ಬರಾಸತ್, ಪಶ್ಚಿಮ ಬಂಗಾಳ : ಟಿಎಂಸಿ ನಾಯಕರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದಿರುವ ಸಂದೇಶ್ಖಾಲಿಯ ಮಹಿಳೆಯರ ಗುಂಪನ್ನ ಪ್ರಧಾನಿ ನರೇಂದ್ರ ಮೋದಿ ಇಂದು ಭೇಟಿಯಾದರು ಮತ್ತು ಅವರಿಗೆ ನ್ಯಾಯ ಮತ್ತು ಭದ್ರತೆಯ ಭರವಸೆ ನೀಡಿದರು.
ಸಂದೇಶ್ಖಾಲಿ ಇರುವ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಬರಾಸತ್ನಲ್ಲಿ ನಡೆದ ಸಾರ್ವಜನಿಕ ಸಭೆಯ ಹೊರತಾಗಿ, ಅಮಾನತುಗೊಂಡ ಟಿಎಂಸಿ ನಾಯಕ ಶಹಜಹಾನ್ ಶೇಖ್ ಮತ್ತು ಅವರ ಅನುಯಾಯಿಗಳ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ ಐವರು ಮಹಿಳೆಯರನ್ನ ಪ್ರಧಾನಿ ಮೋದಿ ಭೇಟಿಯಾದರು.
ದೌರ್ಜನ್ಯದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಮಹಿಳೆಯರನ್ನು ಅವರು ‘ದುರ್ಗಾ ಮಾತೆ’ ಎಂದು ಬಣ್ಣಿಸಿದರು.
ಅಂದ್ಹಾಗೆ, ಬಿಜೆಪಿಯ ಮಹಿಳಾ ಮೋರ್ಚಾ ಈ ರ್ಯಾಲಿಯನ್ನ ನಾರಿ ಶಕ್ತಿ ವಂದನ್ (ಮಹಿಳಾ ಸಬಲೀಕರಣವನ್ನು ಆಚರಿಸುವುದು) ಎಂಬ ವಿಷಯದ ಮೇಲೆ ಆಯೋಜಿಸಲಾಗಿತ್ತು.
‘ಸೌದಿಯ ಮೊದಲ ರೋಬೋಟ್’ನಿಂದ ಮಹಿಳಾ ವರದಿಗಾರ್ತಿಗೆ ಲೈಂಗಿಕ ಕಿರುಕುಳ, ವಿಡಿಯೋ ವೈರಲ್
ಬಳ್ಳಾರಿಯಲ್ಲಿ 2 ಲಕ್ಷ ರೂ ಲಂಚ ಪಡೆಯುತ್ತಿದ್ದ ವೇಳೆ ‘ಸಹಾಯಕ ಇಂಜಿನಿಯರ್’ ಲೋಕಾಯುಕ್ತ ಬಲೆಗೆ
ಫಿಟ್ನೆಸ್ ಸುಧಾರಣೆಗೆ ‘ಸೇನೆ’ಯೊಂದಿಗೆ ‘ಪಾಕ್ ಕ್ರಿಕೆಟ್ ತಂಡ’ಕ್ಕೆ ತರಬೇತಿ : PCB ಮುಖ್ಯಸ್ಥ ನಖ್ವಿ