ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ನಿದ್ರೆ ಆರೋಗ್ಯಕ್ಕೆ ನೈಸರ್ಗಿಕ ಔಷಧಿ. ಒಳ್ಳೆಯ ನಿದ್ರೆ ಒಳ್ಳೆಯ ಆರೋಗ್ಯದ ಸಂಕೇತ. ತುಂಬಾ ದಣಿದಾಗ ಚೆನ್ನಾಗಿ ನಿದ್ರೆ ಮಾಡಿ ಎದ್ದರೆ ಆ ದಣಿವು ಆಯಾಸವೆಲ್ಲಾ ಮಾಯವಾಗುತ್ತದೆ. ಆದರೆ ಕೆಲವರಿಗೆ ಎಷ್ಟೇ ದಣಿದರು ಎಷ್ಟೇ ಸುಸ್ತಾದರು ನಿಂದ್ರೆ ಎಂಬುಗು ಮರಿಚಿಕೆಯಾಗಿರುತ್ತದೆ. ಈಗಿನ ಒತ್ತಡದ ಜೀವನದಲ್ಲಿ ಅನೇಕ ಜನ ಈ ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ.
ನಿದ್ರಾಹೀನತೆ ಎಂದರೆ ರಾತ್ರಿ ಬೇಗೆನೇ ನಿದ್ರೆ ಆಗದೇ ಇರುವುದ. ಅಥವಾ ಮಲಗಿದಾಗ ಆಗಾಗ ಎಚ್ಚರವಾಗುವುದು. ಇನ್ನು ಕೆಲವೊಮ್ಮೆ ರಾತ್ರಿ ನಿದ್ರೆ ಬಾರದೇ ಬೆಳಗಿನ ಜಾವ ನಿದ್ರೆ ಹೋಗುವುದು ಹೀಗೆ ನಿದ್ರಾಹೀನತೆಯಲ್ಲಿ ಅನೇಕ ಸಮಸ್ಯೆಗಳಿವೆ.
ರಾತ್ರಿ ಬೇಗ ನಿದ್ರೆ ಬಾರದೇ ಇದ್ದಾಗ ಅಥವಾ ಮಧ್ಯೆ ಮಧ್ಯೆ ಎಚ್ಚರವಾದಾಗ ತುಂಬಾ ಕಿರಿಕಿರಿ ಉಂಟಾಗುತ್ತದೆ. ಹೀಗೆ ನಿದ್ರೆ ಸರಿಯಾಗಿ ಆಗದೇ ಇದ್ದಾಗ ದೈಹಿಕವಾಗಿ ಹಾಗು ಮಾನಸಿಕವಾಗಿ ಆರೋಗ್ಯಕ್ಕೆ ಒಳಗಾಗುತ್ತಾರೆ. ದೇಹಕ್ಕೆ ಸರಿಯಾಗಿ ನಿದ್ರೆ ಆಗದೇ ಸರಿಯಾಗಿ ವಿಶ್ರಾಂತಿ ಸಿಗದೇ ಇದ್ದಾಗ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ. ನಿದ್ರೆ ಸರಿಯಾಗಿ ಆಗದೇ ಇದ್ದಾಗ ದೇಹಕ್ಕೆ ದಿನವಿಡೀ ದೇಹಕ್ಕೆ ಸುಸ್ತು, ಆಯಾಸ, ತಲೆನೋವು ಮೈಕೈ ನೋವು, ದೇಹಕ್ಕೆ ಮನಸ್ಸಿಗೆ ಆಲಸ್ಯೆ, ಯಾವ ಕೆಲಸ ಮಾಡಲೂ ಮನಸ್ಸು, ಏಕಾಗ್ರತೆ ಇಲ್ಲದೇ ಇರುವುದು. ಹೀಗೆ ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.
ರಾತ್ರಿ ಸರಿಯಾಗಿ ನಿದ್ರೆಯಾಗದೇ ಇರುವುದಕ್ಕೆ ಮುಖ್ಯ ಕಾರಣ ಒತ್ತಡ. ಮಾನಸಿಕ ಒತ್ತಡ ದೇಹದಲ್ಲಿ ಕಾರ್ಟಿಸೋಲ್ ಮಟ್ಟವನ್ನು ಹೆಚ್ಚಿಸುತ್ತದೆ. ಇದರಿಂದ ನಿಮ್ಮ ಮೆದುಳು ಸದಾ ಕಾರ್ಯನಿರತವಾಗಿರುತ್ತದೆ. ಹೀಗಿದ್ದಾಗ ನೀವು ಸರಿಯಾಗಿ ನಿದ್ರೆ ಮಾಡದೇ ಹೋಗುವಿರಿ.
ಮತ್ತೊಂದು ಮುಖ್ಯ ಕಾರಣ ಎಂದರೆ ರಾತ್ರಿ ವೇಳೆ ಹೆಚ್ಚು ಮೊಬೈಲ್ ಹಾಗು ಸಾಮಾಜಿಕ ಜಾಲತಾಣಗಳಿಗೆ ಜೋತು ಬೀಳುವುದು. ಅರ್ಧ ರಾತ್ರಿವರೆಗೂ ಮೊಬೈಲ್ ಜೊತೆ ಸಮಯ ಕಳೆಯುವ ಜನರೂ ಇದ್ದಾರೆ. ಮೊಬೈಲ್‌ನ ಅತಿಯಾದ ಬಳಕೆ ಕಣ್ಣಿನ ಹಾಗು ಮೆದುಳಿನ ಆರೋಗ್ಯವನ್ನು ಹಾಳು ಮಾಡುತ್ತದೆ. ಮೆದುಳಗೆ ವಿಶ್ರಾಂತಿ ಕೊಡುವ ಸಮಯದಲ್ಲಿ ಹೆಚ್ಚು ಕೆಲಸ ಕೊಟ್ಟರೆ ನಿದ್ರೆ ಹೇಗೆ ಬರುತ್ತದೆ..?
ಇನ್ನು ಕೆಲವರಿಗೆ ರಾತ್ರಿ ಸಮಯದಲ್ಲಿಯೇ ಉಸಿರಾಟದ ತೊಂದರೆ ಹೆಚ್ಚಿರುತ್ತದೆ. ಹೀಗೆ ಅತಿಯಾಗಿ ಉಸಿರಾಟ ಆಗದೇ ಇದ್ದಾಗ ರಾತ್ರಿ ಮಲಗಿದಾಗ ನಿದ್ರೆಯಲ್ಲಿ ಆಗಾಗ ಎಚ್ಚರವಾಗುತ್ತಿರುತ್ತದೆ.
ಥೈರಾಯ್ಡ್ ಕೂಡ ನಿದ್ರಾಹೀನತೆಗೆ ಕಾರಣ. ಥೈರಾಯ್ಡ್ ಇದ್ದರೆ ಆರೋಗ್ಯದಲ್ಲಿ ಏರುಪೇರಾಗುವುದು ಸಹಜ. ಹಾಗಾಗಿ ಅಸಮತೋಲನ ಆರೋಗ್ಯ ನಿದ್ರೆ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಹೀಗೆ ನಿದ್ರೆ ಸರಿಯಾಗಿ ಆಗದೇ ಇದ್ದಾಗ ಮಾಡಬೇಕಾದ ಮುಖ್ಯ ಕೆಲಸಗಳೆಂದರೆ ನಿಯಮಿತವಾದ ದಿನಚರಿ ಮಾಡಿಕೊಳ್ಳಿ, ಉತ್ತಮ ಆರೋಗ್ಯಕರವಾದ ಜಾತಾ ಆಹಾರ ಸೇವಿಸಿ, ದೈಹಿಕ ಚಟುವಟಿಕೆಗಳನ್ನು ನಿತ್ಯವೂ ರೂಢಿಸಿಕೊಳ್ಳಿ, ಯೋಗ ಧ್ಯಾನಗಳನ್ನು ಮಾಡಿ, ಮಲಗುವಾಗ ಶುಭ್ರವಾದ ಬಟ್ಟೆ ಮತ್ತು ಹಾಸಿಗೆ ಇರಲಿ. ಯಾವ ವಿಷಯದ ಕುರಿತು ಹೆಚ್ಚು ದೀರ್ಘವಾದ ಆಲೋಚನೆಗಳು ಬೇಡ. ಒಂದು ಸಲ ಮಾನಸಿಕ ತಜ್ಞರನ್ನು ಭೇಟಿ ಮಾಡಿ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ.