ಕೆಎನ್ಎನ್ಡಿಜಿಟಲ್ಡೆಸ್ಕ್: ಸಾಂಪ್ರದಾಯಕ ಸಿಹಿ ಪದಾರ್ಥಗಳನ್ನು ಮಾಡುವಾಗ ಬೆಲ್ಲ ಬಳಸೋದು ಸಹಜ. ಬೆಲ್ಲದ ಅಡುಗೆಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದರೆ ನಾವಿಂದು ಹಳೆಯ ಸಾಂಪ್ರದಾಯಕ ಬೆಲ್ಲದ ಸಿಹಿ ಪದಾರ್ಥಗಳ ಸೇವನೆ ಕಡಿಮೆ ಮಾಡಿದ್ದೇವೆ. ಸಕ್ಕರೆ ಸಿಹಿ ಪದಾರ್ಥಗಳ ಸೇವನೆ ಹೆಚ್ಚಾಗಿದೆ. ಬೆಲ್ಲ ಸೇವನೆ ಇಲ್ಲದೇ ಇರುವುದು ಆರೋಗ್ಯಕ್ಕೆ ಅನೇಕ ನಷ್ಟಗಳಿವೆ. ಈ ಲೇಖನ ಓದಿ ಬೆಲ್ಲ ಸೇವನೆಯಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಲಾಭಗಳಿವೆ ಎಂದು ತಿಳದುಕೊಂಡು, ಇನ್ನು ಮೇಲಾದರೂ ಬೆಲ್ಲ ಸೇವನೆಯನ್ನು ನಿಯಮಿತವಾಗಿ ಮಾಡುತ್ತಾ ಬನ್ನಿ. ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ ಎಂಬುದು ಈ ಲೇಖನದ ಆಶಯವಾಗಿದೆ.
ಬೆಲ್ಲ ರಕ್ತ ಶುದ್ಧೀಕರಣ ಮಾಡುವಲ್ಲಿ ಎತ್ತಿದ ಕೈ. ಬೆಲ್ಲವನ್ನು ನಿಯಮಿತವಾಗಿ ಆಗಾಗ ಸೇವಿಸುತ್ತಾ ಬಂದರೆ ರಕ್ತ ಶುದ್ಧೀಕರಣವಾಗುತ್ತದೆ. ಮತ್ತು ಇದರಿಂದ ಅನಾರೋಗ್ಯ ಸಮಸ್ಯೆ ಕಾಡುವುದು ಕಡಿಮೆಯಾಗುತ್ತದೆ. ಇದು ಎಕೃತ್ತಿನ ಆರೋಗ್ಯ ಕಾಪಾಡುವಲ್ಲಿ ಅತ್ಯಂತ ಪ್ರಯೋಜನಕಾರಿಯಾಗಿದೆ.
ಮಲಬದ್ಧತೆ ನಿವಾರಣೆ ಮಾಡುವಲ್ಲಿ ಬೆಲ್ಲ ತುಂಬಾ ಉತ್ತಮ ಕೆಲಸ ಮಾಡುತ್ತದೆ. ಬೆಲ್ಲವು ದೇಹದಲ್ಲಿ ಜೀರ್ಣಕಾರಿ ಕಿಣ್ವಗಳನ್ನು ಸಕ್ರೀಯಗೊಳಿಸುತ್ತದೆ. ಹೀಗಾಗಿ ಇದು ಕರುಳಿನ ಚಲನವಲನಗಳನ್ನು ಉತ್ತಮಗೊಳಿಸಿ, ಕರುಳನ್ನು ಆರೋಗ್ಯವಾಗಿರುವಂತೆ ನೋಡಿಕೊಳ್ಳುತ್ತದೆ. ಇದರಿಂದ ಮಲಬದ್ಧತೆ ಸಮಸ್ಯೆ ಕೂಡ ಕಾಡುವುದಿಲ್ಲ. ಬೆಲ್ಲ ಸೇವಿಸಿದರೆ ಕರುಳಿನಲ್ಲಿನ ಗಟ್ಟಿ ಮಲವನ್ನು ಸುಲಭವಾಗಿ ಹೊರ ಹೋಗಲು ನೆರವಾಗುತ್ತದೆ. ಒಟ್ಟಾರೆ ಬಲ್ಲ ಸೇವನೆ ಜೀರ್ಣಕ್ರಿಯೆಗೆ ತುಂಬಾ ಉಪಯುಕ್ತ.
ಮುಟ್ಟಿನ ಸಮಸ್ಯೆ ಇದ್ದವರಿಗೆ ಬೆಲ್ಲ ಒಂದು ನೈಸರ್ಗಿಕ ಮನೆಮದ್ದಾಗಿದೆ. ಇದರಲ್ಲಿ ಅನೇಕ ಪೋಷಕಾಂಶಗಳದ್ದು, ಹಾರ್ಮೋನ್ಗಳನ್ನು ಸಮತೋಲನದಲ್ಲಿ ಇರಿಸುತ್ತದೆ. ನಿಯಮಿತವಾಗಿ ಬೆಲ್ಲ ಸೇವಿಸಿದರೆ ಮುಟ್ಟಿನ ತೊಂದರೆಗಳಿಂದ ದೂರ ಉಳಿಯಬಹುದು.
ಬೆಲ್ಲದಲ್ಲಿನ ಎಲೆಕ್ಟ್ರೋಲೈಟ್ ಸ್ನಾಯುಗಳಿಗೆ ಉತ್ತಮ ಶಕ್ತಿ ನೀಡುತ್ತದೆ. ಅಲ್ಲದೇ ಇದರ ನಿಯಮಿತವಾದ ಸೇವನೆ ಚಯಾಪಚಯ ಕ್ರಿಯೆಯನ್ನು ಸುಲಭಗೊಳಿಸುತ್ತದೆ. ದೇಹದಲ್ಲಿನ ಕೊಬ್ಬು ಕರಗಿ ದೇಹದ ತೂಕವನ್ನು ಕ್ರಮೇಣವಾಗಿ ಕರಗಿಸುವ ಶಕ್ತಿ ಬೆಲ್ಲಕ್ಕಿದೆ.
ಬೆಲ್ಲದಲ್ಲಿ ಸತು, ಸೆಲೆನಿಯಮ್ ನಂತಹ ಪ್ರಮುಖ ಖನಿಜಾಂಶಗಳಿವೆ. ಇವು ದೇಹಕ್ಕೆ ದೀರ್ಘಕಾಲದವರೆಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಯಾವುದೇ ರೀತಿ ಸೊಂಕಿನ ವಿರುದ್ಧ ಹೋರಾಡುವ ಶಕ್ತಿಯನ್ನು ಬೆಲ್ಲ ನೀಡುತ್ತದೆ. ಆಗಾಗ ಬೆಲ್ಲ ಸೇವಿಸಿದರೆ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಿಕೊಳ್ಳಬಹುದು.
ಕೀಲು ನೋವಿನ ಸಮಸ್ಯೆ ಇದ್ದರೆ ನಿತ್ಯವೂ ಬೆಲ್ಲ ಸೇವಿಸಿ. ನಿತ್ಯವೂ ಬೆಲ್ಲದ ಹಾಲು ಸೇವಿಸಿದರೆ ಸಂಧಿವಾತ ಕೀಲು ನೋವಿ, ಮೂಳೆ ನೋವಿನ ಸಮಸ್ಯೆಯಿಂದ ಪಾರಾಗಬಹುದು.
ಸೂಚನೆ: ಆರೋಗ್ಯ ತಜ್ಞರು ಮತ್ತು ಅಧ್ಯಯನಗಳ ಪ್ರಕಾರ ಈ ವಿವರಗಳನ್ನು ಒದಗಿಸಲಾಗಿದೆ. ಈ ಲೇಖನವು ನಿಮ್ಮ ತಿಳುವಳಿಕೆಗಾಗಿ ಮಾತ್ರ. ಇವುಗಳನ್ನು ಅನುಸರಿಸುವ ಫಲಿತಾಂಶಗಳು ಕೇವಲ ವೈಯಕ್ತಿಕವಾಗಿವೆ. ಇವುಗಳನ್ನು ಅನುಸರಿಸುವ ಮೊದಲು ಸಂಬಂಧ ಪಟ್ಟ ವೈದ್ಯರು, ತಜ್ಞರನ್ನು ಸಂಪರ್ಕಿಸುವುದು ಉತ್ತಮ ಮಾರ್ಗವಾಗಿದೆ. ನೀವು ಗಮನಿಸಬಹುದು.