ಬೀದರ್: ಜಿಲ್ಲೆಯ ಹಲವೆಡೆ ಇಂದು ರಾತ್ರಿ ಭೂಕಂಪನ ಉಂಟಾಗಿದೆ. ಲಘು ಭೂಕಂಪನದಿಂದಾಗಿ ಭೂಮಿ ಕಂಪಿಸಿದ ಪರಿಣಾಮ ಜನರು ಬೆಚ್ಚಿ ಬಿದ್ದಿರೋದಾಗಿ ತಿಳಿದು ಬಂದಿದೆ.
ಬೀದರ್ ಜಿಲ್ಲೆಯಲ್ಲಿ ಸಂಜೆ ಸುಮಾರು 7.40 ಗಂಟೆಗೆ ಭೂಕಂಪನ ಉಂಟಾಗಿದೆ. ಬೀದರ್ ತಾಲೂಕಿನ ಇಸ್ಲಾಂಪುರದ ಯರನಹಳ್ಳಿಯಲ್ಲಿ 1.85 ತೀವ್ರತೆಯಲ್ಲಿ ಭೂಕಂಪನ ಸಂಭವಿಸಿದೆ. ಅಲ್ಲದೇ ಬಸವಕಲ್ಯಾಣದ ರಾಜೇಶ್ವರದಲ್ಲಿ 2.6ರಷ್ಟು ತೀವ್ರತೆಯಲ್ಲಿ ಭೂಮಿ ಕಂಪಿಸಿದೆ.
ಇದಲ್ಲದೇ ಯರಭಾಗದಲ್ಲಿ 3.2 ರಷ್ಟು ತೀವ್ರತೆಯಲ್ಲಿ ಭೂಮಿ ಕಂಪನ ಉಂಟಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣ ಕೇಂದ್ರದಿಂದ ಈ ಮಾಹಿತಿಯನ್ನು ಬಿಡುಗಡೆ ಮಾಡಲಾಗಿದೆ.