ಬೆಂಗಳೂರು: ನಗರದ 8 ಕಡೆಗಳಲ್ಲಿ ಇಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿ, ಮಹತ್ವದ ದಾಖಲೆ ಪತ್ರ, ಹಣವನ್ನು ವಶಕ್ಕೆ ಪಡೆದಿರೋದಾಗಿ ತಿಳಿದು ಬಂದಿದೆ.
ಫೆಬ್ರವರಿ.9ರ ನಂತ್ರ ಮತ್ತೆ ಇಂದು ವಿಜಯ್ ತಾತಾ ಹಾಗೂ ಸಹಚರರ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರಿನ 8 ಕಡೆಗಳಲ್ಲಿ ದಾಳಿ ನಡೆಸಿದ್ದು, ಆರೋಪಿಗಳ ಖಾತೆಯಲ್ಲಿದ್ದಂತ 11.25 ಕೋಟಿಯನ್ನು ಸೀಜ್ ಮಾಡಿದ್ದಾರೆ ಎನ್ನಲಾಗುತ್ತಿದೆ.
ಅಕ್ರಮ ಹಣ ವರ್ಗಾವಣೆ ಆರೋಪದಡಿ ಈ ದಾಳಿಯನ್ನು ನಡೆಸಲಾಗಿದೆ. ಬೆಂಗಳೂರಿನ 8 ಕಡೆಗಳಲ್ಲಿ ವಿಜಯ್ ತಾತಾ ಹಾಗೂ ಸಹಚರರಿಗೆ ಸೇರಿದಂತೆ ಕಚೇರಿ, ಮನೆಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
120 ಕೋಟಿ ಆಸ್ತಿ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ ಆರೋಪದಡಿ ನಗದು, ಆಸ್ತಿ ಪತ್ರಗಳನ್ನು ಇಡಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ವಿಜಯ್ ತಾತಾ ಅಸೋಸಿಯೇಟ್ಸ್ ಆಗಿರುವ ಆರ್ ಎಸ್ ಚಂದ್ರಶೇಖರ್, ಮುನಿರಾಜು.ಕೆ, ಡಿ ನಾಗೇಂದ್ರ ಬಾಬು ಸೇರಿದಂತೆ ಹಲವು ಸಹಚರರ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿ, ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.
Watch Video: ‘ಬರಗಾಲ’ದಲ್ಲೂ ಖುಲಾಯಿಸಿದ ‘ರೈತ’ನ ಅದೃಷ್ಠ: ‘ಬೇಸಿಗೆ’ಯಲ್ಲೂ ಬೋರಲ್ಲಿ 45 ಅಡಿಗೆ ‘2.5 ಇಂಚು’ ನೀರು
‘ಮೋದಿ’ ಬಗ್ಗೆ ಮಾತನಾಡಲು ನೀವು ಯಾರು?: ಸಿದ್ದರಾಮಯ್ಯ ವಿರುದ್ಧ ‘HD ದೇವೇಗೌಡ’ ಗುಡುಗು