ನವದೆಹಲಿ: ಜಾರ್ಖಂಡ್ನ ಪಲಮು ಜಿಲ್ಲೆಯಲ್ಲಿ 21 ವರ್ಷದ ಆರ್ಕೆಸ್ಟ್ರಾ ನೃತ್ಯಗಾರ್ತಿ ಮೇಲೆ ಮೂವರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಛತ್ತೀಸ್ಗಢದ ನಿವಾಸಿಯಾದ ಸಂತ್ರಸ್ತೆ ಪಲಮು ಜಿಲ್ಲೆಯ ಬಿಶ್ರಾಂಪುರ ಪ್ರದೇಶದಲ್ಲಿ ಪ್ರಕರಣ ದಾಖಲಿಸಿದ್ದು, ಮೂವರು ಆರೋಪಿಗಳಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಮಂಡ್ಯ ಬಿಜೆಪಿ-ಜೆಡಿಎಸ್ ಮೈತ್ರಿ ಟಿಕೆಟ್ 100% ನನಗೆ ಸಿಗುತ್ತೆ: ಸುಮಲತಾ ಅಂಬರೀಶ್ ವಿಶ್ವಾಸ!
ಮೂರನೇ ಆರೋಪಿಯನ್ನು ಬಂಧಿಸುವ ಪ್ರಯತ್ನಗಳು ನಡೆಯುತ್ತಿವೆ.
ಆರೋಪಿಗಳು ಮತ್ತು ಸಂತ್ರಸ್ತೆ ಒಂದೇ ಆರ್ಕೆಸ್ಟ್ರಾ ಗುಂಪಿನಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರಿಂದ ಪರಿಚಿತರು ಎಂದು ಹೇಳಲಾಗಿದೆ.
ಮಕ್ಕಳೊಂದಿಗೆ ಸಂವಾದ: ವೈಚಾರಿಕತೆ, ವೈಜ್ಞಾನಿಕತೆ ಬೆಳೆಸಿಕೊಳ್ಳಲು ಸಿಎಂ ಸಿದ್ದರಾಮಯ್ಯ ಸಲಹೆ!
ಜಾರ್ಖಂಡ್ನ ದುಮ್ಕಾ ಜಿಲ್ಲೆಯಲ್ಲಿ ಕಳೆದ ವಾರ 28 ವರ್ಷದ ಸ್ಪ್ಯಾನಿಷ್ ಯುವತಿಯ ಮೇಲೆ ಅತ್ಯಾಚಾರ ನಡೆದಿದ್ದು, ರಾಜ್ಯದ ರಾಜಧಾನಿ ರಾಂಚಿಯಿಂದ 300 ಕಿ.ಮೀ ದೂರದಲ್ಲಿರುವ ಹನ್ಸ್ದಿಹಾ ಪೊಲೀಸ್ ಠಾಣೆ ಪ್ರದೇಶದಲ್ಲಿ ಅತ್ಯಾಚಾರ ನಡೆದಿದೆ. ಕಳೆದ ಶುಕ್ರವಾರ ಆಕೆ ತನ್ನ ಪತಿಯೊಂದಿಗೆ ಟೆಂಟ್ ನಲ್ಲಿ ರಾತ್ರಿ ಕಳೆಯುತ್ತಿದ್ದಾಗ ಈ ಘಟನೆ ನಡೆದಿದೆ.
ದಂಪತಿಗಳು ಬಾಂಗ್ಲಾದೇಶದಿಂದ ಎರಡು ಮೋಟಾರ್ ಸೈಕಲ್ ಗಳಲ್ಲಿ ದುಮ್ಕಾ ತಲುಪಿದ್ದರು ಮತ್ತು ಬಿಹಾರದ ಮೂಲಕ ನೇಪಾಳಕ್ಕೆ ಹೋಗಬೇಕಿತ್ತು. ಮಹಿಳೆ ದೂರು ದಾಖಲಿಸಿದ ನಂತರ ಮೂವರನ್ನು ಬಂಧಿಸಲಾಗಿದೆ. ಆದಾಗ್ಯೂ, ಉಳಿದ ನಾಲ್ವರು ಆರೋಪಿಗಳನ್ನು ಬಂಧಿಸುವ ಪ್ರಯತ್ನಗಳು ನಡೆಯುತ್ತಿವೆ.
ಜಾರ್ಖಂಡ್ ಪೊಲೀಸರು ಸಂತ್ರಸ್ತೆಯ ಪತಿಗೆ 10 ಲಕ್ಷ ರೂ.ಗಳ ಪರಿಹಾರವನ್ನು ಹಸ್ತಾಂತರಿಸಿದ್ದಾರೆ. ತ್ವರಿತ ಕ್ರಮಕ್ಕಾಗಿ ಅವರು ಜಾರ್ಖಂಡ್ ಪೊಲೀಸರಿಗೆ ಧನ್ಯವಾದ ಅರ್ಪಿಸಿದರು. ಪೊಲೀಸರ ರಕ್ಷಣೆಯಲ್ಲಿ ದಂಪತಿಗಳು ಇಂದು ದುಮ್ಕಾದಿಂದ ಹೊರಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಎ.ದೊಡ್ಡೆ ತಿಳಿಸಿದ್ದಾರೆ.