ಚಾಮರಾಜನಗರ: ಜಿಲ್ಲೆಯ ಇತಿಹಾಸ ಪ್ರಸಿದ್ಧ ಬಿಳಿಗಿರಿ ರಂಗನ ಬೆಟ್ಟದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದೆ. ಬಿಸಿಲ ಬೇಗೆಯ ಜೊತೆಗೆ ಬೀಸುವ ಗಾಳಿಯಿಂದಾಗಿ ಕಾಳ್ಗಿಚ್ಚು ಬಿಳಿಗಿರಿರಂಗನ ಬೆಟ್ಟದ ದುರ್ಗಮ ಅರಣ್ಯ ಪ್ರದೇಶಕ್ಕೂ ವ್ಯಾಪಿಸಿದ್ದು, ನೂರಾರು ಎಕರೆ ಅರಣ್ಯ ಪ್ರದೇಶ ಬೆಂಕಿಗಾಹುತಿಯಾಗುತ್ತಿದೆ.
ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಪುಣಜನೂರು ವಲಯದ ಕುರಿಮಂದೆ ಸೇರಿದಂತೆ 3-4 ಕಡೆಯಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದೆ. ಅರಣ್ಯದ ದುರ್ಗಮ ಪ್ರದೇಶಗಳಿಗೆ ಬೆಂಕಿ ವ್ಯಾಪಿಸಿದ್ದು, ಕಾಡ್ಗಿಚ್ಚಿನಿಂದ ನೂರಾರು ಎಕರೆ ಅರಣ್ಯ ಪ್ರದೇಶ ಬೆಂಕಿಗಾಹುತಿಯಾಗಿದೆ.
ಬೆಂಕಿಯನ್ನು ನಂದಿಸಲು ಅರಣ್ಯ ಇಲಾಖೆಯ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಕ್ಷಣ ಕ್ಷಣಕ್ಕೂ ಬೆಂಕಿ ಕಾಡಿನ ಮತ್ತಷ್ಟು ಭಾಗಕ್ಕೆ ವ್ಯಾಪಿಸುತ್ತಿದ್ದು, ಹತೋಟಿಗೆ ಬಾರದಷ್ಟು ಹೆಚ್ಚಾಗುತ್ತಿದೆ ಎನ್ನಲಾಗುತ್ತಿದೆ.
ಬಿಜೆಪಿ ‘Modi ka Parivar’ ಅಭಿಯಾನ ಆರಂಭ : “ಮೋದಿಗೆ ಕುಟುಂಬವಿಲ್ಲ” ಲಾಲು ಹೇಳಿಕೆಗೆ ತಿರುಗೇಟು