ಮುಂಬೈ: ತನ್ನ ಪತ್ನಿ ವಿಮಾನ ನಿಲ್ದಾಣಕ್ಕೆ ತಡವಾಗಿ ಬಂದಿದ್ದರಿಂದ ವಿಮಾನವನ್ನು ವಿಳಂಬಗೊಳಿಸುವ ಕಾರಣದಿಂದ ಪತಿರಾಯನೊಬ್ಬ ವಿಮಾನದಲ್ಲಿ ಬಾಂಬ್ ಇರುವುದಾಗಿ ಬೆದರಿಕೆ ಕರೆ ಮಾಡಿ ಜೈಲುಪಾಲಾಗಿರುವಂತ ಘಟನೆ ಮುಂಬೈನಲ್ಲಿ ನಡೆದಿದೆ.
ಮುಂಬೈನ ವಿಮಾನ ನಿಲ್ದಾಣ ಪೊಲೀಸರ ಪ್ರಕಾರ, ಫೆಬ್ರವರಿ 24 ರಂದು ಸಂಜೆ ಮಲಾಡ್ನಲ್ಲಿರುವ ಏರ್ಲೈನ್ಸ್ ಕಾಲ್ ಸೆಂಟರ್ಗೆ ಬೆದರಿಕೆ ಕರೆ ಬಂದಿದೆ. ‘ಸಂಜೆ 06.40ಕ್ಕೆ ಮುಂಬೈನಿಂದ ಬೆಂಗಳೂರಿಗೆ ವಿಮಾನವಿದೆ, ವಿಮಾನ ಸಂಖ್ಯೆ ಕ್ಯೂಪಿ 1376, ಆ ವಿಮಾನದಲ್ಲಿ ಬಾಂಬ್ ಇದೆ’ ಎಂದು ವ್ಯಕ್ತಿ ಹೇಳಿಕೊಂಡಿದ್ದಾನೆ. 167 ಪ್ರಯಾಣಿಕರನ್ನು ಹೊತ್ತ ವಿಮಾನ ಮುಂಬೈನಿಂದ ಟೇಕ್ ಆಫ್ ಆಗಲು ಸಿದ್ಧವಾಗಿದ್ದ ವಿಮಾನವನ್ನು ಕೂಡಲೇ ವಿಮಾನಯಾನ ಅಧಿಕಾರಿಗಳು ತಕ್ಷಣ ವಿಮಾನದ ಕ್ಯಾಪ್ಟನ್ ಮತ್ತು ಪೊಲೀಸರು ಸೇರಿದಂತೆ ಎಲ್ಲಾ ಅಧಿಕಾರಿಗಳಿಗೆ ಬೆದರಿಕೆಯ ಬಗ್ಗೆ ಮಾಹಿತಿ ನೀಡಿದರು.
ಕ್ಯಾಪ್ಟನ್ ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ) ಗೆ ಮಾಹಿತಿ ನೀಡಿದರೆ, ವಿಮಾನ ನಿಲ್ದಾಣ ಪೊಲೀಸರು ಸ್ಥಳೀಯ ಅಪರಾಧ ವಿಭಾಗ, ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಮತ್ತು ಬಾಂಬ್ ಸ್ಕ್ವಾಡ್ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಧಾವಿಸಿದರು.
ಎಲ್ಲಾ ಪ್ರಯಾಣಿಕರನ್ನು ವಿಮಾನದಿಂದ ಕೆಳಗೆ ಇಳಿಸಿ, ಇಡೀ ವಿಮಾನ ಮತ್ತು ಪ್ರಯಾಣಿಕರ ಲಗೇಜ್ ಗಳನ್ನು ಪರಿಶೀಲಿಸಿದ್ದಾರೆ. ಆದಾಗ್ಯೂ, ಯಾವುದೇ ಅನುಮಾನಾಸ್ಪದ ಸ್ಪೋಟಕ ವಸ್ತು ಕಂಡು ಬಂದಿಲ್ಲ. ಆಗ ಬೆದರಿಕೆ ಕರೆಯನ್ನು ಹುಸಿ ಎಂದು ಪೊಲೀಸರು ತೀರ್ಮಾನಿಸಿದ್ದಾರೆ. ಆ ನಂತ್ರ ವಿಮಾನವು ಮಧ್ಯರಾತ್ರಿಯಲ್ಲಿ ಬೆಂಗಳೂರಿಗೆ ಹೊರಟಿದೆ.
ಈ ಘಟನೆಯ ನಂತರ, ವಿಮಾನಯಾನ ಸಂಸ್ಥೆಯ ನಿಲೇಶ್ ಘೊಂಗ್ಡೆ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಅದರಂತೆ, ಪೊಲೀಸರು ಅನಾಮಧೇಯ ಬೆದರಿಕೆಗಳಿಗೆ ಸಂಬಂಧಿಸಿದ ಆರೋಪಗಳನ್ನು ಹೊರಿಸಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಮತ್ತು ಇನ್ಸ್ಪೆಕ್ಟರ್ ಮನೋಜ್ ಮಾನೆ ಮತ್ತು ಸಬ್ ಇನ್ಸ್ಪೆಕ್ಟರ್ ಸ್ವಪ್ನಿಲ್ ದಾಲ್ವಿ ತನಿಖೆಯನ್ನು ಪ್ರಾರಂಭಿಸಿದರು.
ಮಾನೆ ಮತ್ತು ದಾಲ್ವಿ ಅವರ ತಂಡವು ಬೆದರಿಕೆ ಕರೆ ಮಾಡಲು ಬಳಸಿದ ಮೊಬೈಲ್ ಸಂಖ್ಯೆಯನ್ನು ಪತ್ತೆಹಚ್ಚಿದಾಗ, ಅದು ಬೆಂಗಳೂರು ನಿವಾಸಿ ವಿಲಾಸ್ ಬಕ್ಡೆ ಅವರಿಗೆ ಸೇರಿದ್ದು ಎಂದು ತಿಳಿದುಬಂದಿದೆ.
ಆತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ, ತಾನು ಫೋನ್ ಕರೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಬಕ್ಡೆ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂಟೀರಿಯರ್ ಡಿಸೈನರ್ ಆಗಿರುವ ಅವರ ಪತ್ನಿ ಗ್ರಾಹಕರನ್ನು ಭೇಟಿಯಾಗಲು ಮುಂಬೈಗೆ ಬಂದಿದ್ದರು. ಪುನಹ ಬೆಂಗಳೂರಿಗೆ ಮರಳೋದಕ್ಕೆ ವಿಮಾನದ ಟಿಕೆಟ್ ಕಾಯ್ದಿರಿಸಲಾಗಿತ್ತು. ಆದ್ರೇ ಪತ್ನಿ ತಡವಾಗಿ ಬಂದ ಕಾರಣ, ವಿಮಾನ ವಿಳಂಬಕ್ಕಾಗಿ ಹೀಗೆ ಬೆದರಿಕೆ ಕರೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.
BREAKING : ಹಾರಾಟಕ್ಕೆ ಸಿದ್ಧವಾದ ‘Fly91’ ವಿಮಾನ, ‘DGCA’ನಿಂದ ‘ಏರ್ ಆಪರೇಟರ್ ಪ್ರಮಾಣಪತ್ರ’
ಮಾ.9ರಂದು ಬೆಂಗಳೂರಿನ GKVK ಆವರಣದಲ್ಲಿ ‘ರೈತ ಸೌರ ಶಕ್ತಿ ಮೇಳ’ ಆಯೋಜನೆ: CM ಸಿದ್ದರಾಮಯ್ಯ ಚಾಲನೆ