ಚಿತ್ರದುರ್ಗ: ಮಕ್ಕಳಿರುವಂತ ಮನೆಯಲ್ಲಿ ಪೋಷಕರು ಎಷ್ಟೇ ಎಚ್ಚರಿಕೆ ವಹಿಸಿದರೂ ಕಡಿಮೆ. ಜೊತೆಗೆ ಸ್ಪೋಟಕ, ವಿಷಕಾರಿ, ಅಪಾಯಕ್ಕೆ ಒಡ್ಡುವಂತ ವಸ್ತುಗಳನ್ನು ಅವರ ಕೈಗೆ ಸಿಗುವಂತೆ ಇಡಲೇ ಬಾರದು. ಹೀಗಿದ್ದರೂ ಇಲ್ಲೊಬ್ಬ ತಾಯಿ ಮಾತ್ರ ತನಗೆ ಹುಷಾರಿಲ್ಲ ಅಂತ ನೀಡಿದ ಮಾತ್ರೆಗಳನ್ನು ಮಗುವಿನ ಕೈಗೆ ಸಿಗುವಂತೆ ಇಟ್ಟಿದ್ದಾರೆ. ಆಗ ಮುಂದೇನಾಯ್ತು ಅಂತ ಮುಂದೆ ಓದಿ.
ಚಿತ್ರದುರ್ಗ ಜಿಲ್ಲೆಯ ತುರುವನೂರು ಹೋಬಳಿಯ ಕಡಬನಕಟ್ಟೆ ಗ್ರಾಮದಲ್ಲಿ ತಿಪ್ಪೇಸ್ವಾಮಿ ಎಂಬುವರು ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ವೈದ್ಯರ ಬಳಿಗೆ ತೆರಳಿದಂತ ಅವರು, ಚಿಕಿತ್ಸೆ ಪಡೆದು ಮಾತ್ರೆಗಳನ್ನು ಪಡೆದುಕೊಂಡು ಬಂದಿದ್ದರು. ಆ ಮಾತ್ರೆಗಳನ್ನು ಮನೆಯಲ್ಲಿ ಇರಿಸಿದ್ದರು.
ಇಂತಹ ಮಾತ್ರೆಗಳು ಮಗುವಿನ ಕೈಗೆ ಸಿಗುವಂತೆ ಇರಿಸಲಾಗಿತ್ತು. ಇವುಗಳು ಚಾಕೋಲೇಟ್ ಎಂಬುದಾಗಿ ಭಾವಿಸಿದಂತ ಅವರ 5 ವರ್ಷದ ಮಗ ಋತ್ವಿಕ್ ತಿಂದ ಪರಿಣಾಮ ಅನಾರೋಗ್ಯಕ್ಕೆ ಒಳಗಾಗಿದೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೇ ಚಿತ್ರದುರ್ಗದಲ್ಲಿ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯ್ಯುವಂತೆ ತಿಳಿಸಿದ್ದಾರೆ.
ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕಳೆದ 5 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದಂತ ತಿಪ್ಪೇಸ್ವಾಮಿಯವರ 5 ವರ್ಷದ ಪುತ್ರ ಋತ್ವಿಕ್ ಇಂದು ಚಿಕಿತ್ಸೆ ಫಲಿಸದೇ ಧಾರುಣವಾಗಿ ಸಾವನ್ನಪ್ಪಿದ್ದಾನೆ. ಈಗ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ತುರುವನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಪುನೀತ್ ರಾಜಕುಮಾರ್’ ಹೆಸರಲ್ಲಿ ರಾಜ್ಯಾದ್ಯಂತ ‘ಹೃದಯ ಜ್ಯೋತಿ’ ಯೋಜನೆ ಪ್ರಾರಂಭ : ದಿನೇಶ್ ಗುಂಡೂರಾವ್
ಕೆಫೆಯಲ್ಲಿ ‘ಬಾಂಬ್ ಬ್ಲಾಸ್ಟ್’ ಪ್ರಕರಣ : ಬಳ್ಳಾರಿ ಕೇಂದ್ರ ಬಸ್ ನಿಲ್ದಾಣದಲ್ಲಿ ಸತತ 9 ಗಂಟೆ ಪರಿಶೀಲನೆ ನಡೆಸಿದ ‘NIA’