ಬೆಂಗಳೂರು: ಕರ್ತವ್ಯಕ್ಕೆ ಅನಧಿಕೃತ ಗೈರುಹಾಜರಾದ ನೌಕರರ ಪ್ರಕರಣಗಳಲ್ಲಿ ಶಿಸ್ತು ಕ್ರಮದ ಬಗ್ಗೆ ಮಹತ್ವದ ಆದೇಶವನ್ನು ಹೊರಡಿಸಲಾಗಿದೆ. ಆದೇಶದಲ್ಲಿ ಉಲ್ಲೇಖ ಮಾಡಲಾಗಿರುವ ಮಾಹಿತಿಗಳು ಈ ಕೆಳಕಂಡತಿದೆ.
ಸರ್ಕಾರದ ಅಧಿಕೃತ ಜ್ಞಾಪನ : ಸಿಆಸುಇ 25ಸೇಇವಿ 2001 ದಿನಾಂಕ: 01/08/2001 ವಿಷಯದನ್ವಯ, ಅನಧಿಕೃತವಾಗಿ ಗೈರು ಹಾಜರಾಗಿರುವ ಸರ್ಕಾರಿ ನೌಕರರ ಮೇಲೆ ಇಲಾಖಾ ವಿಚಾರಣೆಯನ್ನು ನಡೆಸಿ ಅಂತಹವರನ್ನು ಕೆಲಸದಿಂದ ತೆಗೆದುಹಾಕುವ ಅಥವಾ ವಜಾಮಾಡುವ ಬಗ್ಗೆ ಕ್ರಮ ತೆಗೆದುಕೊಳ್ಳುವ ವಿಷಯದಲ್ಲಿ ಅನುಸರಿಸಬೇಕಾದ ಕ್ರಮವನ್ನು ಉಲ್ಲೇಖ-1 ರ ಸುತ್ತೋಲೆಯಲ್ಲಿ ಸ್ಪಷ್ಟವಾಗಿ ನಮೂದಿಸಲಾಗಿರುತ್ತದೆ.
BREAKING: ರಾಜ್ಯ ಸರ್ಕಾರಕ್ಕೆ ಇಮೇಲ್ ಮೂಲಕ ‘ಬಾಂಬ್ ಬೆದರಿಕೆ’: ತನಿಖೆ ಆರಂಭಿಸಿದ ಅಧಿಕಾರಿಗಳು
ಕೆಲವು ಶಿಕ್ಷಕರು ವರ್ಗಾವಣೆಗೆ ಪರ್ಯಾಯವಾಗಿ ಉದ್ದೇಶಪೂರ್ವಕವಾಗಿ ಕರ್ತವ್ಯಕ್ಕೆ ಅನಧಿಕೃತ ಗೈರುಹಾಜರಾಗಿ ನಂತರ ಅಮಾನತ್ತುಗೊಂಡು ನಂತರ ತಮಗೆ ಅನುಕೂಲಕರವಾದ ಶಾಲೆಗೆ ಸ್ಥಳನಿಯುಕ್ತಿಗೊಳ್ಳುತ್ತಿರುವ ಕುರಿತಾಗಿ ಪತ್ರಿಕೆಗಳಲ್ಲಿ ವರದಿ ಪ್ರಕಟವಾಗಿರುತ್ತದೆ ಮತ್ತು ರಾಜ್ಯದ ಕೆಲವು ಉಪನಿರ್ದೇಶಕರು(ಆಡಳಿತ) ಇವರು ಸರ್ಕಾರದ ನಿಯಮಾವಳಿಗಳನ್ನು ಉಲ್ಲಂಘಿಸಿ ಅನಧಿಕೃತ ಗೈರುಹಾಜರಾಗಿರುವ ಶಿಕ್ಷಕರನ್ನು ಸೇವೆಯಿಂದ ಅಮಾನತ್ತುಗೊಳಿಸಿ ಜಿಲ್ಲೆಯೊಳಗೆ ಒಂದು ತಾಲ್ಲೂಕಿನಿಂದ ಮತ್ತೊಂದು ತಾಲ್ಲೂಕಿಗೆ ಅಂದರೆ ಹೆಚ್ಚು ಖಾಲಿ ಹುದ್ದೆಗಳು ಇರುವ ತಾಲ್ಲೂಕಿನಿಂದ ಶಿಕ್ಷಕರನ್ನು ಅಮಾನತ್ತುಗೊಳಿಸುತ್ತಿರುವುದು ಕಂಡುಬಂದಿರುತ್ತದೆ. ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) ಕಾಯ್ದೆ-2020ರ ಸೆಕ್ಷನ್-7(1)ರ ಪ್ರಕಾರ ಅಮಾನತ್ತು ತೆರವುಗೊಳಿಸಿ ಕಡ್ಡಾಯವಾಗಿ ‘ಸಿ’ ವಲಯದ ಶಾಲೆಗೆ ಸ್ಥಳನಿಯುಕ್ತಿಗೊಳಿಸಬೇಕಾಗುತ್ತದೆ. ಮಕ್ಕಳ ಮತ್ತು ಶಿಕ್ಷಕರ ಅನುಪಾತಕ್ಕೆ ತಕ್ಕಂತೆ ಹೆಚ್ಚು ಖಾಲಿ ಹುದ್ದೆಗಳಿರುವ ತಾಲ್ಲೂಕಿಗೆ ಸ್ಥಳ ನಿಯುಕ್ತಿಗೊಳಿಸಬೇಕಾಗುತ್ತದೆ. ಆದರೆ ಕೆಲವು ಉಪನಿರ್ದೇಶಕರುಗಳು ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿ ನಿಯಮಬಾಹಿರವಾಗಿ ಶಿಕ್ಷಕರ ಸ್ಥಳನಿಯುಕ್ತಿಗೊಳಿಸುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿರುತ್ತದೆ. ಈ ವಿಚಾರವನ್ನು ಬಹಳ ಗಂಭೀರವಾಗಿ ಪರಿಗಣಿಸಿದೆ.
‘ಪಾಕಿಸ್ತಾನ ಪರ’ ಘೋಷಣೆ ಕೇಸ್: ‘ನಾಸೀರ್ ಹುಸೇನ್’ ವಿರುದ್ಧ FIR ದಾಖಲಿಸಲು ಬಿವೈ ವಿಜಯೇಂದ್ರ ಒತ್ತಾಯ
ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿಯನ್ನು ಪಡೆಯದೇ ಕರ್ತವ್ಯಕ್ಕೆ ಅನಧಿಕೃತ ಗೈರುಹಾಜರಿಯ ಅವಧಿಯಲ್ಲಿ ಅಂತಹ ನೌಕರರಿಗೆ ವೇತನವನ್ನು ಪಾವತಿಸಲಾಗುವುದಿಲ್ಲ. ಒಂದು ವೇಳೆ ಅನಧಿಕೃತ ಗೈರುಹಾಜರಾದಂತಹಾ ಶಿಕ್ಷಕರನ್ನು ಸಿ.ಸಿ.ಎ ನಿಯಮ-10ರಡಿಯಲ್ಲಿ ಸೇವೆಯಿಂದ ಅಮಾನತ್ತುಗೊಳಿಸಿದಲ್ಲಿ ಅಂತಹಾ ನೌಕರನಿಗೆ ನಿಯಮಾನುಸಾರ ಜೀವನಾಧಾರ ಭತ್ಯೆಯನ್ನು ಅನಿವಾರ್ಯವಾಗಿ ಪಾವತಿಸಲಾಗುವುದರಿಂದ ಸರ್ಕಾರಕ್ಕೆ ಆರ್ಥಿಕ ಹೊರೆಯಾಗುತ್ತದೆ. ಹೀಗಿದ್ದರೂ ಸಹಾ ಗೈರುಹಾಜರಾದ ಶಿಕ್ಷಕರನ್ನು ನಿಯಮ ಉಲ್ಲಂಘಿಸಿ ಅಮಾನತ್ತುಗೊಳಿಸಿದ್ದೇ ಆದಲ್ಲಿ ಅಂತಹಾ ಶಿಕ್ಷಕರಿಗೆ ಪಾವತಿಸಲಾಗುವ ಜೀವನಾಧಾರ ಭತ್ಯೆಯಿಂದ ಸರ್ಕಾರಕ್ಕೆ ಉಂಟಾಗಿರುವ ಆರ್ಥಿಕ ನಷ್ಟವನ್ನು ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರದಿಂದ ವಸೂಲಿ ಮಾಡಲು ಕ್ರಮಕೈಗೊಳ್ಳಬೇಕಾಗುತ್ತದೆ.
ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ವಿಚಾರ : ನಾಸಿರ್ ಹುಸೇನ್ ಬಂಧಿಸುವಂತೆ ಬಿಜೆಪಿಯಿಂದ ದೂರು ದಾಖಲು
ಸಾಮಾನ್ಯವಾಗಿ ಕರ್ನಾಟಕ ಸಿವಿಲ್ ಸೇವೆಗಳು (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳ ನಿಯಮ-11 ಮತ್ತು ನಿಯಮ-IIAಗೆ ಅನುಗುಣವಾಗಿ ವಿಚಾರಣೆ ನಡೆಸಲು ಮತ್ತು ಶಿಸ್ತುಕ್ರಮವನ್ನು ಅಂತಿಮಗೊಳಿಸಲು ಹೆಚ್ಚು ಸಮಯ ತೆಗೆದುಕೊಳ್ಳಲು ಅವಕಾಶವಿರುವುದಿಲ್ಲ. ಸರ್ಕಾರಿ ನೌಕರನು ಸಕ್ಷಮ ಪ್ರಾಧಿಕಾರದ ಸೂಚನೆಗಳು/ ಆದೇಶಗಳನ್ನು ಸ್ವೀಕರಿಸಲು ನಿರಾಕರಿಸಿದರೆ, ಕರ್ನಾಟಕ ಸಿವಿಲ್ ಸೇವೆಗಳು (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳ ನಿಯಮ 28-A ಅಡಿಯಲ್ಲಿ ನಿಗದಿಪಡಿಸಿದ ಕಾರ್ಯವಿಧಾನವನ್ನು ಅನುಸರಿಸಿ ಅಗತ್ಯತೆಯನುಸಾರ ವಿಚಾರಣೆಯನ್ನು ನಡೆಸಬಹುದು. ಅನಧಿಕೃತ ಗೈರುಹಾಜರಿಯ ಆರೋಪ ಸಾಬೀತಾದಲ್ಲಿ ಅವರನ್ನು ಸೇವೆಯಿಂದ ತೆಗೆದುಹಾಕುವ ಅಥವಾ ವಜಾಗೊಳಿಸುವ ಅಂತಿಮ ಆದೇಶವನ್ನು ಜಾರಿಗೊಳಿಸಬೇಕಾಗಿರುವುದು ಸಕ್ಷಮ ಶಿಸ್ತು ಪ್ರಾಧಿಕಾರದ ಆಧ್ಯ ಕರ್ತವ್ಯವಾಗಿದೆ. ಈ ಕುರಿತಾಗಿ ಉಲ್ಲೇಖ-3 ರ ಸರ್ಕಾರದ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಇದಕ್ಕೆ ಪೂರಕವಾಗಿ ಅನಧಿಕೃತ ಗೈರುಹಾಜರಾದ ಸರ್ಕಾರಿ ನೌಕರರ ವಿರುದ್ಧ ತೆಗೆದುಕೊಳ್ಳಬೇಕಾದ ಕ್ರಮದ ಬಗ್ಗೆ ಹಾಗೂ ಸಕಾಲದಲ್ಲಿ ಇಂತಹಾ ಕ್ರಮವನ್ನು ತೆಗೆದುಕೊಳ್ಳದಿರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವ ಬಗ್ಗೆ ಸೂಚನೆಗಳನ್ನು ನೀಡಲಾಗಿದೆ.