ಶಿವಮೊಗ್ಗ : ಉತ್ತರ ಕನ್ನಡ ಜಿಲ್ಲೆ ಹೊನ್ನಾವರದ ಪ್ರತಿಭಾ ಎಂ ನಾಯ್ಕ ಕೋಂ ಮಹೇಶ್ ನಾಯ್ಕ ಎಂಬುವವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಇ-ಸ್ವತ್ತು ಮಾಡಿಸಲು ಲಂಚದ ಪಡೆದ ಸೊರಬ ಪುರಸಭೆ ಕಂದಾಯ ನಿರೀಕ್ಷಕ ವಿನಾಯಕ ಎಂಬುವವರನ್ನು ಲೋಕಾಯುಕ್ತ ಪೊಲೀಸರು ಇಂದು ಬಂಧಿಸಿ ಕ.ಲೋ. ಪೊಲೀಸ್ ಅಧೀಕ್ಷಕ ಎನ್. ವಾಸುದೇವರಾಮರವರ ಮಾರ್ಗದರ್ಶನದಲ್ಲಿ ಪ್ರಕರಣ ದಾಖಲಿಸಿರುತ್ತಾರೆ.
ಶ್ರೀಮತಿ ಪ್ರತಿಭಾ ಎಂಬುವವರ ಹಳೇ ಸೊರಬ ಪುರಸಭೆ ವ್ಯಾಪ್ತಿಯಲ್ಲಿ ಇರುವ ಖಾಲಿ ನಿವೇಶನದ ಇ-ಸ್ವತ್ತು ಮಾಡಿಸಲು ಕಂದಾಯ ನಿರೀಕ್ಷಕ ವಿನಾಯಕರವರನ್ನು ಭೇಟಿ ಮಾಡಿ ಸೂಕ್ತ ದಾಖಲೆಯೊಂದಿಗೆ ಅರ್ಜಿ ಸಲ್ಲಿಸಿರುತ್ತಾರೆ. ಈ ಸಂದರ್ಭ ಕಂದಾಯ ನಿರೀಕ್ಷಕರು 40000/- ರೂ.ಗಳ ಲಂಚದ ಹಣಕ್ಕಾಗಿ ಬೇಡಿಕೆಯಿಟ್ಟಿದ್ದು, ಅರ್ಜಿದಾರರು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ಸಲ್ಲಿಸಿರುತ್ತಾರೆ. ಈ ದೂರಿನನ್ವಯ ಪೊಲೀಸ್ ನಿರೀಕ್ಷಕ ಪ್ರಕಾಶ್‍ರವರ ತಂಡವು ಈತನನ್ನು ಲಂಚ ಪಡೆಯುವಾಗ ರೆಡ್ ಹ್ಯಾಂಡಾಗಿ ಹಿಡಿದು ಹಣವನ್ನು ಜಪ್ತಿ ಮಾಡಿ, ಅವರನ್ನು ಬಂಧಿಸಿ ತನಿಖೆಗೆ ಒಳಪಡಿಸಿರುತ್ತಾರೆ.
ಈ ಕಾರ್ಯಾಚರಣೆಯನ್ನು ಪೊಲೀಸ್ ಉಪಾಧೀಕ್ಷಕ ಉಮೇಶ ಈಶ್ವರ ನಾಯ್ಕ ಇವರ ನೇತೃತ್ವದಲ್ಲಿ ನಡೆಸಲಾಗಿದ್ದು, ಶಿವಮೊಗ್ಗ ಲೋಕಾಯುಕ್ತ ಕಛೇರಿಯ, ಪೊಲೀಸ್ ನಿರೀಕ್ಷಕರಾದ ಹೆಚ್.ಎಸ್. ಸುರೇಶ್, ಪೊಲೀಸ್ ಸಿಬ್ಬಂದಿಗಳಾದ ಮಹಂತೇಶ, ಸಿ.ಹೆಚ್.ಸಿ., ಸುರೇಂದ್ರ, ಸಿ.ಹೆಚ್.ಸಿ., ಯೋಗೀಶ್, ಸಿ.ಹೆಚ್.ಸಿ., ಬಿ.ಟಿ. ಚನ್ನೇಶ, ಸಿಪಿಸಿ, ಪ್ರಶಾಂತ್‍ಕುಮಾರ್, ಸಿಪಿಸಿ, ಅರುಣ್‍ಕುಮಾರ್, ಸಿಪಿಸಿ, ದೇವರಾಜ, ಸಿ.ಪಿ.ಸಿ., ರಘುನಾಯ್ಕ, ಸಿ.ಪಿ.ಸಿ., ಕೆ.ಸಿ. ಜಯಂತ, ಎಪಿಸಿ, ವಿ. ಗೋಪಿ, ಎಪಿಸಿ ಮತ್ತು ಪ್ರದೀಪ್ ಕುಮಾರ್, ಎಪಿಸಿ, ಬಿ.ಕೆ. ಗಂಗಾಧರ, ಎಪಿಸಿ ಇವರುಗಳು ಕರ್ತವ್ಯ ನಿರ್ವಹಿಸುತ್ತಾರೆ.
BREAKING : ರಾಜ್ಯದಲ್ಲಿ ಮತ್ತೊಂದು ಬೆಚ್ಚಿ ಬೀಳಿಸುವ ಘಟನೆ : ನೆಲಮಂಗಲದಲ್ಲಿ ’73 ಭ್ರೂಣ ಹತ್ಯೆ’ ಪ್ರಕರಣ ಬೆಳಕಿಗೆ