ಪಾಟ್ನಾ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್, ತಮ್ಮ ತಾಯಿಯ ಸಾವಿನ ನಂತರ ತಲೆ ಬೋಳಿಸಿಕೊಳ್ಳದ ಕಾರಣ ಅವರು ಹಿಂದೂ ಅಲ್ಲ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ದ್ವೇಷವನ್ನು ಹರಡುತ್ತಿದ್ದಾರೆ ಮತ್ತು ಅವರಿಗೆ ಕುಟುಂಬವಿಲ್ಲದ ಕಾರಣ ‘ಪರಿವಾರ್ವಾದ್’ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಆರ್ಜೆಡಿ ಮುಖ್ಯಸ್ಥರು ಆರೋಪಿಸಿದರು.
ಮೋದಿ ಹಿಂದೂ ಅಲ್ಲ. ಪ್ರತಿಯೊಬ್ಬ ಹಿಂದೂ ತನ್ನ ತಾಯಿಯ ಮರಣದ ನಂತರ ತಲೆ ಬೋಳಿಸಿಕೊಳ್ಳುತ್ತಾನೆ. ಆದರೆ ಮೋದಿ ತಲೆ ಬೋಳಿಸಿಕೊಳ್ಳುವುದಿಲ್ಲ. ಅವರು ಏಕೆ ಕ್ಷೌರ ಮಾಡಲಿಲ್ಲ? ನನಗೆ ಹೇಳಿ ಎಂದು ಹೇಳಿದರು.
ವಂಶಪಾರಂಪರ್ಯ ರಾಜಕಾರಣದ ವಿರುದ್ಧ ವಾಗ್ದಾಳಿ ನಡೆಸಿದ ಲಾಲು ಯಾದವ್, ಪ್ರಧಾನಿ ಮೋದಿ ಅವರಿಗೆ ಮಕ್ಕಳಿಲ್ಲ ಏಕೆ ಎಂದು ಪ್ರಶ್ನಿಸಿದರು. ಪ್ರಧಾನಿ ಮೋದಿಗೆ ಕುಟುಂಬವಿಲ್ಲ ಮತ್ತು ಹಿಂದೂ ಕೂಡ ಅಲ್ಲ ಎಂದರು.
ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೀಡಿಯೊದಲ್ಲಿ, ಲಾಲು ಪ್ರಸಾದ್ ಯಾದವ್ ಅವರು ಸಭೆಯನ್ನುದ್ದೇಶಿಸಿ ಮಾತನಾಡುವಾಗ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸುತ್ತಿರುವುದನ್ನು ಕಾಣಬಹುದು.
ಅವರು “ಏನು ಮೋದಿ? ನೀವು ಏನು ಮಾಡುತ್ತೀರಿ? ಯೇ ನರೇಂದ್ರ ಮೋದಿ ಪರಿವಾರವಾದ್ ಪರ್ ಹಮ್ಲಾ ಕರ್ ರಾ ಹೈ. ತುಮ್ ಬಟಾವೊ ತುಮ್ಕೊ ಕ್ಯು ಕೋಯಿ ಸಂತಾನ್ ನಹೀ ಹುವಾ. ಜ್ಯಾದಾ ಸಂತಾನ್ ಹೋನೆ ವಾಲೆ ಲೋಗನ್ ಕೋ ಬೋಲ್ಟಾ ಹೈ ಕಿ ಪರಿವಾರ್ ಹೈ, ಪರಿವಾರ್ ಕೆ ಲೈ ಯೆ ಲಾಗ್ ಲಾಡ್ ರೇ ಹೈ ಎಂದಿದ್ದಾರೆ.
Lalu Prasad Yadav cornered Narendra Modi on familyism and false Hindutva.
Lalu Prasad Yadav got kidney transplant, he was sent behind the bars, had to face ED and CBI.
This person is still fighting BJP with the same passion and said that he will not stoop against communalism. pic.twitter.com/kZejUhynUn
— Gautam Nautiyal (@Gnukpcc) March 3, 2024
“ತುಮ್ ಹಿಂದೂ ಭಿ ನಹೀ ಹೈ” ಎಂದು ಹೇಳಿದ ಅವರು, ಪ್ರತಿಯೊಬ್ಬ ಹಿಂದೂ ತನ್ನ ತಾಯಿ ತೀರಿಕೊಂಡ ನಂತರ ತಲೆ ಬೋಳಿಸಿಕೊಳ್ಳುತ್ತಾನೆ. ಆದರೆ ಪ್ರಧಾನಿ ಮೋದಿ ಹಾಗೆ ಮಾಡಲಿಲ್ಲ ಎಂದು ಹೇಳಿದರು. ಇ
ದಲ್ಲದೆ, ಪ್ರಧಾನಿ ಮೋದಿ ದೇಶಾದ್ಯಂತ ದ್ವೇಷವನ್ನು ಹರಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.