ಬೆಂಗಳೂರು: ನಗರದ ಕುಂದಲಹಳ್ಳಿ ಬಳಿಯ ರಾಮೇಶ್ವರಂ ಕೆಫೆಯಲ್ಲಿ ನಡೆದಿದ್ದಂತ ಬಾಂಬ್ ಸ್ಪೋಟ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಈ ಸ್ಪೋಟದ ಹಿಂದೆ ಐಸಿಸ್ ಉಗ್ರರ ಕೈವಾಡವಿರುವಂತ ಶಂಕೆಯು ವ್ಯಕ್ತವಾಗಿದೆ.
ಇದಕ್ಕೆ ಪುಷ್ಠಿ ಎನ್ನುವಂತೆ ಐಸಿಸ್ ಉಗ್ರರ ಜೊತೆಗೆ ನಂಟಿದ್ದಂತ ಮಿನಾಜ್ ಸುಲೇಮಾನ್ ಎಂಬಾತನನ್ನು ಎನ್ಐಎ ಅಧಿಕಾರಿಗಳು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಉಗ್ರ ಕೃತ್ಯದ ಸಂಚಿನ ಮೇಲೆ ಜೈಲಿನಲ್ಲಿದ್ದ ಮಿನಾಜ್ ಸೇರಿ ನಾಲ್ವರನ್ನು ಎನ್ಐಎ ಬಂಧಿಸಿದೆ.
ಬೆಂಗಳೂರು, ಮುಂಬೈ, ದೆಹಲಿಯಲ್ಲಿದ್ದಂತ ನಾಲ್ವರು ಶಂಕಿತರನ್ನು ಎನ್ಐಎ ವಶಕ್ಕೆ ಪಡೆದು, ಅಜ್ಞಾತ ಸ್ಥಳದಲ್ಲಿ ತೀವ್ರವಾಗಿ ವಿಚಾರಣೆ ನಡೆಸುತ್ತಿದ್ದಾರೆ.
ರಾಮೇಶ್ವರಂ ‘ಕೆಫೆ ಬಾಂಬ್ ಸ್ಪೋಟ’ ಪ್ರಕರಣ: ಶಂಕಿತ ನಾಲ್ವರನ್ನು ವಶಕ್ಕೆ ಪಡೆದು ‘NIA ವಿಚಾರಣೆ’
ಬೆಂಗಳೂರಿನ ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ಉಂಟಾಗಿದ್ದಂತ ಬಾಂಬ್ ಸ್ಪೋಟ ಪ್ರಕರಣ ಸಂಬಂಧ ಮಹತ್ವದ ಮೈಲುಗಲ್ಲನ್ನು ತನಿಖಾ ತಂಡ ಎನ್ಐಎ ಸಾಧಿಸಿದೆ. ಈ ಪ್ರಕರಣ ಸಂಬಂಧ ಶಂಕಿತ ನಾಲ್ವರನ್ನು ವಶಕ್ಕೆ ಪಡೆದು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿರೋದಾಗಿ ತಿಳಿದು ಬಂದಿದೆ.
ಹೌದು ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣ ಸಂಬಂಧ ನಾಲ್ವರನ್ನು ಎನ್ಐಎ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಬೆಂಗಳೂರು, ಮುಂಬೈ, ದೆಹಲಿಯಲ್ಲಿ ನಾಲ್ವರನ್ನು ವಶಕ್ಕೆ ಎನ್ಐಎ ಅಧಿಕಾರಿಗಳು ಪಡೆದಿದ್ದಾರೆ. ಮಿನಾಜ್ ಸೇರಿ ನಾಲ್ವರು ಶಂಕಿತರನ್ನು ವಶಕ್ಕೆ ಪಡೆದು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.
ಬಂಧಿತರನ್ನು ಬಳ್ಳಾರಿ ಸೈಯದ್ ಸಮೀರ್, ಮುಂಬೈನ ಅನಾಸ್ ಇಕ್ಬಾಲ್ ಹಾಗೂ ದೆಹಲಿಯ ಶ್ಯಾನ್ ರೆಹಮಾನ್ @ ಹುಸೇನ್ ಎಂಬುದಾಗಿ ತಿಳಿದು ಬಂದಿದೆ. ಅವರನ್ನು ತೀವ್ರ ವಿಚಾರಣೆಗೆ ಎನ್ಐಎ ಒಳಪಡಿಸಿದೆ.
ಅಂದಹಾಗೇ ಈ ಮೂವರು ಬಳ್ಳಾರಿಯ ಮಾಡ್ಯೂಲ್ ಕೇಸ್ ನ ನಾಲ್ವರು ಆರೋಪಿಗಳಾಗಿದ್ದಾರೆ. 2023 ಡಿಸೆಂಬರ್ 14ರಂದು ದಾಖಲಾಗಿದ್ದ ಪ್ರಕರಣದಲ್ಲಿ ಇವರು ಆರೋಪಿಗಳಾಗಿದ್ದಾರೆ.
ಬೆಂಗಳೂರಲ್ಲಿ ನೀರಿಗಾಗಿ ಹಾಹಾಕಾರ : ಅನಗತ್ಯ ನೀರು ಪೋಲು ಮಾಡಿದರೆ ಬೀಳುತ್ತೆ ಭಾರಿ ದಂಡ!
‘ಚುನಾವಣಾ ಬಾಂಡ್’ : ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸಿದ ‘SBI’ ವಿರುದ್ಧ ‘ನ್ಯಾಯಾಂಗ ನಿಂದನೆ’ ಕೇಸ್