ಕಲಬುರ್ಗಿ: ನಗರದ ಲಾಡ್ಲೆ ಮಶಾಕ್ ದರ್ಗಾದಲ್ಲಿ ಶಿವಲಿಂಗ ಪೂಜೆ ವಿಚಾರವಾಗಿ ಹಿಂದೂ ಮುಸ್ಲೀಂರ ನಡುವೆ ವಿವಾದ ಉಂಟಾಗಿತ್ತು. ಈ ಬಗ್ಗೆ ಸಲ್ಲಿಸಲಾಗಿದ್ದಂತ ಅರ್ಜಿಯ ವಿಚಾರಣೆ ನಡೆಸಿದಂತ ಕಲಬುರ್ಗಿಯ ಹೈಕೋರ್ಟ್ ನ್ಯಾಯಪೀಠವು ಹಿಂದೂಗಳು ಪೂಜೆ ಸಲ್ಲಿಸುವುದಕ್ಕೆ ಅವಕಾಶ ನೀಡಿದೆ.
ಈ ಕುರಿತಂತೆ ಸಲ್ಲಿಸಲಾಗಿದ್ದಂತ ಅರ್ಜಿಯ ವಿಚಾರಣೆ ನಡೆಸಿದಂತ ಕಲಬುರ್ಗಿ ಹೈಕೋರ್ಟ್ ನ್ಯಾಯಪೀಠವು ಮಾರ್ಚ್.8ರಂದು ಶಿವರಾತ್ರಿಯ ದಿನದಂದು ಮಧ್ಯಾಹ್ನ 15 ಹಿಂದೂಗಳಿಂದ ಶಿವಲಿಂಗ ಪೂಜೆ ಮಾಡುವುದಕ್ಕೆ ಅನುಮತಿ ನೀಡಿದೆ.
ಇನ್ನೂ ಶಿವಲಿಂಗ ಪೂಜೆ ಮಾಡುವವರ 15 ಪಟ್ಟಿಯನ್ನು ಸಲ್ಲಿಸುವಂತೆ ಸೂಚಿಸಿತ್ತು. ಅದರಂತೆ ಆಂದೋಲಾ ಸಿದ್ದಲಿಂಗ ಸ್ವಾಮಿ ಸೇರಿದಂತೆ 15 ಜನರ ಹೆಸರು, ಆಧಾರ್ ಕಾರ್ಡ್ ಅನ್ನು ಹೈಕೋರ್ಟ್ ನ್ಯಾಯಪೀಠಕ್ಕೆ ಸಲ್ಲಿಸಲಾಗಿದೆ.
ಇದಲ್ಲದೇ 15 ಮಂದಿ ಮುಸ್ಲಿಂ ಸಮುದಾಯದವರಿಗೂ ಪ್ರಾರ್ಥನೆ ಮಾಡುವುದಕ್ಕೆ ಹೈಕೋರ್ಟ್ ಅನುಮತಿಸಿದೆ. ಈ ಮೂಲಕ ಕಲಬುರ್ಗಿ ನಗರದಲ್ಲಿರುವಂತ ವಿವಾದಿತ ಲಾಡ್ಲೆ ಮಶಾಕ್ ದರ್ಗಾದಲ್ಲಿ ಹಿಂದೂ ಮುಸ್ಲೀಂರಿಗೆ ಪೂಜೆ, ಪ್ರಾರ್ಥನೆಗೆ ಅವಕಾಶ ನೀಡಿದೆ.
ಶಿವಮೊಗ್ಗ: ಸೊರಬ ಪುರಸಭೆ ‘ಕಂದಾಯ ನಿರೀಕ್ಷಕ ವಿನಾಯಕ’ ಲೋಕಾಯುಕ್ತ ಬಲೆಗೆ
BREAKING : ರಾಜ್ಯದಲ್ಲಿ ಮತ್ತೊಂದು ಬೆಚ್ಚಿ ಬೀಳಿಸುವ ಘಟನೆ : ನೆಲಮಂಗಲದಲ್ಲಿ ’73 ಭ್ರೂಣ ಹತ್ಯೆ’ ಪ್ರಕರಣ ಬೆಳಕಿಗೆ