ಬೆಂಗಳೂರು: ನಿನ್ನೆ ಹೈಕೋರ್ಟ್ ನಿಂದ ರಾಜ್ಯ ಸರ್ಕಾರದಿಂದ ನಡೆಸಲು ಉದ್ದೇಶಿಸಲಾಗಿದ್ದಂತ 5, 8, 9 ಹಾಗೂ 11ನೇ ತರಗತಿ ಬೋರ್ಡ್ ಪರೀಕ್ಷೆಯನ್ನು ಹೈಕೋರ್ಟ್ ರದ್ದುಗೊಳಿಸಿ ಆದೇಶಿಸಿತ್ತು. ಈ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ, ಇಂದು ರಾಜ್ಯ ಸರ್ಕಾರವು ವಿಭಾಗಿಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು. ಈ ಮನವಿ ಪರಿಶೀಲಿಸಿದಂತ ಹೈಕೋರ್ಟ್ ಬೋರ್ಡ್ ಪರೀಕ್ಷೆ ನಡೆಸೋದಕ್ಕೆ ಅನುಮತಿ ನೀಡಿದೆ.
ಈ ಕುರಿತಂತೆ ಹೈಕೋರ್ಟ್ ನ ವಿಭಾಗೀಯ ಪೀಠಕ್ಕೆ ಮೇಲ್ಮನವಿಯನ್ನು ರಾಜ್ಯ ಸರ್ಕಾರದ ಪರ ಎಎಜೆ ಅವರು, 53,682 ಸರ್ಕಾರಿ, ಅನುದಾನಿತ, ಖಾಸಗಿ ಶಾಲೆಯಲ್ಲಿ ಬೋರ್ಡ್ ಪರೀಕ್ಷೆ ನಡೆಸಲು ನಿಗದಿ ಪಡಿಸಲಾಗಿತ್ತು. ಖಾಸಗಿ ಶಾಲೆಗಳು ಇಂತಹ ಬೋರ್ಡ್ ಪರೀಕ್ಷೆಯನ್ನು ವಿರೋಧಿಸಿದ್ದಾರೆ ಎಂದು ನ್ಯಾಯಪೀಠಕ್ಕೆ ಮನವರಿಕೆ ಮಾಡಿಕೊಟ್ಟರು.
ಹೈಕೋರ್ಟ್ ವಿಭಾಗೀಯ ಪೀಠದ ತಡೆಜ್ಞೆಯಾಜ್ಞೆಯಿಂದ ಸೋಮವಾರ ನಡೆಯಬೇಕಿದ್ದಂತ 5, 8, 9 ಹಾಗೂ 11ನೇ ತರಗತಿಯ ಬೋರ್ಡ್ ಪರೀಕ್ಷೆ ಅಡ್ಡಕತ್ತರಿಯಲ್ಲಿ ಸಿಲುಕಿದಂತೆ ಮಕ್ಕಳು ಇದ್ದಾರೆ. ಈ ತಡೆಯಾಜ್ಞೆಯನ್ನು ತೆರವುಗೊಳಿಸುವಂತೆ ಹೈಕೋರ್ಟ್ ನ್ಯಾಯಪೀಠಕ್ಕೆ ರಾಜ್ಯ ಸರ್ಕಾರ ಕೋರಿದೆ.
ಸ್ವಹಿತಾಸಕ್ತಿಗಾಗಿ ಖಾಸಗಿ ಶಾಲೆಗಳು ರಿಟ್ ಸಲ್ಲಿಸಿವೆ. ಪೋಷಕರಾಗಲೀ, ಮಕ್ಕಳಾಗಲೀ ಬೋರ್ಡ್ ಪರೀಕ್ಷೆಗೆ ಆಕ್ಷೇಪಿಸಿಲ್ಲ. ಬೋರ್ಡ್ ಪರೀಕ್ಷೆಯಿಂದ ಖಾಸಗಿ ಶಾಲೆಗಳ ಮೌಲ್ಯಮಾಪನವಾಗಲಿದೆ. ಹೀಗಾಗಿ ಏಕ ಸದಸ್ಯ ನ್ಯಾಯಪೀಠವು ನೀಡಿರುವಂತ ಆದೇಶಕ್ಕೆ ತಡೆಯಾಜ್ಞೆ ನೀಡುವಂತೆ ಮನವಿ ಮಾಡಿದರು. ಆದರೇ ಸರ್ಕಾರದ ಮೇಲ್ಮನವಿಗೆ ಖಾಸಗಿ ಶಾಲೆಗಳಿಂದ ಆಕ್ಷೇಪಣೆ ಸಲ್ಲಿಸಲಾಗಿತ್ತು.
ಈ ಎಲ್ಲವನ್ನು ಪರಿಶೀಸಿದಂತ ಹೈಕೋರ್ಟ್ ವಿಭಾಗಿಯ ಪೀಠವು, ಏಕ ಸದಸ್ಯ ನ್ಯಾಯಪೀಠದ ಆದೇಶಕ್ಕೆ ತಡೆಯನ್ನು ನೀಡಿದೆ. ಅಲ್ಲದೇ 5, 8, 9 ಹಾಗೂ 11ನೇ ತರಗತಿ ಬೋರ್ಡ್ ಪರೀಕ್ಷೆ ನಡೆಸುವುದಕ್ಕೆ ಅನುಮತಿ ನೀಡಿದೆ.
‘ರಾಜ್ಯ ಸರ್ಕಾರ’ದಿಂದ ‘11,307 ಪೌರಕಾರ್ಮಿಕ’ರ ‘ಖಾಯಂ’ ಕುರಿತಂತೆ ಮಹತ್ವದ ಆದೇಶ