ಬೆಂಗಳೂರು: ನಗರದ ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣ ಸಂಬಂಧ ಸಿಸಿಬಿಯಿಂದ ಇಂದು ಸ್ಥಳ ಮಹಜರು ನಡೆಸಲಾಯಿತು. ಈ ಮೂಲಕ ಸ್ಪೋಟಕ ಪ್ರಕರಣ ಸಂಬಂಧ ಮಹತ್ವದ ತನಿಖೆಯನ್ನು ಕೈಗೊಂಡಿದ್ದಾರೆ.
ಬೆಂಗಳೂರಿನ ಕುಂದಲಹಳ್ಳಿ ಬಳಿಯ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟಕ ಪ್ರಕರಣ ಘಟನೆಯಲ್ಲಿ 10 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ವಿವಿಧ ರಾಜಕೀಯ ನಾಯಕರು ಗಾಯಾಳುಗಳನ್ನು ಭೇಟಿಯಾಗಿ ಸಂತೈಸಿದ್ದರು. ರಾಜ್ಯ ಸರ್ಕಾರದಿಂದ ಗಾಯಾಳುಗಳ ಚಿಕಿತ್ಸೆ ಭರಿಸುವುದಾಗಿ ಘೋಷಣೆ ಕೂಡ ಮಾಡಲಾಗಿತ್ತು.
ಇಂದು ಸಿಸಿಬಿಯ ತನಿಖಾಧಿಕಾರಿ ನವೀನ್ ಕುಲಕರ್ಣಿಯವರ ನೇತೃತ್ವದ ತಂಡವು ರಾಮೇಶ್ವರಂ ಕೆಫೆಯ ಮ್ಯಾನೇಜರ್, ಸಿಬ್ಬಂದಿಯ ಸಮ್ಮುಖದಲ್ಲಿ ಸ್ಥಳ ಮಹಜರು ನಡೆಸಿದೆ. ಈ ಮೂಲಕ ಸಿಸಿಬಿ ಟೀಂ ನಿಂದ ಸ್ಥಳ ಮಹಜರು ನಡೆಸಲಾಗಿದೆ.
WTC – ಮತ್ತೆ ನಂ.1 ಸ್ಥಾನಕ್ಕೆ ಜಿಗಿದ ಭಾರತ – ಹಿಟ್ಮ್ಯಾನ್ ರೋಹಿತ್ ನಾಯಕತ್ವಕ್ಕೆ ಮೆಚ್ಚುಗೆ!
BIG UPDATE: ‘ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ’ ಪ್ರಕರಣ: ‘2 ಕೆಮಿಕಲ್’ ಬಳಸಿ ಸ್ಪೋಟ, FSL ತನಿಖೆಯಲ್ಲಿ ಪತ್ತೆ