ಬೆಂಗಳೂರು: ರಾಜ್ಯ ಸರ್ಕಾರದಿಂದ 11,307 ಪೌರ ಕಾರ್ಮಿಕರನ್ನು ಖಾಯಂಗೊಳಿಸುವ ಸಂಬಂಧ ಆದೇಶ ಹೊರಡಿಸಿತ್ತು. ಈ ನಂತ್ರ ಈಗ 11 ಸಾವಿರ ಪೌರ ಕಾರ್ಮಿಕರನ್ನು ಖಾಯಂ ಗೊಳಿಸುವ ಸಂಬಂಧ ಮತ್ತೊಂದು ಸೇರ್ಪಡೆ ಆದೇಶವನ್ನು ಹೊರಡಿಸಿದೆ. ಅದು ಏನು ಅಂತ ಮುಂದೆ ಓದಿ.
ಈ ಕುರಿತಂತೆ ಬಿಬಿಎಂಪಿ-2 ಮತ್ತು ಸಮನ್ವಯ, ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಸೇರ್ಪಡೆ ಆದೇಶ ಹೊರಡಿಸಿದ್ದು, ಅದರಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ನೇರಪಾವತಿಯಡಿ ಕಾರ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರ ಭರ್ತಿಗಾಗಿ 11,307 ಪೌರ ಕಾರ್ಮಿಕರ ಹುದ್ದೆಗಳನ್ನು ಪ್ರಸ್ತುತ ಚಾಲ್ತಿಯಲ್ಲಿರುವ ಮೀಸಲಾತಿ, ರೋಸ್ಟರ್ ಮೀಸಲಾತಿ ನಿಯಮಗಳನ್ವಯ ನೇಮಕಾತಿ ಮಾಡಿಕೊಳ್ಳಲು ಸರ್ಕಾರ ಅನುಮತಿ ನೀಡಿ ಆದೇಶಿಸಿತ್ತು ಎಂದಿದ್ದಾರೆ.
ದಿನಾಂಕ 28-03-2023ರ ಸೇರ್ಪಡೆ ಆದೇಶದಲ್ಲಿ ಸಮಸಂಖ್ಯೆಯ ದಿನಾಂಕ 02-03-2023ರ ಆದೇಶಕ್ಕೆ ಕೆಲವೊಂದು ಅಂಶಗಳನ್ನು ಸೇರ್ಪಡೆಗೊಳಿಸಿ ಆದೇಶಿಸಲಾಗಿರುತ್ತದೆ. ಅದೇ 11,307 ಸಂಖ್ಯಾತಿರಿಕ್ತ ಹುದ್ದೆಗಳಿಗೆ ಪೌರ ಕಾರ್ಮಿಕರುಗಳ ನೇಮಕಾತಿ ಸಮಯದಲ್ಲಿ ಅರ್ಹ ಸಾಮಾನ್ಯ ವರ್ಗ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಲಭ್ಯವಿಲ್ಲದೇ ಇದ್ದಲ್ಲಿ, ಇತರೆ ಯಾವುದೇ ವರ್ಗದ ಅರ್ಹ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.
BREAKING: ಚಿತ್ರದುರ್ಗದ ಕರಿಯಾಲ ಗ್ರಾಮ ಪಂಚಾಯ್ತಿ ‘PDO’ ಅಮಾನತು: ‘ಸದಸ್ಯರ ರಾಜೀನಾಮೆ’ ವಾಪಾಸ್
‘ಪ್ರಧಾನಿ ಮೋದಿ’ ಜೊತೆ ಸೆಲ್ಫಿ ಕ್ಲಿಕ್ಕಿಸಿದ ಕಾಶ್ಮೀರದ ‘ನಜೀಮ್’ ಯಾರು.? ಹಿನ್ನಲೆ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ