (ಎನ್ ಐ ಓ ಎಸ್) ವತಿಯಿಂದ ನಡೆಸುವ ಉನ್ನತ ಪ್ರೌಢ ಶಿಕ್ಷಣ ಕೋರ್ಸ್) ಹೆಚ್.ಎಸ್.ಸಿ.
> ಮೂರು ವರ್ಷಗಳ ಡಿಪ್ಲೋಮಾ ಅಥವಾ ಎರಡು ವರ್ಷಗಳ ಐಟಿಐ ಕೋರ್ಸ್ ಅಥವಾ ಎರಡು ವರ್ಷಗಳ ವೃತ್ತಿ ಶಿಕ್ಷಣ ಡಿಪ್ಲೋಮಾ (ಜೆ.ಓ.ಸಿ/ಜೆ.ಓ.ಡಿ.ಸಿ/ಜಿ.ಎಲ್.ಡಿ.ಸಿ)
(ಅಭ್ಯರ್ಥಿಗಳು ಎನ್‌ಐಓಎಸ್ ವತಿಯಿಂದ ನಡೆಸುವ ಒಂದು ಭಾಷಾ ಕೋರ್ಸ್ ಮತ್ತು ಒಂದು ಶೈಕ್ಷಣಿಕ ವಿಷಯದಲ್ಲಿ (ದೊರಕಲಿಕೆ ಮಾದರಿಯಲ್ಲಿ ಅಥವಾ ಪದವಿ ಪೂರ್ವ ಮಂಡಳಿಯು ನಡೆಸುವ ಪರೀಕ್ಷೆಯಲ್ಲಿ ಒಂದು ಭಾಷೆ ಮತ್ತು ಒಂದು ವಿಷಯದಲ್ಲಿ ಉತ್ತೀರ್ಣರಾದಲ್ಲಿ ಮಾತ್ರ ಪಿಯುಸಿ ಗೆ ತತ್ಸಮಾನವೆಂದು ಪರಿಗಣಿಸಬಹುದು.)
2. ಪಿಂಚಣಿ ಸೌಲಭ್ಯ: ಪಿಂಚಣಿ ರಹಿತ (NPS)
3. ವಯೋಮಿತಿ: ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಕನಿಷ್ಟ 18 ವರ್ಷಗಳು ತುಂಬಿರತಕ್ಕದ್ದು ಹಾಗೂ ಈ ಕೆಳಕಂಡ ಗರಿಷ್ಟ ವಯೋಮಿತಿಯನ್ನು ಮೀರಿರಬಾರದು;
ಅಭ್ಯರ್ಥಿಗಳು
ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ
ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ
ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ /ಪ್ರವರ್ಗ-1 ಅಭ್ಯರ್ಥಿಗಳಿಗೆ
ಗರಿಷ್ಠ ವಯೋಮಿತಿ 35 ವರ್ಷಗಳು
38 55F710
40 ವರ್ಷಗಳು
ಪ್ರಮುಖ ದಿನಾಂಕಗಳು : ಆನ್‌ಲೈನ್ ಮುಖಾಂತರ ಅಪ್ಲಿಕೇಶನ್ ಸಲ್ಲಿಸಲು ಪ್ರಾರಂಭಿಕ ದಿನಾಂಕ : 04-03-2024 ರ ಬೆಳಿಗ್ಗೆ 11:00 ರಿಂದ. ಆನ್‌ಲೈನ್ ಮುಖಾಂತರ ಅಪ್ಲಿಕೇಶನ್ ಸಲ್ಲಿಸಲು ಕೊನೆ ದಿನಾಂಕ : 03-04-2024 ರ ರಾತ್ರಿ 11-59 ರ ವರೆಗೆ. ಅರ್ಜಿ ಶುಲ್ಕವನ್ನು ಪಾವತಿ ಮಾಡಲು ಕೊನೆಯ ದಿನಾಂಕ : 06-04-2024
ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಅಪ್ಲಿಕೇಶನ್ ಶುಲ್ಕ ವಿವರ
ಸಾಮಾನ್ಯ ಅರ್ಹತೆ, ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.750.
ಪರಿಶಿಷ್ಟ ಜಾತಿ, ಪರಿಶಿಷ್ಠ ಪಂಗಡ, ಪ್ರವರ್ಗ-1, ಮಾಜಿ ಸೈನಿಕ ಮತ್ತು ವಿಕಲ ಚೇತನ ಅಭ್ಯರ್ಥಿಗಳಿಗೆ ರೂ.500.
ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಹೊರತುಪಡಿಸಿ ಇತರೆ ಯಾವುದೇ ಮಾದರಿಯಲ್ಲಿ ಅರ್ಜಿ ಹಾಕಲು ಅವಕಾಶ ಇಲ್ಲ. ಅಪ್ಲಿಕೇಶನ್ ಲಿಂಕ್ ಅನ್ನು ಮಾರ್ಚ್ 04 ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಆಕ್ಟಿವೇಟ್ ಮಾಡಲಿದೆ. ನಂತರ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಇರಲಿದೆ.