ಬೆಂಗಳೂರು: ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ್ದ ಮೂವರು ಬಂಧನಕ್ಕೆ ಸಂಬಂಧಪಟ್ಟಂತೆ ಇಂದು ಗೃಹ ಸಚಿವ ಜಿ.ಪರಮೇಶ್ವರ್ ಅವರು ಸುದ್ದಿಯನ್ನು ಖಚಿತ ಪಡಿಸಿದ್ದಾರೆ.
ಭಾರತದಲ್ಲಿ ನೀವು ಕಾನೂನುಬದ್ಧವಾಗಿ ಎಷ್ಟು ಹಣವನ್ನು ಮನೆಯಲ್ಲಿ ಇಟ್ಟುಕೊಳ್ಳಬಹುದು? ಇಲ್ಲಿದೆ ಮಾಹಿತಿ
ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಬೆಂಗಳೂರು ಸೇರಿದಂತೆ 7 ರಾಜ್ಯಗಳಲ್ಲಿ ಎನ್ಐಎ ದಾಳಿ
ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಬೆಂಗಳೂರು ಸೇರಿದಂತೆ 7 ರಾಜ್ಯಗಳಲ್ಲಿ ಎನ್ಐಎ ದಾಳಿ
ಅವರು ಇಂದು ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡುತ್ತ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಕಾನೂನು ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಅಂತ ಹೇಳಿದರು.ಇನ್ನೂ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅವರು ಮಾತನಾಡುತ್ತ ಸಿಸಿಬಿ ಮತ್ತು ಎನ್‌ಐಎ ಇಬ್ಬರೂ ಕೂಡ ತನಿಖೆಯನ್ನು ನಡೆಸಲಿದ್ದಾರೆ. ತನಿಖೆ ಬಗ್ಗೆ ಸದ್ಯ ಹೆಚ್ಚಿನ ಮಾಹಿತಿಯನ್ನು ನೀಡಲು ಸಾಧ್ಯವಿಲ್ಲ ಅಂಥ ಹೇಳಿದರು.
ವರದಿಯನ್ನು ಆಧಾರವಾಗಿ ಇಟ್ಟುಕೊಂಡು ಬಂಧನ ಮಾಡಲಾಗಿದೆ ಅಂತ ಅವರು ಇದೇ ವೇಳೆ ಹೇಳಿದರು. ಇನ್ನೂ ಇದೇ ವೇಳೆ ಅವರು ಮಾತನಾಡಿ ಖಾಸಗಿಯವರು ಕೂಡ ಈ ಬಗ್ಗೆ ನಿಜವೆಂದು ಹೇಳಿದ್ದರು, ಆದರೆ ಅದನ್ನು ನಾವು ಒಪ್ಪಿಕೊಂಡಿಲ್ಲ, ಬದಲಿಗೆ ನಮ್ಮದೇ ಆದ FSL ವರದಿ ಬಂದ ನಂತರ ನಾವು ಕ್ರಮವನ್ನು ಕೈಗೊಂಡಿದ್ದೇವೆ, ಸದ್ಯ ಆರೋಪಿಗಳು ಪೊಲೀಸರ ವಶದಲ್ಲಿದ್ದಾರೆ. ಸದ್ಯ ಕಾನೂನು ಪ್ರಕಾರ ಮುಂದಿನ ಕ್ರಮವನ್ನು ಕೈಗಳ್ಳಲಾಗುವುದು ಅಂಥ ಹೇಳಿದರು.ಇನ್ನೂ ವಿ.ಪಗಳ ಆರೋಪವನ್ನು ತಳ್ಳಿ ಹಾಕಿದ ಅವರು, ಅವರು ಹೇಳಿದ ಹಾಗೇ ನಡೆದುಕೊಳ್ಳುವುದಕ್ಕೆ ಆಗೋದು ಇಲ್ಲ. ಸಿಕ್ಕ ಸಿಕ್ಕವರನ್ನು ಬಂಧಿಸಲು ಹೇಗೆ ಸಾಧ್ಯವಿದೆ ಹೇಳಿ ಅಂತ ಮಾಧ್ಯಮವದರನ್ನು ಪ್ರಶ್ನೆ ಮಾಡಿದರು. ಇನ್ನೂ FSL ವರದಿ ಆಧಾರವಾಗಿಯೇ ಅವರನ್ನು ಬಂಧಿಸಲಾಗಿದೆ. ತನಿಖೆಯಲ್ಲಿ ಎಲ್ಲವನ್ನು ತಿಳಿದುಕೊಳ್ಳಲಾಗುವುದು ಅಂತ ಹೇಳಿದರು.