ಬೆಂಗಳೂರು: ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಸೋಮಣ್ಣ ಬೇವನಿಮರದ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.
ಈ ಕುರಿತಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಕೆ.ಆರ್ ರಮೇಶ್ ಅವರು ಅಧಿಸೂಚನೆ ಹೊರಡಿಸಿದ್ದಾರೆ. ಅದರಲ್ಲಿ ದಿನಾಂಕ:07.03.2024 ಅಧಿಸೂಚನೆ ಅಧಿಸೂಚನೆ ಸಂಖ್ಯೆ:ಕಸಂವಾ 204 ಕಸಧ 2023, ದಿನಾಂಕ:17-06-2023 ಅನ್ನು ಭಾಗಶ: ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಮಾರ್ಪಡಿಸಿ, ಮಾನ್ಯ ಹಿಂದುಳಿದ ವರ್ಗಗಳ ಸಚಿವರನ್ನು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಹುದ್ದೆಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ ಎಂದಿದ್ದಾರೆ.
ಮುಂದುವರೆದು, ಸೋಮಣ್ಣ ಬೇವಿನಮರದ, “ಮಾಲತೇಶ ನಿಲಯ”, ಹಳೇ ಬಸ್ ಸ್ಟ್ಯಾಂಡ್ ಹತ್ತಿರ, ಶಿಗ್ಗಾಂವ, ಹಾವೇರಿ ಜಿಲ್ಲೆ ಇವರನ್ನು ಮಾನ್ಯ ಮುಖ್ಯಮಂತ್ರಿಯವರ ಟಿಪ್ಪಣಿ ಸಂಖ್ಯೆ:ಮುಮಂ/ಆಕಾ/7442047/2024 ದಿನಾಂಕ:28.02.2024ರನ್ವಯ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ, 2010ರ ಅಧ್ಯಾಯ-IIರ ಸೆಕ್ಷನ್-3(3)(ಎ)ರನ್ವಯ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಎರಡು ವರ್ಷಗಳ ಅವಧಿಗೆ ನೇಮಿಸಿ ಆದೇಶ ಹೊರಡಿಸಿದ್ದಾರೆ.
ಕೆಫೆಯಲ್ಲಿ ‘ಬಾಂಬ್ ಬ್ಲಾಸ್ಟ್’ ಪ್ರಕರಣ : ಬಳ್ಳಾರಿ ಕೇಂದ್ರ ಬಸ್ ನಿಲ್ದಾಣದಲ್ಲಿ ಸತತ 9 ಗಂಟೆ ಪರಿಶೀಲನೆ ನಡೆಸಿದ ‘NIA’
‘ಶಸ್ತ್ರಾಸ್ತ್ರ ಹಿಡಿದು ನೀವೇನು ಯುದ್ಧಕ್ಕೆ ಹೊರಟಿದ್ದೀರಾ.?’: ರೈತ ಪ್ರತಿಭಟನಾಕಾರ ತರಾಟೆಗೆ ತೆಗೆದುಕೊಂಡ ಹೈಕೋರ್ಟ್