ಬೆಂಗಳೂರು: ನಗರದ ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟ ಘಟನೆಯ ನಂತ್ರ, ಕೆಫೆಯನ್ನು ಮುಚ್ಚಲಾಗಿತ್ತು. ಈ ಕೆಫೆಯನ್ನು ರೀ-ಓಪನ್ ಮಾಡುವುದಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಅದೇ ಶಿವರಾತ್ರಿ ಹಬ್ಬದ ನಾಳೆಯ ದಿನದಂದೇ ರೀ-ಓಪನ್ ಆಗಲಿದೆ.
ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟ ಘಟನೆಯ ನಂತ್ರ, ಕೆಫೆಯನ್ನು ಮುಂಜಾಗ್ರತಾ ಕ್ರಮವಾಗಿ ಮುಚ್ಚಲಾಗಿತ್ತು. ಇಂತಹ ಕೆಫೆಯನ್ನು ರೀ-ಓಪನ್ ಮಾಡೋದಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದೆ.
ರಾಜ್ಯ ಸರ್ಕಾರದ ಅನುಮತಿಯ ಬೆನ್ನಲ್ಲೇ ನಾಳೆಯ ಶಿವರಾತ್ರಿ ಹಬ್ಬದ ದಿನದಂದು ರಾಮೇಶ್ವರಂ ಕೆಫೆ ರೀ-ಓಪನ್ ಮಾಡಲಾಗುತ್ತಿದೆ. ಈ ರೀ-ಓಪನ್ ಕಾರ್ಯಕ್ರಮದಲ್ಲಿ ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಹಾಗೂ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ಕೂಡ ಭಾಗಿಯಾಗಲಿದ್ದಾರೆ.
ಅಂದಹಾಗೇ ಮಾರ್ಚ್.1ರಂದು ಕುಂದಲಹಳ್ಳಿಯ ದಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟಗೊಂಡಿತ್ತು. ಕೇವಲ 10 ಸೆಕೆಂಡ್ ಅಂತರದಲ್ಲಿ 2 ಬಾರಿ ಬಾಂಬ್ ಸ್ಪೋಟಗೊಂಡಿತ್ತು. ಈ ಘಟನೆಯಲ್ಲಿ 10 ಜನರು ಗಾಯಗೊಂಡಿದ್ದರು. ಈ ಪ್ರಕರಣವನ್ನು ಎನ್ಐಎ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಆರೋಪಿಯ ಪೋಟೋ ಬಿಡುಗಡೆ ಮಾಡಿರುವಂತ ಎನ್ಐಎ, ಆತನ ಸುಳಿವು ನೀಡಿದವರಿಗೆ 10 ಲಕ್ಷ ನಗದು ಬಹುಮಾನ ಕೂಡ ಘೋಷಣೆ ಮಾಡಿದೆ.
‘ರಾಜ್ಯ ಸರ್ಕಾರ’ದಿಂದ ‘11,307 ಪೌರಕಾರ್ಮಿಕ’ರ ‘ಖಾಯಂ’ ಕುರಿತಂತೆ ಮಹತ್ವದ ಆದೇಶ
BIG BREAKING: 5, 8, 9 ಮತ್ತು 11ನೇ ತರಗತಿ ‘ಬೋರ್ಡ್ ಪರೀಕ್ಷೆ’ಗೆ ‘ಹೈಕೋರ್ಟ್ ಗ್ರೀನ್ ಸಿಗ್ನಲ್’