ನವದೆಹಲಿ: ಕಾಂಗ್ರೆಸ್ ಪಕ್ಷದಿಂದ ಲೋಕಸಭಾ ಚುನಾವಣೆಗೆ ಭರ್ಜರಿ ಸಿದ್ಧತೆಯನ್ನು ಕೈಗೊಳ್ಳಲಾಗಿದೆ. ಬಿಜೆಪಿಗೆ ಸೆಡ್ಡು ಹೊಡೆದು I.N.D.I.A ಮೈತ್ರಿ ಕೂಟದೊಂದಿಗೆ ಕಣಕ್ಕೆ ಇಳಿಯೋ ಘೋಷಣೆ ಮಾಡಿ, ತಯಾರಿ ನಡೆಸುತ್ತಿದೆ. ಈ ಬೆನ್ನಲ್ಲೇ ಇಂದು ಎಐಸಿಸಿ ಅಧ್ಯಕ್ಷರಿಗೆ ಪ್ರಣಾಳಿಕೆ ಸಮಿತಿಯಿಂದ ಲೋಕಸಭಾ ಚುನಾವಣೆಗೆ ಕರಡು ಪ್ರಣಾಣಿಕೆಯನ್ನು ಸಲ್ಲಿಸಲಾಗಿದೆ.
ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಈಗಾಗಲೇ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. 195 ಕ್ಷೇತ್ರಗಳಿಗೆ ಮೊದಲ ಪಟ್ಟಿಯಲ್ಲಿ ಅಭ್ಯರ್ಥಿಗಳ್ನು ಬಿಜೆಪಿ ಘೋಷಣೆ ಮಾಡಲಾಗಿದೆ. ಇಂದು ದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ತಯಾರಿಸೋ ಸಂಬಂಧ ಮಹತ್ವದ ಸಭೆಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ನಡೆಸಲಾಗುತ್ತಿದೆ.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಣಾಳಿಕೆ ಸಮಿತಿಯಿಂದ ಮುಂಬರುವಂತ ಲೋಕಸಭಾ ಚುನಾವಣೆ ಪಕ್ಷ ಚುನಾವಣಾ ಪ್ರಣಾಳಿಕೆಯನ್ನು ತಯಾರಿಸಲಾಗಿದೆ. ಇಂದು ಪ್ರಣಾಣಿಕೆ ಸಮಿತಿಯಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಲ್ಲಿಕೆ ಮಾಡಲಾಗಿದೆ. ಈ ಲೋಕಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಮಹತ್ವದ ಘೋಷಣೆಗಳನ್ನು ಕಾಂಗ್ರೆಸ್ ಮಾಡೋ ಸಾಧ್ಯತೆ ಇದೆ. ಆ ಬಗ್ಗೆ ಕಾದು ನೋಡಬೇಕಿದೆ.
BREAKING : ಹಾರಾಟಕ್ಕೆ ಸಿದ್ಧವಾದ ‘Fly91’ ವಿಮಾನ, ‘DGCA’ನಿಂದ ‘ಏರ್ ಆಪರೇಟರ್ ಪ್ರಮಾಣಪತ್ರ’
ಮಾ.9ರಂದು ಬೆಂಗಳೂರಿನ GKVK ಆವರಣದಲ್ಲಿ ‘ರೈತ ಸೌರ ಶಕ್ತಿ ಮೇಳ’ ಆಯೋಜನೆ: CM ಸಿದ್ದರಾಮಯ್ಯ ಚಾಲನೆ